ಬೀದರ್

ನೀರು ಸರಬರಾಜು; ಇಂದು ವ್ಯತ್ಯಯ

Published On :

ಭಾಲ್ಕಿ: ಪಟ್ಟಣದ ದಾಡಗಿ ಗ್ರಾಮದ ಹತ್ತಿರ ಇರುವ ಜಾಕ್‌ವೆಲ್‌ನಲ್ಲಿ ನೀರು ಮುಗಿದಿದ್ದು, ಮುಂಬರುವ ಬೇಸಿಗೆಯಲ್ಲಿ ನೀರಿನ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಜಾಕ್‌ನಲ್ಲಿರುವ ಹೂಳನ್ನು ತೆಗೆಯುವ ಪ್ರಯುಕ್ತ  ಫೆ. 7 ರಂದು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಆಗುವುದಿಲ್ಲ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಪುರಸಭೆ ಅಧ್ಯಕ್ಷೆ ವಿದ್ಯಾವತಿ ರಮೇಶ ಲೋಖಂಡೆ ಹಾಗೂ ಮುಖ್ಯಾಧಿಕಾರಿ ಭರತ ನಾಗರೆ ಮನವಿ ಮಾಡಿಕೊಂಡಿದ್ದಾರೆ.
ರಾಯರ ಮಠದಲ್ಲಿ ಜಾಗೃತಿ ಸಮ್ಮೇಳನ
ಬೀದರ್: ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆ.7ರಂದು ಸಂಜೆ 6ಕ್ಕೆ ಧರ್ಮ ಜಾಗೃತಿ ಸಮ್ಮೇಳನ ಮತ್ತು ಪ್ರಹ್ಲಾದ ಯುವಕ ಮಂಡಳ ಮಂತ್ರಾಲಯ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹೆಚ್ಚುವರಿ ಆಪ್ತ ಕಾರ್ಯದರ್ಶಿಗಳಾದ ಎಸ್.ಎನ್. ಸುಯಮಿಂದ್ರಾಚಾರ್ಯರು ಸೇರಿದಂತೆ ಐದಕ್ಕೂ ಹೆಚ್ಚು ಜನ ವಿದ್ವಾಂಸರು ಕ್ಷೇತ್ರ ಮಂತ್ರಾಲಯದಿಂದ ಆಗಮಿಸಲಿದ್ದಾರೆ. ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಹ್ಲಾದ ಯುವಕ ಮಂಡಳದ ಜಿಲ್ಲಾ ಆಧ್ಯಕ್ಷರಾದ ವೆಂಕಟರಾವ್ ಮೋರಖಂಡಿ ಕೋರಿದ್ದಾರೆ.
12ರಂದು ಡಿಎಸ್‌ಎಸ್ ಸಭೆ
ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಶಾಖೆಯ ಸಭೆ ಫೆ.12ರಂದು ಮ.1 ಗಂಟೆಗೆ ನಗರದ ಆಶಾ ಲಾಡ್ಜ್‌ನಲ್ಲಿ ಕರೆಯಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಕಲ್ಯಾಣರಾವ ಭೋಸ್ಲೆ ತಿಳಿಸಿದ್ದಾರೆ. ಅಂದು ನಡೆಯಲಿರುವ ಸಭೆಗೆ ತಾಲೂಕು, ಜಿಲ್ಲಾ ಪದಾಧಿಕಾರಿಗಳು, ಡಿಎಸ್‌ಎಫ್ ಮತ್ತು ಗ್ರಾಮ ಶಾಖೆ ಪದಾಧಿಕಾರಿಗಳು ಹಾಜರಾಗಬೇಕೆಂದು ಕೋರಿದ್ದಾರೆ.
ಸೇನಾ ಭರ್ತಿಗೆ ಅವಕಾಶ
ಗುಲ್ಬರ್ಗ, ಬೀದರ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಯುವಕರಿಗೆ ಸೇನೆಯಲ್ಲಿ ಭರ್ತಿಯಾಗಲು ಮತ್ತೊಂದು ಅವಕಾಶ ನೀಡಲಾಗಿದೆ. ಸೋಲ್ಜರ್ ಜಿಡಿ ಹುದ್ದೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲಿ ಶೇ. 32ರಷ್ಟು ಅಂಕ ಪಡೆದು ಸರಾಸರಿ ಶೇ. 45ರಷ್ಟು ಅಂಕ ಪಡೆದು ಪಾಸಾಗಿದ್ದು,  17 ವರ್ಷ 6 ತಿಂಗಳಿಂದ 21 ವರ್ಷದೊಳಗಿರಬೇಕು. 166 ಸೆಂಮೀ ಎತ್ತರ, 50 ಕೆಜಿ ತೂಕವಿದ್ದು, ಎದೆಯಳತೆ 77-82 ಸೆಂಮೀ ಹೊಂದಿರುವ ಆಸಕ್ತ ಯುವಕರು ಫೆ.8ರಂದು ಬೆ.5.30ಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳನ ರನ್ನ ಸ್ಟೇಡಿಯಂನಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಹಾಜರಾಗಬೇಕೆಂದು ಗುಲ್ಬರ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.