ಬೀದರ್

ನಾಳೆ ಬಸವ ಧರ್ಮ ಸಮಾವೇಶ

Published On :

ಹುಮನಾಬಾದ್: ತಾಲೂಕಿನ ಮನ್ನಾಏಖೇಳ್ಳಿ ಗ್ರಾಮದ ಬಸವ ಮಹಾಮಠದಲ್ಲಿ ಬಸವ ಧರ್ಮ ಸಮಾವೇಶ ಹಾಗೂ ಸಂಗೀತ ನಾಟಕೋತ್ಸವವು ಫೆ.9ರಿಂದ 11ರವರೆಗೆ ಜರುಗಲಿದೆ. 9ರಂದು ಸಂಜೆ 5ಕ್ಕೆ ಗಂಟೆಗೆ ಹುಲಸೂರದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ನಾಗಣಸೂರದ ರೇವಣಸಿದ್ದ ಸ್ವಾಮಿ, ಬಬಲಾದ ಗುರುಪಾದಲಿಂದ ಸ್ವಾಮಿ ಕಾರ್ಯಕ್ರಮದ ಸಮ್ಮುಖ ವಹಿಸುವರು.
  ಅಖಿಲ ಭಾರತೀಯ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಭೀಮಣ್ಣಾ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಸದಸ್ಯ ಶೈಲೇಂದ್ರ ಬೆಲ್ದಾಳೆ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮರಪಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಪಂ ಅಧ್ಯಕ್ಷ ದೀಪಿಕಾ ರಾಠೋಡ, ಉಪಾಧ್ಯಕ್ಷ ಲತಾ ಹಾರಕುಡೆ, ಮಾಜಿ ಶಾಸಕ ಸುಭಾಷ ಕಲ್ಲೂರ್, ಗ್ರಾಪಂ ಅಧ್ಯಕ್ಷ ಜಗದೇವಿ ವರವಟ್ಟಿ ಅತಿಥಿಗಳಾಗಿ ಭಾಗವಹಿಸುವರು.
  ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರಿಗೆ ಸನ್ಮಾನಿಸಲಾಗುವುದು.
  ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭುಶಟ್ಟಿ ಮೇಂಗಾ, ತಾಪಂ ಅಧ್ಯಕ್ಷ ಸುಭಾಷ  ಕೋರಿ, ಮಾಜಿ  ತಾಪಂ ಅಧ್ಯಕ್ಷ ಮಹ್ಮದ್ ನೂರುದ್ದಿನ್,  ಶರಣಪ್ಪಾ ಪ್ರಿಯಾ, ಬಸವದನಿ ಸಂಪಾದಕ ವಿರುಪಾಕ್ಷ ಗಾದಗಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಇಂದುಮತಿ ದಿವಾಕರ್‌ಗೆ ಸತ್ಕರಿಸಲಾಗುವುದು.
ಕವಿಗೋಷ್ಠಿ: 10ರಂದು ಬೆ.11ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಮಲ್ಕಾಪುರ ಬಸವಾಂಜಲಿ ತಾಯಿ ಸಾನ್ನಿಧ್ಯ, ನಿಡವಂಚಾದ ಮೈತ್ರಾದೇವಿ ತಾಯಿ ನೇತೃತ್ವ, ಇಂದುರ ಚಿನ್ನಯ ಜ್ಞಾನಿ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖ,  ಹಿರಿಯ ಸಾಹಿತಿ ದೇಶಾಂಶ ಹುಡಗಿ ಅಧ್ಯಕ್ಷತೆ ವಹಿಸುವರು.
  ಸಂಜೆ 5.30ಕ್ಕೆ ಜಯದೇವಿ ಲಿಗಾಡೆಯವರ ಜನ್ಮ ಶತನಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯವನ್ನು ಭಾತಂಬ್ರಾದ ಶಿವಯೋಗೇಶ್ವರ ಸ್ವಾಮೀಜಿ ವಹಿಸುವರು, ಗುರುಮಠಕಲ್‌ನ ಶಾಂತವೀರ ಶ್ರೀ ನೇತೃತ್ವ, ಶಹಾಪುರದ ಗುರುಪಾದ ಸ್ವಾಮಿ, ಜೇವರ್ಗಿ ಸಿದ್ದಬಸವ ಕಬೀರ ಸ್ವಾಮಿ ಸಮ್ಮುಖ ವಹಿಸುವರು. ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಕಾರ್ಯಕ್ರಮ ಉದ್ಘಾಟಿಸುವರು.
  ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ವೈಜಿನಾಥ ಪಾಟೀಲ್ ಅವರನ್ನು ಸನ್ಮಾನಿಸಲಾಗುವುದು.
ಸಮಾರೋಪ: 11ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ಸ್ವತಂತ್ರ ಧರ್ಮವಾಗಿ ಲಿಂಗಾಯತ ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ತಿಂಥಣಿಯ ಸಿದ್ದರಾಮನಾಂದ ಪುರಿಸ್ವಾಮೀಜಿ ಸಾನ್ನಿಧ್ಯ, ಜೇರಟಗಿಯ ಮಹಾಂತಸ್ವಾಮಿ, ಕೌಠಾ(ಬಿ)ಸಿದ್ರಾಮ ಶರಣರು ಸಮ್ಮುಖ, ನಿಡವಂಚಾದ ಮೈತ್ರಾದೇವಿತಾಯಿ ಭಾಲ್ಕಿ ಹಿರೇಮಠದ ಉತ್ತಾರಾಧಿಕಾರಿ ಗುರುಬಸವ ದೇವರು ನೇತೃತ್ವ ವಹಿಸುವರು.
  ಸತತ ಮೂರು ದಿನಗಳ ಕಾಲ ನಡೆಯುವ ಬಸವ ಧರ್ಮ ಸಮಾವೇಶದ ಗೋಷ್ಠಿಗಳಲ್ಲಿ ಹೆಸರಾಂತ ಮಠಾಧೀಶರು, ಸಾಹಿತಿಗಳು, ಹೋರಾಟಗಾರರು, ಜನಪ್ರತಿನಿಧಿಗಳು, ಹಾಲಿ- ಮಾಜಿ ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಆಗಮಿಸಲಿದ್ದಾರೆ.
ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವಾಗತ ಸಮಿತಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.