ಬಳ್ಳಾರಿ

ಕಾಸಾಪುರ ಪಾದಯಾತ್ರೆ ಯಶಸ್ವಿ

Published On :

ಬಳ್ಳಾರಿ: ಬಳ್ಳಾರಿಯಿಂದ ಆಂಧ್ರಪ್ರದೇಶದ ಕಾಸಾಪುರಕ್ಕೆ ನಗರದ ರಾಮೇಶ್ವರಿ ಟಸ್ಟ್ ಹಾಗೂ ಶಾಂತಾ ಧ್ರುವನಾರಾಯಣ ಸಿಂಘಿ ಅಂಡ್ ಸನ್ಸ್ ಯೋಜಿಸಿದ್ದ ಪಾದಯಾತ್ರೆ ಶನಿವಾರ ಕಾಸಾಪುರಕ್ಕೆ ತಲುಪಿತು.
ಬಳ್ಳಾರಿಯಿಂದ ಬುಧವಾರ ಆರಂಭವಾದ ಪಾದಯಾತ್ರೆಯಲ್ಲಿ ಕಿರಿಯರು, ವೃದ್ಧರು ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಮಹಾರಾಷ್ಟ್ರದ ಮುಂಬೈ, ಸಾಂಗ್ಲಿ, ಸೋಲ್ಲಾಪುರ, ಮಂಗಳವೇಡೆ, ಸೀಮಾಂಧ್ರ ಪ್ರದೇಶದ ಗುಂತಕಲ್, ಗುತ್ತಿ, ಹೈದ್ರಾಬಾದ್, ನಾಡಿನ ಸುರಪುರ, ಬಾಗಲಕೋಟೆ, ಗುಳೇದಗುಡ್ಡ, ರಾಯಚೂರು, ಸಿಂಧನೂರು, ಇಲಕಲ್, ಜಮಖಂಡಿ, ಹೊಸಪೇಟೆ, ಕೊಪ್ಪಳ, ಗಂಗಾವತಿ ಜೊತೆಗೆ ಬಳ್ಳಾರಿ ನಗರಗಳಿಂದ ಆಗಮಿಸಿದ 300 ಭಕ್ತರು ಪಾಲ್ಗೊಂಡಿದ್ದರು.
ವೈಶಾಖ ಬಹುಳ ಏಕಾದಶಿ, ಶನಿವಾರ ಕಾಸಾಪುರ ತಲುಪಿದ ಪಾದಯಾತ್ರಿಗಳು ವ್ಯಾಸರಾಜರು ಪ್ರತಿಷ್ಠಾಪಿಸಿದ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಹನುಮಂತ ದೇವರಿಗೆ ವಿಶೇಷವಾಗಿ ತಯಾರಿಸಿದ ರಾಜಸ್ಥಾನಿ ಶೈಲಿಯ ಗೋಧಿ ಹಾಗೂ ಬಾದಾಮಿ, ದ್ರಾಕ್ಷಿ, ಗೋಡಂಬಿಗಳಿಂದ ತಯಾರಿಸಿದ ಚೂರ್ಮಾವನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು, ಪುರುಷರು ದೇವಸ್ಥಾನದ ಪ್ರಾಕಾರದಲ್ಲಿ ಕುಳಿತು ಸಂತ ಶ್ರೀ ತುಳಸೀ ದಾಸ ವಿರಚಿತ ತುಲಸೀ ರಾಮಾಯಣದ ಸುಂದರಕಾಂಡದ ಪಾರಾಯಣ ಮಾಡಿದರು.
108 ಬಾರಿ ಹನುಮಾನ್ ಚಲೀಸಾ ಪಠಣ ಮಾಡಿದರು. ಪಾದಯಾತ್ರೆ ಯಶಸ್ವಿಯಾದ ಹಿನ್ನೆಲೆ ರಾಜಸ್ಥಾನಿ ಶೈಲಿಯಲ್ಲಿ 11ಕ್ಕೂ ಹೆಚ್ಚು ಬಗೆಯ ತಿನಿಸುಗಳ ಸವಾಮಣಿ ಪ್ರಸಾದದ (125 ಕಿಲೋ ತೂಕದ ವಿವಿಧ ಬಗೆಯ ತಿನಿಸುಗಳ ಪ್ರಸಾದ) ಭೋಜನ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.