ದುರಸ್ತಿಯಾಗದ ಬಸ್ಗಳು...
ಬೀದರ್: ಹೈದ್ರಾಬಾದ್ ಕರ್ನಾಟಕದ ಅತಿ ಹಿಂದುಳಿದ ಔರಾದ್ ತಾಲೂಕಿನಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳು ಕೆಲಸಕ್ಕೆ ಬಾರದಂತಿವೆ ಎಂದು ಪ್ರಯಾಣಿಕರು ದೂರಿದ್ದಾರೆ.
ಕೆಲ ಬಸ್ಗಳಿಗೆ ವ್ಯವಸ್ಥಿತವಾದ ಕಿಟಕಿಗಳು ಹಾಗೂ ಕೆಲ ಬಸ್ಗಳಿಗೆ ಬಾಗಿಲು ಹಾಗೂ ಕೆಲ ಬಸ್ಸುಗಳಿಗೆ ದೊಡ್ಡ ಗಾಜುಗಳು ಒಡೆದು ಹೋಗಿದ್ದು ಹೆಡ್ಲೈಟುಗಳು ಹಾಗೂ ಇಂಡಿಕೇಟರ್ಗಳೇ ಇಲ್ಲ. ಕೆಲ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತಿವೆ. ರಸ್ತೆಯಲ್ಲಿ ಬಸ್ನ ಟೈರ್ ಪಂಕ್ಚರ್ ಆದರೆ ಅದಕ್ಕೆ ಸ್ಟೆಪ್ನಿಗಳೇ ಇಲ್ಲ. ಅಲ್ಲದೇ ಬಸ್ಸುಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿವೆ. ಈ ಕುರಿತು ಸಂಸ್ಥೆಯ ಅಧಿಕಾರಿಗಳಿಗೆ ಕಮಲನಗರ ಕನ್ನಡ ಸೇನೆಯ ವಲಯ ಅಧ್ಯಕ್ಷರಾದ ದಯಾನಂದ ವಡ್ಡೆ, ತಾಲೂಕು ಅಧ್ಯಕ್ಷ ಜನಾರ್ಧನ ಸಾವರಗೆಕರ್, ಪ್ರದೀಪ ಪಾಟೀಲ್, ಸಂಜು ಮುಳೆ, ಮಹಾದೇವ ಪಾಟೀಲ್, ಗುರುನಾಥ ಬಿರಾದಾರ, ಹಣುಮಂತ ಮಹಾಜನ, ನವಾಜ, ಯುವರಾಜ ರಾಂಪೂರೆ, ಅಮರ ಸರಕಾರಕ್ಕೆ ಎಚ್ಚರಿಸಿದ್ದಾರೆ.
ತೊಂದರೆ: ಬಸ್ಗಳಿಗೆ ವ್ಯವಸ್ಥಿತವಾದ ಬ್ಯಾಟರಿಗಳೇ ಇಲ್ಲದಿರುವುದರಿಂದ ನಿಂತ ಸ್ಥಳದಲ್ಲಿಯೇ ಪ್ರಯಾಣಿಕರಿಂದ, ಮಕ್ಕಳಿಂದ ತಳ್ಳಲ್ಪಡುವ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ಸಂಬಂಧಿತ ಅಧಿಕಾರಿಗಳ ನಿಷ್ಕಾಳಜಿಯಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಸೌಲಭ್ಯ ಕಲ್ಪಿಸಿ: ಕಮಲನಗರದಿಂದ-ಬೇಳಕೋಣಿ ಮಾರ್ಗವಾಗಿ ಔರಾದ್, ಔರಾದ್ನಿಂದ-ತೋರಣಾ-ಕಮಲನಗರ- ಮುರ್ಕಿ- ಔರಾದ್, ಕುಶನೂರ, ಸಂಗಮ, ಕಮಲನಗರಕ್ಕೆ ಮಧ್ಯೆ ಗಂಟೆಗೆ ಒಂದರಂತೆ ಬಸ್ಸುಗಳನ್ನು ಓಡಿಸುವುದರಿಂದ ಪ್ರಯಾಣಿಕರಿಗೆ ಸೌಲಭ್ಯವಾಗುವುದು ಹಾಗೂ ಸರ್ಕಾರಕ್ಕೂ ಲಾಭವಾಗುವುದು. ಈ ನಿಟ್ಟಿನಲ್ಲಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರು ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಯಾಣಿಕರು ಕೋರಿದ್ದಾರೆ.
ತಾಲೂಕಿನಾದ್ಯಂತ ಅನೇಕ ಮಿನಿ ಬಸ್ನಿಲ್ದಾಣಗಳ ಮೇಲೆ ಮರಾಠಿ ನಾಮಫಲಕಗಳೇ ರಾರಾಜಿಸುತ್ತಿವೆ. ಅಲ್ಲದೇ ಕೆಲ ಬಸ್ಸುಗಳ ನಾಮಫಲಕಗಳು ಕೂಡ ಮರಾಠಿಯಲ್ಲಿದ್ದು, ಸಂಸ್ಥೆ ನಿಷ್ಕಾಳಿಜಿಗೆ ಜ್ವಲಂತ ಸಾಕ್ಷಿ. ವ್ಯವಸ್ಥೆ ಸುಧಾರಿಸದ್ದಿದ್ದರೆ ಆಂದೋಲನ ಮಾಡಬೇಕಾಗುತ್ತದೆ ಎಂದು ಕನ್ನಡ ಸೇನೆ ಕಮಲನಗರ ವಲಯ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

