ಭವಿಷ್ಯದಲ್ಲಿ ಜೈವಿಕ ಇಂಧನ ಅನಿವಾರ್ಯ
ಬೀದರ್: ಮುಂಬರುವ ದಿನಗಳಲ್ಲಿ ಜೈವಿಕ ಇಂಧನ ಅನಿವಾರ್ಯವಾಗಲಿದ್ದು, ಇಂದಿನಿಂದಲೇ ಈ ಕುರಿತು ಮಾಹಿತಿ ಪಡೆಯುವುದು ಅವಶ್ಯಕ ಎಂದು ಕೃಷಿ ವಿಜ್ಷಾನ ಕೇಂದ್ರದ ಮುಖ್ಯಸ್ಥ ಡಾ. ರವಿ ದೇಶಮುಖ ನುಡಿದರು.
ಅವರು ಕೃಷಿ ವಿಜ್ಷಾನ ಕೇಂದ್ರದ ಆವರಣದಲ್ಲಿರುವ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದಿಂದ ತಾಲೂಕಿನ ಶಹಾಪೂರ ಗ್ರಾಮದಲ್ಲಿ ಜೈವಿಕ ಇಂಧನ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿ, ಹೊಂಗೆ ಬೀಜಗಳಿಂದ ತೆಗೆದ ಎಣ್ಣೆ ಜೈವಿಕ ಇಂಧನಕ್ಕೆ ಬಳಸಿದರೆ ಅದರ ಹಿಂಡಿ ಕೃಷಿಯಲ್ಲಿ ಗೊಬ್ಬರ ಹಾಗೂ ಕೀಟನಾಶಕವಾಗಿಯೂ ಬಳಸಿಕೊಳ್ಳಬಹುದೆಂದು ತಿಳಿಸಿದರು.
ಕಡಿಮೆ ದರ: ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಮಲ್ಲಿಕಾರ್ಜುನ ನಿಂಗದಳ್ಳಿ ಜೈವಿಕ ಇಂಧನದ ಅವಶ್ಯಕತೆ, ಅವಕಾಶ ಮತ್ತು ಮೂಲಗಳ ಕುರಿತು ಉಪನ್ಯಾಸ ನೀಡಿದರು. ಅಲ್ಲದೆ ರೈತರು ಬೆಳೆದ, ಸಂಗ್ರಹಿಸಿದ ಹೊಂಗೆ ಬೀಜಗಳನ್ನು ಕೇಂದ್ರದಲ್ಲಿ ಖರೀದಿಸಲಾಗುವುದು ಮತ್ತು ಜೈವಿಕ ಇಂಧನ ತಯಾರಿಕೆಯಲ್ಲಿ ಪಡೆದ ಉತ್ಪನ್ನಗಳಾದ ಹಿಂಡಿ, ಗ್ಲಿಸರಿನ್ ಅತ್ಯಂತ ಕಡಿಮೆ ದರದಲ್ಲಿ ರೈತರು ಪಡೆಯಬಹುದಾಗಿದೆ ಎಂದರು.
ಅಥಿತಿಯಾಗಿದ್ದ ಕೃಷಿ ಇಲಾಖೆಯ ನರಸಪ್ಪ ಮತ್ತು ಚಂದ್ರಪ್ಪ ಜಾಬಾ ಅವರು ಜೈವಿಕ ಇಂಧನಗಳ ಕುರಿತು ಮಾಡುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದು, ಇಲಾಖೆ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಲಾಭ ಅನೇಕ: ತೋಟಗಾರಿಕೆ ಇಲಾಖೆಯ ಜಾಧವ ಅವರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಯ ಸೌಲಭ್ಯ ಬಳಸಿಕೊಳ್ಳುವಂತೆ ಮಾಹಿತಿ ನೀಡಿದರು. ಹೊಂಗೆ ಹೊಲದ ಬದುಗಳಲ್ಲಿ ಬೆಳೆಯಬಹುದಾದ ಮರವಾಗಿದೆ ಇದರಿಂದ ಅನೇಕ ಲಾಭಗಳಿವೆ ಎಂದು ತಿಳಿಸಿದರು. ಮಲ್ಕಾಪೂರ ಗ್ರಾಪಂ ಅಧ್ಯಕ್ಷೆ ಗೋರಿಬಿ ಅಧ್ಯಕ್ಷೆತೆ ವಹಿಸಿದ್ದರು.
ಗ್ರಾಪಂ ಸದಸ್ಯ ಶಂಕ್ರೆಪ್ಪ ಹಾಗೂ ಗ್ರಾಮದ ಪ್ರಮುಖರಾದ ರಮೇಶ, ಲಾಲಫ್ಪ, ವೈಜಿನಾಥರಾವ ಪೋಲಿಸ್ ಪಾಟೀಲ್ ಹಾಗೂ ಧನರಾಜ ಮುಂತಾದವರು ಉಪಸ್ಥಿತರಿದ್ದರು. ಗ್ರಾಮದ ಸ್ವ-ಸಹಾಯ ಸಂಘಗಳು ಹಾಗೂ ರೈತರು ಉಪಸ್ಥಿತರಿದ್ದರು. ಕಾರ್ತಿಕ ಸ್ವಾಗತಿಸಿ ಲಕ್ಷ್ಮಿ ನಿರೂಪಿಸಿದರೆ ಸಂತೋಷ ಪಾಟೀಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

