ಸಂಪಾದಕರಾಗಿ ಡಾ. ಹೆಬ್ಬಾಳೆ
ಬೀದರ್: ಕರ್ನಾಟಕ ಜನಪದ ವಿಶ್ವವಿದ್ಯಾಲಯ ಗ್ರಾಮ ಚರಿತ್ರೆ ಕೋಶದ ಜಿಲ್ಲಾ ಸಂಪಾದಕರಾಗಿ ಡಾ. ಜಗನ್ನಾಥ ಹೆಬ್ಬಾಳೆ ಅವರನ್ನು ನೇಮಕ ಮಾಡಿ ವಿಶ್ವ ವಿದ್ಯಾಲಯ ಆದೇಶ ಹೊರಡಿಸಿದೆ ಎಂದು ಕರ್ನಾಟಕ ಜನಪದ ಪರಿಷತ್ ತಾಲೂಕು ಅಧ್ಯಕ್ಷ ನಿಜಲಿಂಗಪ್ಪ ತಗಾರೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಜನಸಂಸ್ಕೃತಿಯ ವೈವಿಧ್ಯಪೂರ್ಣವಾದ ಸಮಗ್ರ ಮಾಹಿತಿಯನ್ನು ಕಲೆ ಹಾಕಲು ಕರ್ನಾಟಕ ಜನಪದ ವಿಶ್ವವಿದ್ಯಾಲಯ 10 ಕೋಟಿ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಒಟ್ಟು 30 ಜಿಲ್ಲೆಗಳ 36000 ಗ್ರಾಮಗಳ ಸರ್ವೇಕ್ಷಣೆ ಕೈಗೊಂಡು ಸಂಶೋಧನಾತ್ಮಕ ದೃಷ್ಟಿಯಿಂದ ಅಧ್ಯಯನ ಮಾಡಿ ಪ್ರಸ್ತಾವ ಸಲ್ಲಿಸಲು ಜನಪದ ತಜ್ಞರನ್ನು ಆಯ್ಕೆ ಮಾಡಿದೆ. ಜಿಲ್ಲೆಗೆ ಒಬ್ಬರಂತೆ ವಿದ್ವಾಂಸರನ್ನು ಗುರುತಿಸಿ ಅವರಿಂದ ಪ್ರಸ್ತಾವಗಳ ಮೌಲ್ಯಮಾಪನ, ವಿಶ್ಲೇಷಣೆ ಮಾಡಿಸಲಾಗುತ್ತಿದೆ. ಸದ್ಯ ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜಗನ್ನಾಥ ಹೆಬ್ಬಾಳೆರನ್ನು ಸಂಪಾದಕರಾಗಿ ನೇಮಕಗೊಂಡ ಪ್ರಯುಕ್ತ ಪರಿಷತ್ನ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರೊ. ಎಸ್.ಬಿ. ಬಿರಾದಾರ, ಗೋಪಾಲ ಇಟಗಿಕರ್, ಪ್ರಮೀಳಾ ಶಿವಪೂಜೆ, ಸುನೀತಾ ಕೂಡ್ಲಿಕರ್, ನಿಜಲಿಂಗಪ್ಪ ತಗಾರೆ, ಸಂಜುಕುಮಾರ ಜುಮ್ಮಾ, ಶರದಕುಮಾರ್ ನಾರಾಯಣಪೇಟಕರ್, ಶಾಂತಲಿಂಗ ಮಠಪತಿ, ಗಣಪತಿ ಕಲ್ಲೂರೆ ಮತ್ತಿತರರು ಡಾ. ಹೆಬ್ಬಾಳೆ ಅವರನ್ನು ಅಭಿನಂದಿಸಿದ್ದಾರೆ.
ಸರ್ವಾಧ್ಯಕ್ಷರ ಆಯ್ಕೆ
ಬೀದರ್: ಬರುವ ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಲು ಮತ್ತು ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಫೆ.2 ರಂದು ಜಿಲ್ಲಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಬೀದರ್ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎಂಜಿ ದೇಶಪಾಂಡೆ, ಔರಾದ್ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿವಕುಮಾರ ಕಟ್ಟೆ, ಭಾಲ್ಕಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ವೀರಶೆಟ್ಟಿ ಬಾವುಗೆ, ಹುಮನಾಬಾದ್ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿವಸ್ವಾಮಿ ಚೀನಕೇರಾ ಮತ್ತು ಬಸವಕಲ್ಯಾಣ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ನೀಲಾಂಬಿಕಾ ಶೇರಿಕಾರ ಅವರನ್ನು ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗೌರವ ಕಾರ್ಯದರ್ಶಿ ಸಂಜೀವಕುಮಾರ ಅತಿವಾಳೆ, ಗೌರವ ಕೋಶಾಧ್ಯಕ್ಷ ಶ್ರೀಕಾಂತ ಬಿರಾದಾರ್, ತಾಲೂಕು ಅಧ್ಯಕ್ಷರಾದ ಪ್ರೊ. ಉಮಾಕಾಂತ ಮೀಸೆ, ಚಂದ್ರಕಾಂತ ನಿರ್ಮಳೆ, ಸುಭಾಷ ಹುಲಸೂರೆ, ರವೀಂದ್ರ ಭಂಡಾರಿ, ಚಂದ್ರಕಾಂತ ಸ್ವಾಮಿ, ಕೆ. ಗುರುಮೂರ್ತಿ, ಪ್ರತಿಭಾ ಚಾಮಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

