ಬೀದರ್

ಕಬ್ಬು ಸರಬರಾಜು: ರೈತರಿಗೆ ಹಣ

Published On :

ಬೀದರ್: ಪ್ರಸಕ್ತ ಹಂಗಾಮಿನಲ್ಲಿ ಫೆ. 7ರವರೆಗೆ ಬಿಎಸ್‌ಎಸ್‌ಕೆಯಿಂದ 2,70505 ಟನ್ ಕಬ್ಬು ನುರಿಸಿ, 2, 53770 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಸಂಜಯ ಗುರುಬಸಪ್ಪ ಖೇಣಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿ ದಿನದ ಸಕ್ಕರೆ ಇಳುವರಿ  ಶೇ.11ರಷ್ಟು ಇದ್ದು, ಸರಾಸರಿ ಇಳುವರಿ ಶೇ.9.56ಯಾಗಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಸದಸ್ಯ ರೈತರಿಗೆ ಡಿಸೆಂಬರ್ 15ರ ವರೆಗೆ ಹಣ ಪಾವತಿಸಲು ನಿರ್ಧರಿಸಿದ್ದು, ಈ ಹಣವನ್ನು ಇನ್ನು ಫೆ. 15ರವರೆಗೆ ಕಬ್ಬು ಸರಬರಾಜು ಮಾಡಿದ ಸದಸ್ಯ ರೈತರಿಗೆ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲೆಯ ರೈತರು ತಮ್ಮ ಕಬ್ಬು ಹೊರ ರಾಜ್ಯಗಳಿಗೆ ಮಾರ್ಗಪಲ್ಲಟ ಮಾಡದೇ ನಮ್ಮ ಕಾರ್ಖಾನೆಗೆ ಸರಬರಾಜು ಮಾಡಿ ಸಹಕರಿಸಬೇಕೆಂದು ಅಧ್ಯಕ್ಷರು ಕೋರಿದ್ದಾರೆ.
ಉಚಿತ ತರಬೇತಿಗೆ ಹೆಸರು ನೋಂದಾಯಿಸಿ
ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತ ಗಂಗೋತ್ರಿ ಮೈಸೂರು ಸ್ಪರ್ಧಾತಮ್ಕ ಪರೀಕ್ಷಾ ತರಬೇತಿ ಕೇಂದ್ರದಿಂದ ಐಎಎಸ್ ಹಾಗೂ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಉಚಿತ ತರಬೇತಿಗಾಗಿ ಹೆಸರು ನೋಂದಾಯಿಸಲು  ಕೇಂದ್ರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷಾ ತರಬೇತಿಗಾಗಿ ಫೆ. 11ರ ಒಳಗಾಗಿ ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ 08482-228181, 9880526439 ಗೆ ಸಂಪರ್ಕಿಸಲು ಕೋರಿದ್ದಾರೆ.
ಬಿಎ, ಬಿಕಾಂ ಪರೀಕ್ಷಾ ಶುಲ್ಕ
ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಬಿಎ ಮತ್ತು ಬಿಕಾಂ ಕೋರ್ಸಗಳ ಪರೀಕ್ಷಾ ದಿನಾಂಕ ಪ್ರಕಟವಾಗಿದ್ದು, ಏ. 20 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಪರೀಕ್ಷಾ ಶುಲ್ಕವನ್ನು ದಂಡ ಶುಲ್ಕವಿಲ್ಲದೇ ಮಾರ್ಚರ ಒಳಗಾಗಿ ಪಾವತಿಸಬಹುದು. ಅರ್ಜಿ ನಮೂನೆ, ಮಾಹಿತಿಗೆ 08482-228181, 9880526439 ಸಂಪರ್ಕಿಸಬಹುದು.
ಇಂದು ಶಿಕ್ಷಣ ಮಾರ್ಗದರ್ಶನ
ನಗರದ ನಾವದಗೇರಿಯಲ್ಲಿರುವ ಬಿಸಿಎಂ. ವಿದ್ಯಾರ್ಥಿಗಳ ವಸತಿನಿಲಯದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ 10ನೇ ಕನಕ ಸಂದೇಶ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.10 ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕನ್ನಡ ಭಾಷಾ ವೇದಿಕೆ ತಾಲೂಕ ಕಾರ್ಯದರ್ಶಿ ಶಂಕರರಾವ ಬಾಪೂರೆ ಉದ್ಘಾಟಿಸುವರು. ವಸತಿ ನಿಲಯದ ಮೇಲ್ವಿಚಾರಕ ಅಶೋಕ ಶೇರಿಕಾರ  ಅಧ್ಯಕ್ಷತೆ ವಹಿಸುವರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಡಾ.ಶರಣಪ್ಪಾ ಮಲಗೊಂಡ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಜಿಲ್ಲಾಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಬಕೆ, ಉಪಾಧ್ಯಕ್ಷ ಬೊಮ್ಮಗೊಂಡ ಚಿಟ್ಟಾವಾಡಿ, ಕಾರ್ಯದರ್ಶಿ ಅನೀಲ್ ಚಿಲ್ಲರ್ಗಿ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.