ಬಳ್ಳಾರಿ

ಮಾಲ್ವಿ ಡ್ಯಾಂಗೆ 10.5 ಅಡಿ ನೀರು

Published On :

ಹಗರಿಬೊಮ್ಮನಹಳ್ಳಿ: ಮಂಗಳವಾರ ಬೆಳಗಿನ ಜಾವ ಜಲಾಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ಯಿಂದ ತಾಲೂಕಿನ ಮಾಲ್ವಿ ಡ್ಯಾಂಗೆ ಸಂಜೆ ನಾಲ್ಕೂವರೆಗೆ 10.5 ಅಡಿ ನೀರು ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ರಾತ್ರಿಯಷ್ಟೊತ್ತಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಹಲವು ವರ್ಷಗಳಿಂದ ಜಲಕ್ಷಾಮದಿಂದ ಬತ್ತಿದ್ದ ಜಲಾಶಯಕ್ಕೀಗ ಜೀವಕಳೆ. ಡ್ಯಾಂನ ಗರಿಷ್ಠ ಮಟ್ಟ 25 ಅಡಿ. ಒಂದೇ ಮಳೆಗೆ ಅರ್ಧ ಡ್ಯಾಂ ನೀರು ಸಂಗ್ರಹವಾಗಿದ್ದು ಜಲಾಯಶಯ ಮೇಲ್ಭಾಗ, ಕೆಳಭಾಗದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ. ಮಂಗಳವಾರ ಬೆಳಗಿನ ಜಾವ ತಾಲೂಕಿನ ಕೊಗಳಿ, ಅಲಬೂರು, ಕನ್ನಿಹಳ್ಳಿ ಸೇರಿದಂತೆ ಜಲಾಶಯದ ಜಲಾಯನ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಡ್ಯಾಂಗೆ ನೀರಿನ ಮೂಲವಾದ ತಾಲೂಕಿನ ಗಡಿಗ್ರಾಮ ಅಲಬೂರು ಬಳಿಯ ಹಗರಿಹಳ್ಳ ಸಂಜೆವರೆಗೂ ಭೋರ್ಗರೆಯಿತು. ಇದು ಭರ್ತಿಯಾದರೆ ಜಲಕ್ಷಾಮ ಕಾಣಿಸುವುದಿಲ್ಲ ಎಂಬುದು ಸ್ಥಳೀಯರ ನಂಬಿಕೆ.
ಜನಸ್ತೋಮ: ಜಲಾಶಯಕ್ಕೆ ನೀರು ಹರಿದು ಬರುವ ಸುದ್ದಿ ತಿಳಿದ ಜನ ಡ್ಯಾಂ ಏರಿಯಾದಲ್ಲಿ ಬೆಳಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಹಗರಿಬೊಮ್ಮನಹಳ್ಳಿ ಪಟ್ಟಣ, ಅಕ್ಕ-ಪಕ್ಕದ ಮಾಲ್ವಿ, ಹರೇಗೊಂಡನಹಳ್ಳಿ, ಉಲುವತ್ತಿ, ನೆಲ್ಕುದ್ರಿ ಸುತ್ತಮುತ್ತಲಿನ ಗ್ರಾಮಸ್ಥರು ಜಲಸಮೃದ್ಧಿ ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಸಂಜೆವರೆಗೂ ಆಗಮಿಸುತ್ತಿದ್ದರು. ಪಡ್ಡೆ ಹುಡುಗರು, ಯುವಕರು ಡ್ಯಾಂ ಅಂಗಳದಲ್ಲಿಳಿದು ಹೊಸ ನೀರನ್ನು ಮೈಮೇಲೆ ಎರಚಿಕೊಳ್ಳುತ್ತಾ ಸಂಭ್ರಮಿಸಿದರು. ಕೆಲವರು ಡ್ಯಾಂ ಮೇಲೆ ನಿಂತು ಗಂಗಾಮಾತೆಗೆ ಧನ್ಯತಾಭಾವನೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.