ಫೆ.3 ರಂದು ಮುಸ್ಲಿಂ ನೌಕರರ ಸಭೆ
ಬೀದರ್: ಜಿಲ್ಲೆಯ ಪ್ರಥಮ ದರ್ಜೆ, ದ್ವಿತೀಯ ಹಾಗೂ ತೃತೀಯ ದರ್ಜೆಯ ಮುಸ್ಲಿಂ ಸರ್ಕಾರಿ, ಅನುದಾನಿತ ನೌಕರರ ಸಭೆಯನ್ನು ಫೆ. 3ರಂದು ಬೆಳಗ್ಗೆ 10.30ಕ್ಕೆ ನಗರದ ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ (ಹಳೆ ಸರ್ಕಾರಿ ಆಸ್ಪತ್ರೆ ಎದುರು) ಕರೆಯಲಾಗಿದೆ. ಈ ಕುರಿತು ಮುಸ್ಲೀಂ ಕಾರ್ಮಿಕರ ಸಾಂಸ್ಕೃತಿಕ ಸಂಘಟನೆ (ಎಂಇಸಿಎ) ಸಂಚಾಲಕ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಮಹಮ್ಮದ್ ಮೊಯೀನ್ ಪಾಶಾ ಪ್ರಕಟಣೆ ಹೊರಡಿಸಿದ್ದಾರೆ. ಸಭೆಯಲ್ಲಿ ಮುಸ್ಲಿಂ ಕಾರ್ಮಿಕರ ಸಾಂಸ್ಕೃತಿಕ ಸಂಘಟನೆ (ಎಂಇಸಿಎ) ನೂತನ ಪದಾಧಿಕಾರಗಳ ಆಯ್ಕೆ ಹಾಗೂ ಕಾರ್ಯಕಾರಣಿ ಮಂಡಳಿ ನೇಮಕಾತಿ ಮಾಡಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಮುಸ್ಲಿಂ ನೌಕರರು ಸಭೆಗೆ ಹಾಜರಾಗಲು ಕೋರಿದ್ದಾರೆ.
ನಾಳೆ ವಸತಿ ರದ್ದತಿಗೆ ಆಗ್ರಹಿಸಿ ಧರಣಿ
ಬೀದರ್ ತಾಲೂಕಿನ ಬಗದಲ್ ಗ್ರಾಮ ಪಂಚಾಯತ್ನಲ್ಲಿ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ 143 ಮನೆಗಳು ಮಂಜೂರಾಗಿದ್ದು ಅದರಲ್ಲಿ 109 ಮನೆಗಳು ಒಂದೇ ಕೋಮಿಗೆ ಸೇರಿದ ಜನಾಂಗಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಫೆ. 1ರಂದು ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಕುರಿತು ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಾಜಿ ತಾಪಂ ಸದಸ್ಯ ರಾಜಕುಮಾರ ಬಗದಲ್ಕರ್, ಸಿದ್ರಾಮ ಬಗದಲ್, ಕಂಟೆಪ್ಪ ಸಿರಗಾನೋರ್, ರಘುನಾಥ ಬಗದಲ್ಕರ ಮತ್ತಿತರರು ಮನವಿಯಲ್ಲಿ 2012-13ನೇ ಸಾಲಿನಲ್ಲಿ ಗ್ರಾಪಂಗೆ ಇಂದಿರಾ ಆವಾಜ್ ಯೋಜನೆಯಲ್ಲಿ 143 ಮನೆಗಳು ಮಂಜೂರಾಗಿದ್ದರೂ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿನ ಪಿಡಿಓ ಹಾಗೂ ನೋಡಲ್ ಅಧಿಕಾರಿಗಳು ಇಲ್ಲಿ ಎಸ್ಸಿ (ಬಲ) ಹಾಗೂ ಎಸ್ಸಿ (ಎಡ) ವರ್ಗಕ್ಕೆ ಕೇವಲ ಒಂದೆ ಮನೆ ಹಂಚಿಕೆ ಮಾಡಿ ಲಮಾಣಿ ಜಾತಿಗೆ 109 ಮನೆಗಳು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ. ತಯಾರಿಸಲಾದ ಪಟ್ಟಿಯಲ್ಲಿ ಲಂಬಾಣಿ ಜನಾಂಗದ ಆಯ್ಕೆ ಪಟ್ಟಿಯಲ್ಲಿ ಸರ್ಕಾರಿ ನೌಕರರ ಪತ್ನಿಯರ ಹೆಸರಿನಲ್ಲಿ ಮನೆಗಳು ಮಂಜೂರಾಗಿರುತ್ತವೆ. ಆದ್ದರಿಂದ ಕೂಡಲೆ ಸದರಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ನೈಜ ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡುವಂತೆ ಆಗ್ರಹಿಸಿ ಫೆ. 1ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದೇಗುಲದಲ್ಲಿ ಕಳ್ಳತನ
ಹುಮನಾಬಾದ್: ತಾಲೂಕಿನ ಕರಕನಳ್ಳಿಯ ಬಕ್ಕಮಪ್ರಭು ದೇವಸ್ಥಾನದಲ್ಲಿನ ಒಡವೆಗಳನ್ನು ಕಳವು ಮಾಡಿರುವ ಪ್ರಕರಣ ಬುಧವಾರ ಸಂಭವಿಸಿದೆ. ಬುಧವಾರ ನಸುಕಿನ ಜಾವದಲ್ಲಿ ಕಳ್ಳರು ಬಕ್ಕಮಪ್ರಭು ದೇವಸ್ಥಾನಕ್ಕೆ ನುಗ್ಗಿ ಬೆಳ್ಳಿಯ ಆಭರಣಗಳು, ಚಿಕ್ಕದಾದ ಹುಂಡಿ ತಗೆದುಕೊಂಡು ಪರಾರಿಯಾಗಿದ್ದಾರೆ.ಅಂದಾಜು # 25 ಸಾವಿರ ಮೌಲ್ಯದ ಒಡವೆ, ನಗದು ಕಳವಾಗಿದೆ ಎನ್ನಲಾಗಿದೆ.ದೇವಸ್ಥಾನ ಕಾರ್ಯದರ್ಶಿ ದೂರಿನ ಮೇರೆಗೆ ಭೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

