ಕಂಪ್ಲಿಯಲ್ಲಿ ಶೇ. 76.72 ಮತದಾನ
ಕಂಪ್ಲಿ: ಕಂಪ್ಲಿ ಪುರಸಭೆಗೆ ಗುರುವಾರ ಶಾಂತಿಯುತ ಮತದಾನವಾಗಿದೆ. ಒಟ್ಟು 28,015 ಮತದಾರರ ಪೈಕಿ 21,494 ಮಂದಿ ಹಕ್ಕು ಚಲಾಯಿಸಿದ್ದು, ಶೇ. 76.72ರಷ್ಟು ಮತದಾನವಾಗಿದೆ. 1, 17, 21ನೇ ವಾರ್ಡ್ಗಳಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಯಿತು. ಸುದ್ದಿ ತಿಳಿದ ಚುನಾವಣಾಧಿಕಾರಿಗಳಾದ ಗೋಣಿ ಬಸಪ್ಪ, ಶರಣಪ್ಪ ವಟಗಲ್, ಕರಣಂ ಪದ್ಮನಾಭ, ಸಹಾಯಕ ಚುನಾವಣಾಧಿಕಾರಿಗಳಾದ ಎ.ಎನ್. ಸುಧಾಕರ, ಡಾ ದಯಾನಂದ ಕಿನ್ನಾಳ್, ಸಣ್ಣ ವೀರಪ್ಪ ಆಗಮಿಸಿ, ಮತದಾನ ಪ್ರಕ್ರಿಯೆ ತೀವ್ರ ಗತಿಯಲ್ಲಿ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೂ ಸಂಜೆ 6 ಗಂಟೆ ವರೆಗೆ ಇಲ್ಲಿ ಮತದಾನ ನಡೆಸಬೇಕಾಯಿತು.
ಪುರಸಭೆ 23 ವಾರ್ಡ್ಗಳ ಚುನಾವಣೆಗೆ 26 ಮತಗಟ್ಟೆ ತೆರೆಯಲಾಗಿತ್ತು. ಎಂಸಿಸಿ ಮುಖ್ಯಸ್ಥ ಕೆ. ಬೀರಣಗಿ ಮತ್ತು ಸಿಬ್ಬಂದಿ, ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಸಿಪಿಐ ಆರ್. ಹನುಮಂತಪ್ಪ, ಪಿಎಸ್ಐ ಆನಂದ್ ಹಾಗು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

