ಬಳ್ಳಾರಿ

ತಾಪಂ ಆಡಳಿತ ಕಾಂಗ್ರೆಸ್ ಮಡಿಲಿಗೆ

Published On :

ಹಗರಿಬೊಮ್ಮನಹಳ್ಳಿ: ಇಲ್ಲಿನ ತಾಪಂ 3ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹುಲಿಗೆಮ್ಮ ಹನುಮಜ್ಜ ಹಾಗೂ ಉಪಾಧ್ಯಕ್ಷರಾಗಿ ಕ್ಯಾದಿಗಿಹಳ್ಳಿ ಲಕ್ಷ್ಮವ್ವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಪಂ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ನಿಗದಿತ ಅವಧಿಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಿಂದುಳಿದ ವರ್ಗ (ಎ) ಮಹಿಳೆ ಮೀಸಲಾದ ಅಧ್ಯಕ್ಷ ಹುದ್ದೆಗೆ ಬ್ಯಾಸಿಗಿದೇರಿ ಕ್ಷೇತ್ರದ ಸದಸ್ಯೆ ಹೊಳಗುಂದಿ ಹುಲಿಗೆಮ್ಮ ಹನುಮಜ್ಜ ಹಾಗೂ ಪರಿಶಿಷ್ಟ ಜಾತಿ (ಮಹಿಳೆ) ಮೀಸಲಿರುವ ಉಪಾಧ್ಯಕ್ಷ ಹುದ್ದೆಗೆ ತಂಬ್ರಹಳ್ಳಿ ಕ್ಷೇತ್ರದ ಪ್ರತಿನಿಧಿ ಕ್ಯಾದಿಗಿಹಳ್ಳಿ ಲಕ್ಷ್ಮವ್ವ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಹೊಸಪೇಟೆ ಸಹಾಯಕ ಆಯುಕ್ತ ಸುನೀಲ್ ಕುಮಾರ ತಿಳಿಸಿದರು.
ಅವಿರೋಧ ಆಯ್ಕೆ  ಘೋಷಣೆಯಾಗುತ್ತಿದ್ದಂತೆ ತಾಪಂ ಎದುರು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಗೈರು: 16 ಸದಸ್ಯ ಬಲದ ಹಗರಿಬೊಮ್ಮನಹಳ್ಳಿ ತಾಪಂನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆರು ಸದಸ್ಯರನ್ನು ಹೊಂದಿದ್ದು, ಈ ಪೈಕಿ ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಅಲ್ಲದೇ ಸಭೆಗೂ ಗೈರು ಹಾಜರಾಗಿದ್ದರು.
ಜೆಡಿಎಸ್ ಭಾಗಿ: ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್ ಮುಖಂಡರಾದ ಸಿನಿಮಾ ಮಂಜಣ್ಣ, ಅಕ್ಕಿ ತೋಟೇಶ, ಉಡೇದ್ ಗುರುಬಸವರಾಜ, ಕೆ.ಪಿ. ದೇವರಾಜ, ಬಿ.ದೇವೇಂದ್ರ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು.
ಮುಖಂಡ ಬಿ.ವಿ. ಶಿವಯೋಗಿ, ರಾಯರಾಳುತಾಂಡ ಕೃಷ್ಣನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಕೆಪಿಸಿಸಿ ಸದಸ್ಯ ಎಸ್. ಕೃಷ್ಣನಾಯ್ಕ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಯು. ಸೋಮಪ್ಪ, ಕೆ.  ಉಮೇಶ, ಭಾರತಮ್ಮ ಬೆಲ್ಲದ್, ಮಂಜುಳಾ ಕೃಷ್ಣನಾಯ್ಕ, ಗಂಗಮ್ಮ ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಸೋಮಪ್ಪನಾಯಕ, ಹೆಗ್ಗಡಾಶ ರಾಮಣ್ಣ, ಮುಖಂಡ ಹೊಳಗುಂದಿ ಹನುಮಜ್ಜ, ಶಿವಕುಮಾರ ಬೆಲ್ಲದ್, ಪವಾಡಿ ಹನುಮಂತಪ್ಪ, ಬುಡೇನ್‌ಸಾಬ್, ಭೋವಿಹುಲುಗಪ್ಪ, ಪತ್ರೇಶ್ ಹಿರೇಮಠ, ಎಣ್ಣಿಭಾಷ್, ತಟ್ಟಿರಾಘು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.