ಮನೆಗೊಂದು ಮರ ಕಾರ್ಯಕ್ರಮ ಯಶಸ್ವಿ
ಬಳ್ಳಾರಿ: ಧರ್ಮಶಾಸ್ತ್ರ ಸೇವಾ ಸಂಘವು ನಗರದ ಸತ್ಯವಾಣಿ ಕಾಲೋನಿಯಲ್ಲಿ ಮನೆಗೊಂದು ಮರ ಕಾರ್ಯಕ್ರಮ ಈಚೆಗೆ ಏರ್ಪಡಿಸಿತ್ತು. ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಶೆಟ್ಟಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಂದಿನ ಸಸಿ ಮುಂದೆ ಹಲವರಿಗೆ ನೆರಳು ನೀಡಲಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಸಸಿ ನೆಡುವ ಕಾರ್ಯಕ್ರಮವನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು ಎಂದರು. ಸಂಘದ ಹಂಪೇರು ಹಾಲೇಶ್ವರಗೌಡ, ಉಪಾಧ್ಯಕ್ಷ ಸಿ. ಗೋವಿಂದ, ಕಾರ್ಯದರ್ಶಿ ಎಂ. ಸೋಮಶೇಖರ, ಎಸ್. ಲೋಕೇಶ್, ಎಂ. ಮುರುಗೇಶ್, ಎಂ.ಎಸ್. ಸುಗ್ಲಪ್ಪ, ಮಲ್ಲಿಕಾರ್ಜುನ, ಸಿದ್ದೇಶ್, ಜನಾರ್ದನ, ಸಿ.ಎ. ದೇವರಾಜ್, ಬಿ. ಎರಿಸ್ವಾಮಿ, ಬಿ. ಶಾಂತಿಲಕ್ಷ್ಮಿ ಇದ್ದರು.
ಪ್ರತ್ಯೇಕ ಗ್ರಾಪಂ ಕೇಂದ್ರಕ್ಕೆ ಒತ್ತಾಯ
ಕಂಪ್ಲಿ: ನಂ. 5 ಬೆಳಗೋಡುಹಾಳ್ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿಯನ್ನಾಗಿ ರಚಿಸಬೇಕು ಎಂದು ನಂ.10 ಮುದ್ದಾಪುರ ಗ್ರಾಪಂ ಸದಸ್ಯ ಎಂ. ಮಲ್ಲಿಕಾರ್ಜುನಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಲ್ಲಿಗೆ ಸಮೀಪದ ನಂ.5 ಬೆಳಗೋಡುಹಾಳ್ ಗ್ರಾಮದಲ್ಲಿ ಗ್ರಾಪಂ ಸದಸ್ಯರ ಸಭೆ ನಡೆಸಿ ಮಾತನಾಡಿದ ಅವರು, ನಂ.10.ಮುದ್ದಾಪುರ ಮತ್ತು ನಂ.5 ಬೆಳಗೋಡುಹಾಳ್ ಗ್ರಾಮಗಳ ನಡುವೆ 7 ಕಿ.ಮೀ. ಅಂತರವಿದೆ. ಗ್ರಾಮ ಪಂಚಾಯಿತಿಯಲ್ಲಿ ಏನಾದರು ಕೆಲಸ ಮಾಡಿಸಿಕೊಂಡು ಬರಲು ಹೋಗಬೇಕಾದರೆ ನಡೆದುಕೊಂಡು ಅಥವಾ ಆಟೋಗಳಲ್ಲಿ ತೆರಳಬೇಕಾಗಿದೆ. ಎರಡು ಊರುಗಳ ನಡುವೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಅಧಿಕಾರ ವಿಕೇಂದ್ರೀಕರಣ ದೃಷ್ಟಿಯಿಂದ ಮತ್ತು ಇಲ್ಲಿನ ಬಡ ಜನರ ಅನುಕೂಲಕ್ಕಾಗಿ ಇದೇ ಊರಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

