ಇಷ್ಟಲಿಂಗದ ಮಹತ್ವ ಅಪಾರ: ಬಸವರಾಜ
ಬಸವಕಲ್ಯಾಣ: ಬಸವಣ್ಣನವರು ಲಿಂಗಾಯತ ವಿಶ್ವಧರ್ಮ ಕಟ್ಟಲು ಅಣಿಗೊಂಡಾಗ ಬಸವಣ್ಣನವರ ಕಾರ್ಯಗಳು ಅನುಷ್ಠಾನಗೊಳ್ಳಲು ಹಾಗೂ ಇಷ್ಟಲಿಂಗದ ಮಹತ್ವ ಪ್ರಸ್ತುತವಾಗಿದೆ. ದೇಶ- ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅನುಭಾವಿಗಳು ಕಾಯಕ ದಾಸೋಹಿಗಳು ನಿಜವನ್ನು ಅರಿಯುವ ಪ್ರಯತ್ನ ಮಾಡಿದ್ದರು ಎಂದು ವೈದ್ಯ ಬಸವರಾಜ ಪಂಡಿತ್ ಅಭಿಪ್ರಾಯಪಟ್ಟರು.
ತಾಲೂಕಿನ ಬಟಗೇರಾ ಗ್ರಾಮದಲ್ಲಿ ಗೋಣಿನ ಬಸವೇಶ್ವರ ಮಂದಿರದಲ್ಲಿ 58ನೇ ಬಸವ ವಚನ ಜ್ಯೋತಿ ಕಾರ್ಯಕ್ರಮವನ್ನು ಹಡಪದ ಅಪ್ಪಣ್ಣ ಸಂಘಟನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
12ನೇ ಶತಮಾನದ ಶರಣರು ನಡೆಸಿದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣ ಹಡಪದ ಅಪ್ಪಣ್ಣ ಲಿಂಗಮ್ಮ ತಾಯಿಯವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಬಸವರಾಜ ಹೊನ್ನ ರಾಜೇಶ್ವರ ಮಾತನಾಡಿ, ಲಿಂಗದೊಳಗೆ ಇದ್ದು ಲಿಂಗವನ್ನೇ ಮರೆತು ಜೀವಂತ ಬೊಂಬೆಗಳಾಗಿ ಕತ್ತಲೆಯಲ್ಲಿ ಬದುಕು ಸಾಗಿಸುತಿದ್ದೇವೆ ಎಂದರು.
ಬಸವ ವಚನ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷ ರಾಮಣ್ಣ ಗದಲೇಗಾಂವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಪೇಂದ್ರ ಹಡಪದ, ಪಾಂಡುರಂಗ ಗದಲೇಗಾಂವ, ಬಸವರಾಜ ಕರಹರಿ, ಬಸವರಾಜ ಹಿರೇಮಠ ಮಾತನಾಡಿದರು.
ಕಾಶಿನಾಥ ಹತ್ತರಗಾ, ಸದಾನಂದ ಮಂಠಾಳೆ, ಮಧುವರಸ ಹಡಪದ, ವಿಶ್ವನಾಥ ಹಡಪದ, ಗ್ರಾಮಸ್ಥರಿದ್ದರು. ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಶ್ರೀಕಾಂತ ದಂಪತಿ ಪೂಜೆ ಸಲ್ಲಿಸಿದರು. ಲಕ್ಷ್ಮಣ ವಚನ ಗಾಯನ. ದತ್ತು ಮೂಲಗೆ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

