ಬಳ್ಳಾರಿ

ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 19
ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಬುದ್ಧಿಮಾಂದ್ಯ ಯುವತಿಯ ಹಾಗೂ ಬೆಂಗಳೂರಿನ ಮಾರತಳ್ಳಿಯ ವಿಬ್‌ಗ್ಯೋರ್ ಶಾಲೆಯ ಆವರಣದಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಹೊಸಪೇಟೆ ನಗರ ಹಾಗೂ ಗ್ರಾಮೀಣ ವಿಕಲಚೇತನ ಸಂಘ ಹಾಗೂ ಸ್ಲಂ ಜನರ ವೇದಿಕೆಯ ಪದಾಧಿಕಾರಿಗಳು ನಗರದ ರೋಟರಿ ವೃತ್ತದಲ್ಲಿ ಬಾಯಿಗೆ ಹಾಗೂ ತೋಳಿಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿಕಲಚೇತನರ ಸಂಘದ ಮುಖಂಡ ಎನ್. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಒಂದು ವಾರದಲ್ಲಿ 10ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹಾಗೂ 6ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ಘಟಿಸಿದರೂ ರಾಜ್ಯ ಸರ್ಕಾರ ಮೌನ ವಹಿಸಿರುವುದು ಖಂಡನೀಯ. ರಾಜ್ಯದಲ್ಲಿ ನಡೆಯುತ್ತಿರುವ ಹತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಗಂಭೀರ ಪ್ರಕರಣ ಎಂದು ಪರಿಗಣಿಸಿ: ಅತ್ಯಾಚಾರ ಆರೋಪಿಗಳಿಗೆ ತಕ್ಷಣವೇ ಕಠಿಣ ಶಿಕ್ಷೆಗೆ ಒಳಪಡಿಸುವ ನೀತಿಗಳನ್ನು ಜಾರಿಗೆ ತರಬೇಕು. ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ಅತೀ ಗಂಭೀರ ಹಾಗೂ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಕಲಚೇತನ ಸಂಘದ ಮುಖಂಡರಾದ ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ಜಿ. ಅಂಜಿನಿ, ಜಿ. ರಾಜಶೇಖರ್, ಅರುಣ್‌ಕುಮಾರ್, ದಾದಾಪೀರ್, ಮೆಹಬೂಬ್ ಪಾಷ, ಎಲ್. ಪಾಂಡುನಾಯ್ಕ, ಅಶೋಕ್, ಪಿ. ರಾಜಾಸಾಬ್, ರಫೀಕ್, ನಾಗರಾಜ, ಹುಲುಗಪ್ಪ, ಪರಶುರಾಮ್, ಸ್ಲಂ ಜನರ ವೇದಿಕೆಯ ಎಚ್. ಶೇಷು, ಮಹದೇವ್, ವೆಂಕಟೇಶ್, ಗಣೇಶ್, ಹಾಗೂ ಮಹಿಳಾ ವಿಕಲಚೇತನರ ಸಮಿತಿಯ ಶರಣಮ್ಮ, ಗಾಯಿತ್ರಿ, ಲಕ್ಷ್ಮೀ, ಕಣಿಮೆಮ್ಮ, ಸುಮಯ್ಯ, ಶಮೀಮ್ ಬಾನು, ವಿಕಲಚೇತನರ ಪಾಲಕರ ಸಂಘಟನೆಯ ಜಯಶ್ರೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.