ಬೀದರ್

ಸಂಘಟನೆಯಿಂದ ಸಮಾಜ ಪ್ರಗತಿ

Published On :

ಹುಮನಾಬಾದ್: ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸಮಾಜ ಸಂಘಟನೆಯಾಗಬೇಕೆಂದು ಶಾಸಕ ರಾಜಶೇಖರ ಪಾಟೀಲ್ ಕರೆ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ಗುರುನಾಥೇಂದ್ರ ಸರಸ್ವತಿ ಸ್ವಾಮಿ ಅವರ ಗೌರವ ಸಮರ್ಪಣೆ ಹಾಗೂ ವಿಶ್ವಕರ್ಮ ಧರ್ಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ವಿಶ್ವಕರ್ಮ ಸಮಾಜವು ಶಾಂತಿ ಸಹನೆಯಿಂದ ಕಾಯಕ ಮಾಡುತ್ತಾ ಜೀವನ ಸಾಗಿಸುವ ಸಮಾಜವಾಗಿದೆ ಎಂದರು.
ಸಮಾಜವು ಆರ್ಥಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಮಾಜದ ಪ್ರಮುಖರು ಸೇರಿ ಪ್ರಥಮ ಬಾರಿಗೆ ಪಟ್ಟಣದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದು ಸಮಾಜದಲ್ಲಿನ ಸಂಘಟನೆ ಎದ್ದು ಕಾಣುತ್ತದೆ ಎಂದರು.
ಸಂಘಟನೆಯಾಗಬೇಕು: ಸರ್ಕಾರದ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ರಾಜ್ಯ ಮಟ್ಟದಲ್ಲಿ ವಿಶ್ವಕರ್ಮ ಸಮುದಾಯ ಸಂಘಟನೆಯಾಗಬೇಕು. ಈ ಇದಕ್ಕೆ ಸರ್ಕಾರದ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಯತ್ನಿಸಲಾಗುವುದು ಎಂದರು.
ವಿಶ್ವಕರ್ಮ ಸಮಾಜದವರು ಒಂದೆಡೆ ಸೇರಿ ಸಭೆ ಸಮಾರಂಭಗಳನ್ನು ನಡೆಸಲು ಹಾಗೂ ಸಮಾಜದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಣದಲ್ಲಿ ನಿವೇಶನ ಒದಗಿಸಿಕೊಡುವ ಭರವಸೆ ನೀಡಿದರು.ದುಬಲಗುಂಡಿ, ತಾಳಮಡಗಿ, ಘಾಟಭರೋಳ ಗ್ರಾಮಗಳಲ್ಲಿ ವಿಶ್ವಕರ್ಮ ಸಮಾಜದ ಸಮುದಾಯ ಭವನಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲಿದೆ ಎಂದರು.ಮಠಗಳಿಂದ ಅಶಾಂತಿ ದೂರ: ಯಾದಗಿರಿಯ ವಿಶ್ವಕರ್ಮ ಏಕದಂಡಗಿ ಮಠದ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿನ ಅಶಾಂತಿಯನ್ನು ದೂರ ಮಾಡಿ ಶಾಂತಿ ಸ್ಥಿರವಿರಲು ಮಠಗಳ ಪಾತ್ರ  ಬಹಳ ಮುಖ್ಯವಾಗಿದೆ ಎಂದರು.ಮಠಗಳು ಧಾರ್ಮಿಕ ಚಿಂತನೆಯನ್ನು ನಡೆಸಿ ಸಾರ್ವಜನಿಕರ ಮನಸ್ಸು ಜಾಗೃತಿಗೊಳಿಸುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಮಾಜ ಉಪಯೋಗ ಕಾರ್ಯಗಳನ್ನು ಮಾಡಲು ಪ್ರೇರಿಪಿಸುತ್ತವೆ.  
ಅಂತೆಯೇ ಮಠಗಳ ಬಗ್ಗೆ ಇಂದಿಗೂ ಭಕ್ತಿ ಹಾಗೂ ಅಪಾರ ನಂಬಿಕೆಯಿದೆ ಎಂದು ಹೇಳಿದರು.ತುಲಾಭಾರ: ಇದೇ ವೇಳೆ ಏಕದಂಡಗಿ ಮಠದ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿಗೆ ಭಕ್ತರಿಂದ ತುಲಾಭಾರ ಕಾರ್ಯ ಭಕ್ತಿಯಿಂದ ಜರುಗಿತು. ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯದಿಂದ ಕುಂಭಮೇಳದೊಂದಿಗೆ ಸಂಗೀತ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು.
ಸ್ವಂತದ ಶರಣ ಶಂಕರಲಿಂಗ ಸ್ವಾಮೀಜಿ, ಸ್ಥಳೀಯ ಮಠದ ಕುಮಾರಸ್ವಾಮಿ, ಯಾದಗಿರಿ ನಾಗಮೂರ್ತಿ ಸ್ವಾಮಿ, ಶಂಭುಲಿಂಗ ಸ್ವಾಮಿ, ಜಿಪಂ ಸದಸ್ಯ ವೀರಣ್ಣ ಪಾಟೀಲ್, ಎಪಿಎಂಸಿ ಸದಸ್ಯ ಕಂಟೆಪ್ಪಾ ದಾನಾ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಾ. ಸಿದ್ದು ಪಾಟೀಲ್, ಜಂಗಮ ಸಮಾಜದ ರಾಜ್ಯಾಧ್ಯಕ್ಷ ರಾಚಯ್ಯಸ್ವಾಮಿ, ಮಲ್ಲಿಕಾರ್ಜುನ ಮಾಶಟ್ಟಿ, ಶಿವರಾಜ ಗಂಗಶಟ್ಟಿ, ಧರ್ಮಪಾಲ ಪೊದ್ದಾರ್, ತಿಪ್ಪಣ್ಣಾ ವಿಶ್ವಕರ್ಮ, ಹರಿಶ್ಚಂದ್ರ  ಪಂಚಾಳ, ಚಂದ್ರಕಲಾ ಕಮಲಾಕರ್, ರಾಜಕುಮಾರ ಸುತಾರ, ರೇವಣಸಿದ್ದ ವಿಶ್ವಕರ್ಮ, ಸಂಜೀವಕುಮಾರ ವಿಶ್ವಕರ್ಮ, ಶಿವರಾಜ, ಚಂದ್ರಶೇಖರ ವಿಶ್ವಕರ್ಮ, ಮೋನಪ್ಪಾ, ಮಲ್ಲಿಕಾರ್ಜುನ ಪಂಚಾಳ, ಶಿವು ಪಂಚಾಳ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿದ್ದರು.
ಭೀಮಶಾ ಪಂಚಾಳ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.