ಬೀದರ್

ಬೈಕ್ ಕಳ್ಳರ ಜಾಲ ಭೇದಿಸಿದ ಪೊಲೀಸ್ ತಂಡ

Published On :

ಬೀದರ್: ನಗರದ ಬರೀದ್‌ಶಾಹಿ ಉದ್ಯಾನವನದ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನದ ಪ್ರಕರಣ ಬಯಲಿಗೆ ಬಂದಿದ್ದು, ಅವರಿಂದ ಕಳುವು ಮಾಡಿದ 4 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
  ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಪ್ರಕಟಣೆ ಹೊರಡಿಸಿದ್ದು, ನಗರ ಠಾಣೆಯ ಪೊಲೀಸರ ಕಾರ್ಯಾಚರಣೆ ಸಂದರ್ಭ ಯಲ್ಲಾಲಿಂಗ ಕಾಲೋನಿಯ ರೂಬೇನ್ ಅಲಿಯಾಸ್ ಸುನೀಲ್ ನಾಗನಾಥ ಸೂರ್ಯವಂಶಿ, ವಿದ್ಯಾನಗರ ಕಾಲೋನಿಯ ಸತೀಶ ಶಿವರಾಜ ಬೆಳ್ಳೂರೆ, ಸಿದ್ದು ಮತ್ತು ನಾಗೂರ ಗ್ರಾಮದ ರಾಜಕುಮಾರ ಬಸವರಾಜ ಕನ್ನಾಳೆ ಎಂಬವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗಿದೆ.
ಎಲ್ಲೆಲ್ಲಿ ಕಳವು: ಸದರಿಯವರು ನೂತನ ನಗರ ಠಾಣೆಯ ಎಂಒಬಿ ಪಟ್ಟಿಯಲ್ಲಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಲು ಸದರಿಯವರು ಎರಡು ಮೂರು ತಿಂಗಳಿಂದ ಬೀದರ್ ಸರ್ಕಾರಿ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಹೀರೋ ಹೊಂಡಾ ಸಿಬಿಝಡ್ ಬೈಕ್, ರಾಘವೇಂದ್ರ ಕಾಲೋನಿ ಹಾಗೂಮಾಧವನಗರದಲ್ಲಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್‌ಗಳು, ಗಾಂಧಿಗಂಜ್ ರೈತ ಭವನದ ಹತ್ತಿರ ನಿಲ್ಲಿಸಿದ್ದ ಯಮಹಾ ಬೈಕ್‌ನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
  ನಗರ ಠಾಣೆಯ ಸಿಪಿಐ ಗಂಗಾಧರ, ನ್ಯೂಟೌನ್ ಠಾಣೆಯ ಪಿಎಸ್‌ಐ ಕಪಿಲದೇವ್ ಹಾಗೂ ಸಿಬ್ಬಂದಿ ಎಸ್‌ಪಿ ಡಾ. ತ್ಯಾಗರಾಜನ್ ಹಾಗೂ ಡಿವೈಎಸ್ಪಿ ವಿ.ಎಂ. ಜ್ಯೋತಿ ಮಾರ್ಗದರ್ಶನದಿಂದ ಸದರಿ ಕಳವಿನ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.