ಎಲ್ಲರಿಗೂ ಕಾನೂನು ಅರಿವು ಅಗತ್ಯ
ಹೂವಿನಹಡಗಲಿ: ಎಲ್ಲರಿಗೂ ಕಾನೂನು ಅರಿವು ಅಗತ್ಯವಿದ್ದು, ಕಾನೂನು ಸಾಕ್ಷರ ರಥದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಧೀಶ ಯಮನಪ್ಪ ಹೇಳಿದರು.
ಇಲ್ಲಿನ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ ತಾಲೂಕು ಸೇವೆಗಳ ಸಮಿತಿ ಮತ್ತು ತಾಲೂಕು ವಕೀಲರ ಸಂಘ ಹಾಗೂ ಎಲ್ಲ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನ 9 ಹಳ್ಳಿಗಳಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಶಿಕ್ಷಣ, ಆಸ್ತಿ ಖರೀದಿ ಸೇರಿದಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ಕಾನೂನು ಅರಿವು ಅಗತ್ಯವಿದ್ದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅಸಭ್ಯ ವರ್ತನೆ ನಡೆದಲ್ಲಿ ಪಾಲಕರಿಗೆ ತಿಳಿಸಿ ಇವುಗಳನ್ನು ತಡೆಗಟ್ಟಲು ಕರೆ ನೀಡಿದರು.
ತಹಸೀಲ್ದಾರ್ ಏಜಾಜ್ ಬೇಗ ಮಾತನಾಡಿ, ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು ಹಾಗೂ 371 (ಜೆ) ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಎಸ್. ಶ್ರೀಪ್ರಕಾಶ ವಕೀಲರು ಕಾನೂನು ಪಾಲನೆಯಲ್ಲಿ ಸಾರ್ವಜನಿಕರ ಪಾತ್ರ, ಕೊಟ್ರಯ್ಯ ಪ್ರಸಾದಿಮಠ ವಕೀಲರು ಆಸ್ತಿ ಹಸ್ತಾಂತರ ಅಧಿನಿಯಮ, ಜಿ.ಶಿವಕುಮಾರ ವಕೀಲರು ಜನನ ಮತ್ತು ಮರಣ ಅಧಿನಿಯಮ ಕುರಿತು ಉಪನ್ಯಾಸ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಎಂ.ಬಸಲಿಂಗಸ್ವಾಮಿ ವಹಿಸಿ ಅಧ್ಯಕ್ಷತೆ ಮಾತನಾಡಿದರು. ವಕೀಲರಾದ ಐಗೋಳ ಚಿದಾನಂದ, ವಿ.ಪಿ. ಪರಮೇಶ್ವರನಾಯ್ಕ, ಎಂ. ಪರಮೇಶ್ವರಪ್ಪ, ಎಂ. ಗಂಗಾಧರ, ಸುಜಾತಾ, ಎಂ.ಬಿ. ಕೋರಿ, ಜ್ಯೋತಿ ಮಲ್ಲಣ್ಣ, ಸೊಪ್ಪಿನ ಸುರೇಶ, ಎ. ರುದ್ರಜ್ಜ, ಡಿವೈಎಸ್ಪಿ ಆರ್.ಎಸ್. ಪಾಟೀಲ, ಸಿಪಿಐ ಪ್ರಕಾಶ ರಾಠೋಡ್, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ತಾಲೂಕಿನ ಮಾನ್ಯರ ಮಸಲವಾಡ, ಮದಲಗಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

