ವಿಶ್ವಮಾನವ ರಥಕ್ಕೆ ಚಾಲನೆ
ಬೀದರ್: ಬಸವ ಧರ್ಮವು ಕಾಯಕ, ದಾಸೋಹ ಮತ್ತು ಅನುಭಾವದ ಆಧಾರದ ಮೇಲೆ ನಿಂತಿದೆ. ಅನುಭಾವ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯವು ದಲಿತ, ಉನ್ನತ, ಸ್ಪೃಶ್ಯ, ಅಸ್ಪೃಶ್ಯ, ಹೆಣ್ಣು, ಗಂಡು ಎಂಬ ಭೇದವನ್ನು ಅಳಿಸಿ ಹಾಕಿದ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ದೇಶಾಂಶ ಹುಡಗಿ ನುಡಿದರು.
ಅವರು ವಚನ ಜ್ಯೋತಿ ಹೊತ್ತ ವಿಶ್ವಮಾನವ ರಥಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಕೈಲಾಸಪುರದಲ್ಲಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಚನ ಜ್ಯೋತಿಯು ಬೀದರ ಜಿಲ್ಲೆಯ ತುಂಬೆಲ್ಲ ಒಂದು ತಿಂಗಳ ಕಾಲ ಸಂಚರಿಸಿ ವಚನ ಸಾಹಿತ್ಯ ಸಮ್ಮೇಳನದ ಪ್ರಚಾರ ಮಾಡಲಿದೆಯೆಂದು ಹೇಳಿದರು. ಪೀಠಾಧ್ಯಕ್ಷ ನಾಗಲಿಂಗಕವಿ, ವಿಜಯಕುಮಾರ ಪಾಟೀಲ ಖಾಜಾಪುರ, ವೈಜಿನಾಥ ಕಮಠಾಣೆ ಮಾತಾಡಿದರು. ರಥದ ಮೇಲ್ವಿಚಾರಣೆ ವಹಿಸಿದ ಬಸವಣಪ್ಪ ತಿಪ್ಪೆಟ್ಟಿ ಮತ್ತು ಶರಣಪ್ಪ ಹರಸೂರೆ, ಹಂಶಕವಿ, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

