ಬೀದರ್

ನಿರಂತರ ಕಾಯಕದಿಂದ ಕಾರ್ಯಕ್ಷಮತೆ

Published On :




ಭಾಲ್ಕಿ: ನಮ್ಮಲ್ಲಿಯ ಅಂತಃಶಕ್ತಿಯನ್ನು ಬಡಿದೆಬ್ಬಿಸಬಲ್ಲ ಪ್ರಬಲ ಸಾಧನವೇ ಕಾರ್ಯಶೀಲತೆ. ಸಮಾಜದಲ್ಲಿ ಎಲ್ಲರೂ ಕಾರ್ಯಶೀಲರಾದರೆ ಅಭಿವೃದ್ಧಿ ಎಲ್ಲೆಡೆ ಹರಡುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
 ತಾಲೂಕಿನ ಧನ್ನೂರಾ ಗ್ರಾಮದಲ್ಲಿ ಲಿಂ. ಸುಲೋಚನಾ ತಿಪ್ಪರಗಿ ಅವರ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾಯಕ ಮಾಡುತ್ತಾ ಹೋದಂತೆ ಕಾರ್ಯಕ್ಷಮತೆ ಹೆಚ್ಚುತ್ತದೆ. ಕಾಯಕ ಯಾವುದೆನ್ನುವುದು ಮುಖ್ಯವಲ್ಲ, ಅದನ್ನು ಮೈಗೂಡಿಸಿಕೊಂಡಲ್ಲಿ ಸಾರ್ಥಕತೆ ದೊರೆತ್ತದೆ ಎಂದರು.
ಸಮಾಜಮುಖಿ ಕಾರ್ಯ: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವಾಮಿನಾಥ ಸ್ವಾಮಿ ಮಾತನಾಡಿ, ಸ್ಮರಣೋತ್ಸವದಂದು ಸಮಾಧಿಗೆ ನೈವೆದ್ಯ ತೋರಿ ಕೆಲವರಿಗೆ ಊಟ ನೀಡುವುದನ್ನು ನೋಡಿದ್ದೆ. ಆದರೆ ತಿಪ್ಪರಗೆ ಪರಿವಾರದವರು ತಾಯಿಯ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಗ್ರಾಮದ ಬಡವರು, ಆರೋಗ್ಯ ತೊಂದರೆಯುಳ್ಳವರು ಇದರ ಸದುಪಯೋಗ ಪಡೆಯುತ್ತಿದ್ದಾರೆ, ಇದೊಂದು ಆದರ್ಶ ಮತ್ತು ಅನುಕರಣೀಯ ಎಂದರು.
ಆತ್ಮ ವಿಶ್ವಾಸ ತುಂಬಿದರು: ಅತಿಥಿಗಳಾಗಿ ಗುಲ್ಬರ್ಗದ ಡಾ.ಪ್ರಭಾಕರ ತೌರವಿ ಮಾತನಾಡಿ, ಅಕ್ಕ ಸುಲೋಚನಾ ತಿಪ್ಪರಗಿ ಅವರು ನಗುನಗುತ್ತಾ ಬದುಕು ನಡೆಸಿದ್ದವರು. ಎಂತಹ ಸಮಸ್ಯೆಗಳು ಬಂದರೂ ಎದೆಗುಂದದೆ ಆತ್ಮ ವಿಶ್ವಾಸದಿಂದ ಕೆಲಸ ಮಾಡುವ ಸಾಮರ್ಥ್ಯವುಳ್ಳವರಾಗಿದ್ದರು.
 ಅವರ ಮಕ್ಕಳು ಸುಶಿಕ್ಷಿತರು, ಸುಸಂಸ್ಕೃತರು ಆಗಿರುವುದನ್ನು ನೋಡಿದರೆ ಅವರ ಕುಟುಂಬದ ನಿರ್ವಹಣಾ ಶಕ್ತಿಯ ಅರಿವು ನಮಗಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ. ಪ್ರಭಾಕರ ತೌರವಿ, ಡಾ.ಸುವರ್ಣಾ ಪ್ರಭಾಕರ, ಡಾ.ಸರೋಜನಿ ತಿಪ್ಪರಗೆ, ಡಾ.ಸುನೀಲ ತಿಪ್ಪರಗೆ ಇವರು ಉಚಿತ ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ ದಾನಿ, ತಾಪಂ ಸದಸ್ಯ ಕಲ್ಲಪ್ಪಾ ಮೇತ್ರೆ, ಚಂದ್ರಶೇಖರ ಗಾದಗಿ, ಸಿದ್ದು ಕಾಡೋದೆ, ರಾಜಕುಮಾರ ಗಾದಗೆ, ಶಿವಕುಮಾರ ಖಂಡ್ರೆ, ಅನಿಲಕುಮಾರ ತಿಪ್ಪರಗೆ, ದಯಾನಂದ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.