ಬಳ್ಳಾರಿ

ಸ್ವಂತ ಭೂಮಿ ಪಡೆಯಲು ದಲಿತರ ಹೋರಾಟ

Published On :

ಬೆಂಗಳೂರು:  ಬಳ್ಳಾರಿ ಜಿಲ್ಲೆಯ ಶ್ರೀರಾಂಪುರದ ದಲಿತರು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯಡಿ ತಮಗೆ ಸಿಗಬೇಕಾದ ಭೂಮಿಯನ್ನು ಜೂ.29ರಂದು ಉಳುಮೆ ಮಾಡಲು ನಿರ್ಧರಿಸಿದ್ದಾರೆ. ಹಳ್ಳಿಯ 29 ದಲಿತ ಕುಟುಂಬಗಳಿಗೆ 1978ರಲ್ಲಿಯೇ ಸರ್ಕಾರ 229 ಎಕರೆ ಭೂಮಿಯನ್ನು ನೀಡಿತ್ತು. ಆದರೆ ಸ್ಥಳೀಯ ಅಧಿಕಾರಿ ಮತ್ತು ಶಾಸಕರು ಇವರಿಗೆ ವಿಷಯ ತಿಳಿಸದೆ 30 ವರ್ಷಗಳ ಕಾಲ ಇವರಿಂದ ಜೀತ ಮಾಡಿಸುತ್ತಿದ್ದಾರೆ ಎಂದು ದಲಿತ ಸಂಘದ ಹಿರಿಯ ಮುಖಂಡ ಎನ್.ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೆ ಮತ್ತು ಅವರು ಇಷ್ಟು ವರ್ಷವೂ ಜೀತ ಪದ್ಧತಿಯನ್ನು ನಡೆಸಿದ್ದಾರೆ. ಆದರೆ ಈಗ ಜನರಿಗೆ ತಿಳಿವಳಿಕೆ ಬಂದಿದೆ. ಆದಕಾರಣ ಸ್ವಂತ ಭೂಮಿ ಪಡೆಯಲು ಈ ಹೋರಾಟ ಎಂದರು. ಗೋಷ್ಠಿಯಲ್ಲಿ ಕರಿಯಪ್ಪ ಗುಡಿಮನಿ, ರಾಮಚಂದ್ರ, ವೆಂಕಟರಮಣ ಉಪಸ್ಥಿತರಿದ್ದರು.


ಬೈಕ್‌ಗೆ ಡಿಕ್ಕಿ: ಬಸ್ ಸವಾರ ಸಾವು
ಬಳ್ಳಾರಿ: ಖಾಸಗಿ ಬಸ್ ಹಿಂದುಗಡೆಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಅಲ್ಲೀಪುರ ಸಮೀಪದಲ್ಲಿ ಮಂಗಳವಾರ ನಡೆದಿದೆ. ಮೃತನು ಕಣೇಕಲ್ ಗ್ರಾಮದ ವೆಂಕಟೇಶಲು(35). ಸಂಜೆ ಹೊಸಪೇಟೆಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ದಾವಣಗೆರೆ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇನ್ನೊಬ್ಬ ಬೈಕ್ ಸವಾರ ಮಂಜುನಾಥ್ ಗಾಯಗೊಂಡಿದ್ದು, ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.