ವೀರಭದ್ರೇಶ್ವರ ರಥೋತ್ಸವ ವೈಭವ
ಹುಮನಾಬಾದ್: ಹೈದ್ರಾಬಾದ್ ಕರ್ನಾಟಕ ಭಾಗದ ಪ್ರಸಿದ್ಧ ಐತಿಹಾಸಿಕ ಸುಕ್ಷೇತ್ರ ವೀರಭದ್ರೇಶ್ವರ ರಥೋತ್ಸವವು ಅಪಾರ ಭಕ್ತ ಸಮೂಹದ ಮಧ್ಯ ಶ್ರದ್ಧಾ ಭಕ್ತಿಯಿಂದ ಭಾನುವಾರ ಜರುಗಿತು.
ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದರು. ರಥೋತ್ಸವದುದ್ದಕ್ಕೂ ಹರಹರ ಮಹಾದೇವ ಜಯ ಘೋಷಗಳು ಮುಗಿಲು ಮುಟ್ಟಿದ್ದವು. ಶನಿವಾರ ಸಂಜೆ ದೇವಸ್ಥಾನದಿಂದ ಪ್ರಾರಂಭಗೊಂಡ ದೇವರ ಪಲ್ಲಿಕ್ಕಿ ಉತ್ಸವವು ಥೇರ್ ಮೈದಾನಕ್ಕೆ ಭಾನುವಾರ 11ರ ಸುಮಾರಿಗೆ ಆಗಮಿಸಿತು. ಥೇರ್ ಮೈದಾನದಲ್ಲಿ ರಥೋತ್ಸವ ಪ್ರಾರಂಭಗೊಂಡು, ಖಾರೀಕು, ಬದಾಮು, ಪೇಡಾ, ಬಾಳೆಹಣ್ಣು ಬೆಂಡು ಭತಾಸ್, ನಾಣ್ಯ ಮುಂತಾದವುಗಳನ್ನು ರಥಕ್ಕೆ ಎರೆದು ಹರಕೆ ತೀರಿಸಿಕೊಳ್ಳುವುದನ್ನು ಕಾಣಬಹುದಾಗಿತ್ತು.
ದರ್ಶನ: ದೇವರ ಪಲ್ಲಿಕ್ಕಿ ಉತ್ಸವ ಆಗಮಿಸುವುದು ಕೊಂಚ ತಡವಾದರೂ ರಥೋತ್ಸವ ವೀಕ್ಷಣೆಗೆ ಲಕ್ಷಾಂತರ ಭಕ್ತ ಸಮೂಹ ಕುತೂಹಲದಿಂದ ಕಾಯ್ದು ವೀಕ್ಷಿಸಿದರು. ರಥೋತ್ಸವ ವೀಕ್ಷಿಸಲು ವಿಶಾಲ ಕಟ್ಟಡದ ಮೇಲ್ಛಾವಣಿ, ಎತ್ತರೆತ್ತರದ ಕಟ್ಟಡಗಳ ಮೇಲೆ ನಿಂತು ವೀಕ್ಷಿಸುವುದು ಸಾಮಾನ್ಯವಾಗಿತ್ತು. ಬೆಳಗಿನ ಜಾವ ಮದ್ದುಗಳ ಹಾರಾಟ ಬಣ್ಣ ಬಣ್ಣದ ಓಕಳಿ, ಬಾನಂಗಳಕ್ಕೆ ಹಾರಿದವು. ಮದ್ದುಗಳ ಸದ್ದಿಗೆ ಪಟ್ಟಣ ಗದರಿದಂತೆ ಕಂಡುಬಂತು. ಬಣ್ಣದ ಚಿತ್ತಾರಗಳ ನೋಟ ಲಕ್ಷಾಂತರು ಭಕ್ತರ ಕಣ್ಮನ ಸೆಳೆದವು.
ಬಿಗಿ ಬಂದೋಬಸ್ತ್: ಪಟ್ಟಣದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಪಟ್ಟಣದ ಯಾವುದೇ ಮೂಲೆಯಿಂದಲೂ ವಾಹನಗಳಿಗೆ ಪ್ರವೇಶ ನೀಡದೇ ಎಲ್ಲರೂ ಕಾಲ್ನಡಿಗೆಯಲ್ಲಿಯೇ ರಥೋತ್ಸವ, ದೇವಸ್ಥಾನಕ್ಕೆ ತೆರಳುವಂತೆ ಮಾಡಿ ಯಾವುದೇ ಅಡಚಣೆ ದೂರವಿರುವಂತೆ ಮಾಡಿದ್ದು ಭಕ್ತಾದಿಗಳು ಸಂತೋಷದಿಂದ ಜಾತ್ರಾ ಮಹೋತ್ಸವ ನೋಡುವಂತಾಯಿತು ಎಂದು ಮಹಾರಾಷ್ಟ್ರ ಸೋಲಾಪುರದ ಚಂದ್ರಕಾಂತ ನಿಲಂಗೆಕರ್, ಪಾರ್ವತಿ ಮ್ತತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಂದೊಬಸ್ತ್: ಈ ಬಾರಿಯ ಪೊಲೀಸ್ ಬಂದೊಬಸ್ತ್ ಜನ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿ ದೇವರ ದರ್ರ್ಶನ ಮಾಡಿಸುವಲ್ಲಿಯೂ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್, ಶಾಸಕ ರಾಜಶೇಖರ ಪಾಟೀಲ್, ದೇವಸ್ಥಾನ ಸಮಿತಿ ಗೌರವ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ವೀರಣ್ಣ ಪಾಟೀಲ್, ತಹಸೀಲ್ದಾರ್ ಲಕ್ಷ್ಮಣರಾವ್, ಬಸವರಾಜ ಆರ್ಯ, ಲಕ್ಷ್ಮಿಣರಾವ ಬುಳ್ಳಾ, ಪ್ರಭು ತಾಳಮಡಗಿ, ಶರಣಪ್ಪ ಪಾಟೀಲ್, ಡಾ. ಚಂದ್ರಶೇಖರ ಪಾಟೀಲ್, ನಾಗೇಶ ಕಲ್ಲೂರು, ದತ್ತಕುಮಾರ ಚಿದ್ರಿ, ಮಲ್ಲಿಕಾರ್ಜುನ ಮಾಶೆಟ್ಟಿ, ಸುಭಾಷ ಆರ್ಯ, ರಾಜು ಮಾಲಿಪಾಟೀಲ್, ವಿನಾಯಕ ಯಾದವ್, ಗಿರೀಶ ಪಾಟೀಲ್, ನಾರಾಯಣರಾವ ಚಿದ್ರಿ, ವಿಜಯಕುಮಾರ ದುರ್ಗದ, ಶಿವಾನಂದ ಮಂಠಾಳಕರ, ಮಹೇಶ ಅಗಡಿ. ಮಲ್ಲಿಕಾರ್ಜುನ ವಾರದ್, ಬಾಬುರಾವ್ ಪೊಚಂಪಳ್ಳಿ, ಶರಣಪ್ಪ ರಚಟೆ, ಸುಭಾಷ ಕಮಲಾಪುರ, ರವಿ ಮಾಡಗಿ ಹಾಗೂ ನೀಲಕಂಠ ಸ್ವಾಮಿ ಸೇರಿದಂತೆ ಮತ್ತಿತರರು ಪಾಲಗೊಂಡಿದರು.
ಡಿವೈಎಸ್ಪಿ ಅಮರನಾಥ ರೆಡ್ಡಿ, ಸಿಪಿಐ ಅನಿಲಕುಮಾರ, ಶಿವಾನಂದ ಪವಾಡ ಶೆಟ್ಟಿ, ಪಿಎಸ್ಐ ಮಲ್ಲಿಕಾರ್ಜುನ ಬಂಡೆ, ಜೆಎಸ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ, ಕೆಎಸ್ಆರ್ಪಿ, ಡಿಆರ್ ತುಕಡಿಗಳ ಮೂಲಕ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

