ವಿದ್ಯಾರ್ಥಿಗಳ ಆಕ್ರೋಶ
ಬೀದರ್: ಸ್ಥಳೀಯ ಸರ್ಕಾರಿ ತೋಟಗಾರಿಕೆ ಮಹಾವಿದ್ಯಾಲಯ ಬಾಗಲಕೋಟದಿಂದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಬಂದ ಡಿಎಸ್ಡಬ್ಲ್ಯೂ ಡಾ. ರಾಜು ಅವರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮಹಾವಿದ್ಯಾಲಯದ ವಸತಿ ನಿಲಯದಿಂದ ವಿದ್ಯಾರ್ಥಿಯೊಬ್ಬ ಬಿದ್ದ ಪರಿಣಾಮ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದ ಕಾಲೇಜಿನ ಡೀನ್ ಮತ್ತು ವಸತಿ ನಿಲಯದ ಪಾಲಕರಾದ ಆನಂದ ಪಾಟೀಲ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಬಿವಿಪಿಯ ಜಿಲ್ಲಾ ಸಂಚಾಲಕ ಅಶೋಕ ಶೆಂಬೆಳ್ಳಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಡಾ. ರಾಜು ಅವರು ಸಮಸ್ಯೆಗಳ ಕುರಿತು ವಿಚಾರಣೆ ನಡೆಸಿ 10 ದಿನದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿನಾಯಕ ದೇಶಪಾಂಡೆ, ಪುಷ್ಪಕ ಜಾಧವ, ದಿಲೀಪ ಪಾಂಚಾಳ, ಅಭಿಷೇಕ ಪಾಟೀಲ್ ಸಾಗರ ಪಾಠಕ ಇದ್ದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಬೀದರ್: ಚಿತ್ರದುರ್ಗದಲ್ಲಿ ಇತ್ತೀಚೆಗೆ ಸಿರಿಗನ್ನಡ ಪ್ರತಿಭಾ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದ ಭಾಲ್ಕಿ ತಾಲೂಕಿನ ಜ್ಯಾಂತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಯಿತು. ನವೆಂಬರ್ ತಿಂಗಳಲ್ಲಿ ನಡೆದ 2012ನೇ ಸಾಲಿನ ಪರೀಕ್ಷೆಯಲ್ಲಿ ಶಾಲೆಯ ವೈಶಾಲಿ ಜಿಲ್ಲಾ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆದರೆ ಅಂಬಿಕಾ 5ನೇ ರ್ಯಾಂಕ್ ಹಾಗೂ ಭಾಗ್ಯವಂತಿ ತಾಲೂಕು ಮಟ್ಟದಲ್ಲಿ 3ನೇ ರ್ಯಾಂಕ್ ಹೀಗೆ ಒಟ್ಟು 32 ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದಿದ್ದರು ಎಂದು ಶಾಲೆಯ ಮುಖ್ಯಗುರುಗಳು ತಿಳಿಸಿದ್ದಾರೆ. ಪರೀಕ್ಷೆಯ ಮಾರ್ಗದರ್ಶಿ ಶಿಕ್ಷಕರಾದ ಎಂ.ಎಸ್. ಮನೋಹರ್ ಅವರಿಗೆ ಗಣರಾಜ್ಯೋತ್ಸವದಂದು 'ಕನ್ನಡ ರತ್ನ' ಪ್ರಶಸ್ತಿ ಹಾಗೂ ಪದಕ ನೀಡಿ ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದ ಸಿರಿಗನ್ನಡ ಪ್ರಕಾಶನ ಅವರಿಗೆ ಎಸ್ಡಿಎಂಸಿ ಅಧ್ಯಕ್ಷ ಸುರೇಶ ಚಿಕಲಚಂದಾ, ಸದಸ್ಯರಾದ ಬಸಪ್ಪ ಎಲ್, ಮುಖ್ಯಗುರು ಶ್ರೀಪಾಲ, ಅಬ್ದುಲ್ ಗನಿ, ಶರಣಪ್ಪ, ವೀರಶೆಟ್ಟಿ ಅಬ್ದುಲ್ ಶಕೀಲ್ ಪವನ ಲೀಲಾವತಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಿಂಧ್ಯಾ ನಾಳೆ ನಗರಕ್ಕೆ
ಯಾದಗಿರಿ: ಹಿಂದುಳಿದ ವರ್ಗಗಳ ಸಂಘಟನೆಯ ದೃಷ್ಟಿಯಿಂದ ಜ.31ರಂದು ಜೆಡಿಎಸ್ ಕಾರ್ಯಾಧ್ಯಕ್ಷ ಪಿಜಿಆರ್ ಸಿಂದ್ಯಾ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ವಕ್ತಾರ ಬಸವರಾಜ ಚಂಡ್ರಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

