ಬಳ್ಳಾರಿ

ಬೆಳ್ಳಿತೆರೆಗೆ ಬಂದ ಹನುಮಂತು

Published On :

ಕೂಡ್ಲಿಗಿ: ಸಾಮೂಹಿಕ ವಿವಾಹ, ಕುಡಿಯುವವ ನೀರಿನ ಸೇವೆ, ಆರೋಗ್ಯ ತಪಾಸಣೆ, ಕ್ರೀಡೆ - ಹೀಗೆ ಸಾಮಾಜಿಕ ಕಾರ್ಯಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಇಲ್ಲಿನ ಯುವಕ ಬಂಗಾರು ಹನುಮಂತು ಈಗ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಜೂ. 27ರಂದು ಬಿಡುಗಡೆಗೆ ಸಿದ್ಧವಾಗಿರುವ ಪಾರು ವೈಫ್ ಆಫ್ ದೇವದಾಸ ಚಲನಚಿತ್ರದಲ್ಲಿ ಅವರು ಸಹ ನಿರ್ಮಾಪಕ, ನಟನಾಗಿದ್ದಾರೆ.
ಸೋಮಣ್ಣ, ಹುಲಿಗೆಮ್ಮ ಅವರ ಹಿರಿಯ ಪುತ್ರ ಬಂಗಾರು ಹನುಮಂತು ಎಳವೆಯಲ್ಲೇ ಬಳ್ಳಾರಿ ಜಿಲ್ಲೆಯ ರಾಜಕೀಯದಲ್ಲಿ ಪರಿಚಿತರಾದವರು. 29ರ ಹರೆಯದ ಹನುಮಂತು ಸಿನಿಮಾ ರಂಗಕ್ಕೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಸದ್ದಿಲ್ಲದೆ ಸಿನಿಮಾ ನಟನೆ, ನಿರ್ಮಾಣಕ್ಕೆ ಕೈಹಾಕಿದ್ದಾರೆ.
ಅಚ್ಚರಿಯ ಎಂಟ್ರಿ: ಕಿರಣ್ ಗೋವಿ ನಿರ್ದೇಶನದ ಮೂರನೇ ಚಿತ್ರ ಪಾರು ವೈಫ್ ಆಫ್ ದೇವದಾಸ್ ಜೂ. 27ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಹನುಮಂತು ನಟಿಸಿದ್ದು ತಾಲೂಕಿನಲ್ಲೇ ಹಲವರಿಗೆ ಗೊತ್ತಿಲ್ಲ. 6.3 ಅಡಿ ಎತ್ತರವಿರುವ ನೀಳಕಾಯದ ಹನುಮಂತು ಚಿಗುರುಮೀಸೆ ಚೆಲುವ. ಮಾತುಗಾರಿಕೆ, ವ್ಯಕ್ತಿತ್ವದಿಂದ ಜನರನ್ನು ಸೆಳೆಯಬಲ್ಲರು. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಸ್ನೇಹಿತರು, ಬಂಧುಗಳಿಗೂ ಅಚ್ಚರಿ.
ಮತ್ತೆರಡು ಚಲನಚಿತ್ರ: ಪಾರು ವೈಫ್ ಆಫ್ ದೇವದಾಸ ಚಲನಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕರಾಗಿದ್ದು, ಜಯಮಾಲಾ ಅವರ ಪುತ್ರಿ ಸೌಂದರ್ಯಾ ನಾಯಕಿಯಾಗಿ ನಟಿಸಿದ್ದಾರೆ. ಬಂಗಾರು ಹನುಮಂತು ಪಾತ್ರ ಚಿಕ್ಕದಾದರೂ ನೆನಪಿನಲ್ಲಿ ಉಳಿಯುವಂತಿದೆ. ಯಾವ ಪಾತ್ರ ಎಂದು ಕೇಳಿದರೆ, ಸಸ್ಪೆನ್ಸ್, ಚಿತ್ರ ನೋಡಿ ಎನ್ನುತ್ತಾರೆ. ಅವರೀಗೆ ಮತ್ತೆರಡು ಚಿತ್ರಗಳ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಚಿತ್ರ ತಯಾರಿಸುತ್ತಿದ್ದಾರೆ. ಜನವರಿಯಲ್ಲಿ ತೆರೆ ಕಾಣಲಿರುವ ಕೆ. ಕಲ್ಯಾಣ ಸಾಹಿತ್ಯ-ಸಂಭಾಷಣೆ ಬರೆದಿದ್ದಾರೆ. ಮತ್ತೊಂದು ಚಿತ್ರ ಮಾರ್ಚ್‌ನಲ್ಲಿ ತೆರೆ ಕಾಣಲಿದೆ ಎಂದು ಬಂಗಾರು ಹನುಮಂತು ಹೇಳಿದರು.
-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.