ಬಳ್ಳಾರಿ

ಅಣುವ್ರತ ಯಾತ್ರೆ ನಾಳೆ ಬಳ್ಳಾರಿಗೆ

Published On :

ಬಳ್ಳಾರಿ:  ಜೈನ ಧರ್ಮದ ಪ.ಪೂ. ಆಚಾರ್ಯ ಶ್ರೀ ತುಳಸಿ ಗುರೂಜಿ ಅವರ ಜನ್ಮ ಶತಮಾನೋತ್ಸವದ ಸಂಸ್ಮರಣೆ ನಿಮಿತ್ತ ಹಮ್ಮಿಕೊಂಡಿರುವ ಅಣುವ್ರತ ಸಂಕಲ್ಪ ಯಾತ್ರೆಯು ಜೂನ್ 3ರಂದು ಬಳ್ಳಾರಿ ನಗರಕ್ಕೆ ಆಗಮಿಸಲಿದೆ ಎಂದು ಬಳ್ಳಾರಿಯ ಜೈನ ಶ್ವೇತಾಂಬರ ತೇರಾಪಂಥ ಸಭಾದ ಅಧ್ಯಕ್ಷ ನಿರ್ಮಲ ಕುಮಾರ್ ಕೊಠಾರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ, ವರ್ಗ, ವರ್ಣಗಳ ಯಾವುದೇ ಭೇದ ಭಾವವಿಲ್ಲದೆ, ಇಡೀ ಮನುಕುಲದ ಹಾಗೂ ದೇಶದ ನೆಲ, ಜಲ, ವನ ಸಂಪತ್ತಿನ ರಕ್ಷಣೆ ಹಾಗೂ ಪ್ರಗತಿಗಾಗಿ ಅಣುವ್ರತವನ್ನು ಆಚಾರ್ಯ ಶ್ರೀ ತುಳಸಿಯವರು ರೂಪಿಸಿದ್ದಾರೆ. ಅವರ ಜನ್ಮಶತಮಾನೋತ್ಸವದ ನಿಮಿತ್ತ ದುಶ್ಚಟಗಳನ್ನು ದೂರಗೊಳಿಸುವ, ಅಹಿಂಸಾ ಬೋಧನೆಯ ಮೂಲಕ ಪ್ರಾಣಿ ಮತ್ತು ಪ್ರಕೃತಿಯ ಸಂರಕ್ಷಣೆಯ ಸಂಕಲ್ಪವನ್ನು ಹೊಂದಿ, ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ, ಅಣುವ್ರತ ಸಂಕಲ್ಪ ಯಾತ್ರೆ 2013ರ ನವೆಂಬರ್ 5ರಿಂದ ಆರಂಭವಾಗಿದೆ. ಈ ಯಾತ್ರೆ ಜೂನ್ 3ರಂದು ಬಳ್ಳಾರಿಗೆ ಆಗಮಿಸಲಿದೆ.
ಯಾತ್ರೆಯೊಂದಿಗೆ ಆಗಮಿಸಿರುವ ಆಚಾರ್ಯ ಶ್ರೀ ಮಹಾಶ್ರವಣರ ಶಿಷ್ಯರಾದ ಕಂಚನ್ ಪ್ರಗ್ಯಾಜೀ, ಶಮಣಿ ರಶ್ಮಿ ಪ್ರಗ್ಯಾಜೀ ಮತ್ತು ಶಮಣಿ ಗೌತಮ್ ಪ್ರಗ್ಯಾಜೀ ಅವರು ಜೂನ್ 3ರಂದು ನಗರದ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ, ನಂತರ ಕೊಟ್ಟೂರು ಸ್ವಾಮಿ ಶಿಕ್ಷಣ ಮಹಾವಿದ್ಯಾಲಯ, ಸಂಜೆ ಭಾರತೀಯ ಕುಟುಂಬ ಕಲ್ಯಾಣ ಸಂಘ, ಕೌಲ್ ಬಜಾರ್, ಮೋತಿ ಸರ್ಕಲ್, ದುರ್ಗಮ್ಮ ದೇವಸ್ಥಾನ, ರಾತ್ರಿ ತೇರಾಪಂಥ ಭವನದಲ್ಲಿ ಸಿಡಿ ಪ್ರದರ್ಶನದ ಮೂಲಕ ಉಪನ್ಯಾಸ ನೀಡಲಿದ್ದಾರೆ.
ನಂತರ ಶ್ರೀಗಳ ಸಮ್ಮುಖದಲ್ಲಿ ಉರವಕೊಂಡ ಮಠದ ಡಾ. ಕರಿಬಸವರಾಜೇಂದ್ರ ಸ್ವಾಮಿಗಳು, ಡಾ. ಹೆನ್ರಿ ಡಿಸೋಜ, ಕಲ್ಯಾಣ ಮಠದ ಕಲ್ಯಾಣ ಮಹಾಸ್ವಾಮಿ, ಮಹಮ್ಮದ್ ಇದ್ರೀಸ್ ಉಮರಿ ಅವರ ಉಪಸ್ಥಿತಿಯಲ್ಲಿ, ಉತ್ತರ ಕರ್ನಾಟಕ ಸಮಿತಿ ಅಧ್ಯಕ್ಷ ಅಮೃತ್‌ಲಾಲ್‌ಜಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.
ಜೈನ್ ಶ್ವೇತಾಂಬರ್ ತೇರಾಪಂಥ ಸಭಾದ ಕಾರ್ಯದರ್ಶಿ ಸಂಪತ್‌ರಾಜ್ ಖಿವೇಸರಾ, ಉಪಾಧ್ಯಕ್ಷ ಬಸಂತ್ ಕುಮಾರ್ ಛಾಜೆಡ್, ಸಲಹೆಗಾರ ಪಾರಸಮಲ್ ಖಿವೇಸರಾ, ತೇರಾಪಂತ್ ಯುವ ಪರಿಷತ್ ಅಧ್ಯಕ್ಷ ಅನಿಲ್ ನಹಾರ್, ಡಾ. ಈಶ್ವರಪ್ಪ ನಾಷ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.