ಪತ್ನಿ ಸಾವು; ಪತಿಗೆ 2 ವರ್ಷ ಸಜೆ
ಬೀದರ್: ಪತ್ನಿಯ ಆತ್ಮಹತ್ಯೆಗೆ ಕಾರಣನಾದ ಬಿಎಸ್ಎನ್ಎಲ್ ನೌಕರ ಸೋಲಪುರ ಗ್ರಾಮದ ಕಲ್ಲಪ್ಪ ಎಂಬುವವನಿಗೆ 2ವರ್ಷದ ಸಾದಾ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಚಾಂಬೋಳ ಗ್ರಾಮದ ಹೇಮಲತಾ ಎಂಬ ಮಹಿಳೆಯನ್ನು ಕಲ್ಲಪ್ಪ ಮದುವೆಯಾಗಿದ್ದು, 2 ಲಕ್ಷ ನಗದು, 5 ತೊಲೆ ಬಂಗಾರ, 50 ಸಾವಿರ ಮೌಲ್ಯದ ಗೃಹ ಉಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದಲ್ಲದೆ ಗಂಡು ಮಕ್ಕಳು ಜನಿಸಿಲ್ಲ ಎಂದು ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದು ಇದನ್ನು ಸಹಿಸದೇ ಹೇಮಲತಾ ನೇಣು ಬಿಗಿದುಕೊಂಡು ಕಳೆದ 2011ರ ಡಿಸೆಂಬರ್ 6ರಂದು ಮೃತಪಟ್ಟಿದ್ದಳು.
ಹೇಮಲತಾ ತಂದೆ ಬಿಚ್ಚಪ್ಪಾ ಅವರು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಿಎಸ್ಐ ಶ್ರೀನಿವಾಸ ಅಲ್ಲಾಪುರೆ ಪ್ರಕರಣವನ್ನು ದಾಖಲಿಸಿ ಕೊಂಡಿದ್ದರು. ಸಿಪಿಐ ಬಸವರಾಜ ತೇಲಿ ತನಿಖೆ ಮುಗಿಸಿ ಆಪಾದಿತನ ವಿರುದ್ಧ ಆಪಾದನೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾದ ಡಾ. ಶಶಿಕಲಾ ಉರಣಕರ ಅವರು ಅಪಾದಿತನು ತಪ್ಪಿತಸ್ಥನೆಂದು ತೀರ್ಮಾನಿಸಿ ಆಪಾದಿತನಿಗೆ 2 ವರ್ಷ ಕಾಲಾವಧಿಯ ಸಾದಾ ಕಾರಾಗೃಹ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರು ರಾಮಚಂದ್ರ ಲಮಾಣಿ ವಾದ ಮಂಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

