ಪ್ರಾದೇಶಿಕ ಪಕ್ಷಗಳ ಯುಗಾರಂಭ
ಬೀದರ್: ಭಾರತದಲ್ಲಿ ಈಗ ಪ್ರಾದೇಶಿಕ ಪಕ್ಷಗಳ ಯುಗ ಪ್ರಾರಂಭವಾಗಿದ್ದು ಪ್ರಾದೇಶಿಕ ಪಕ್ಷಗಳಿಂದಲೇ ರಾಜ್ಯಗಳ ಅಭಿವೃದ್ಧಿ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷ ಬೆಂಬಲಿಸುವಂತೆ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಮನವಿ ಮಾಡಿದರು.
ಮನ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ಜನತಾ ಪಕ್ಷದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪ್ರಾದೇಶಿಕ ಪಕ್ಷವಾಗಿರುವ ಕೆಜೆಪಿಗೆ ಉಜ್ವಲ ಭವಿಷ್ಯವಿದೆ ಎಂದರು.
ಬಿಎಸ್ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಜಾರಿಗೆ ಬಂದಿರುವ ಜನಸ್ನೇಹಿ ಯೋಜನೆಗಳು ಮುಂಬರುವ ಚುನಾವಣೆಯಲ್ಲಿ ನಮಗೆಲ್ಲ ಶ್ರೀರಕ್ಷೆ ಎಂದ ಅವರು ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ ಬಾಂಡ್, ವಿಧವಾ ವೇತನ, ವೃದ್ಧಾಪ್ಯ ವೇತನ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ರೈತರ ಸಾಲ ಮನ್ನಾ ಹೀಗೆ ಹತ್ತು ಹಲವು ಯೋಜನೆಗಳು ಬಿಎಸ್ವೈ ಸಾಧನೆಯಾಗಿದೆ ಎಂದರು.
ಜೀವನ ಮುಡಿಪು: ಮುಖ್ಯ ಅತಿಥಿಗಳಾಗಿ ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಾನು ಮಧ್ಯಮ ವರ್ಗದಿಂದ ಬಂದವನಾಗಿದ್ದು, ದೀನ ದಲಿತರ ಹಾಗೂ ಯುವಕರ ಮತ್ತು ಸಮಾಜದ ಎಲ್ಲಾ ಧರ್ಮಗಳ ಸೇವೆಗೆ ನನ್ನ ಜೀವನ ಮುಡುಪಾಗಿಟ್ಟಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ಕಣಜಿ, ಎನ್ಎಸ್ಎಸ್ಕೆ ನಿರ್ದೇಶಕ ಘಾಳೆಪ್ಪ ಚಟ್ಟನಳ್ಳಿ, ಹಣಮಂತ ಪಾಟೀಲ್ ಬೆನ್ನಳ್ಳಿ, ಶ್ರೀನಿವಾಸ ಪತ್ತಾರ, ಶಿವಶರಣಪ್ಪ ತಗಾರೆ ಭಂಗೂರ, ಜಗನಾಥ ಪಾಟೀಲ್ ಸಿರಕನ್ನಳ್ಳಿ, ಪ್ರಹ್ಲಾದ್ ಪಾಟೀಲ್ ಮನ್ನಳ್ಳಿ, ಮಖಬುಲ್ಮಿಯ್ಯಾ, ಭಾಸಕರ ಕೋಟೆ ಮನ್ನಳ್ಳಿ, ತುಕಾರಾಮ ಪಂಚಬಾಯಿ, ಪ್ರೇಮಸಿಂಗ್ ಪವಾರ ಇದ್ದರು.
ಬೀದರ್ (ದಕ್ಷಿಣ) ಕ್ಷೇತ್ರದ ಕೆಜಿಪಿ ಮನ್ನಳ್ಳಿ ವಲಯದ ಕಾರ್ಯಕರ್ತರ ಸಮಾವೇಶದಲ್ಲಿ ವಿವಿಧ ಗ್ರಾಮಗಳಿಂದ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಗುರುಪಾದಪ್ಪ ನಾಗಮಾರಪಳ್ಳಿ ಅವರ ಸಮ್ಮುಖದಲ್ಲಿ ಸೇರಿಕೊಂಡಿದ್ದಾರೆ ಎಂದು ಕೆಜೆಪಿ ಮುಖಂಡರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

