ಸುದ್ದಿ ಸಂಕ್ಷೇಪ
ನಾಟಕೋತ್ಸವ ಸಮಾರೋಪ ಇಂದು
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ಮಹಿಳಾ ವೃತ್ತಿ ರಂಗಕಲಾವಿದರ ಸಂಘ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಮಹಿಳಾ ಪೌರಾಣಿಕ ನಾಟಕೋತ್ಸವ ಮಾ. 3ರಂದು ರಾತ್ರಿ 8 ಗಂಟೆಗೆ ಸಮಾರೋಪಗೊಳ್ಳಲಿದೆ. ಲೇಖಕರು ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಕಡಕೋಳ್ ಸಮಾರೋಪ ಭಾಷಣ ಮಾಡುವರು. ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ ಟಿ.ಎಚ್.ಎಂ. ಬಸವರಾಜ್, ಲೇಖಕ ಸಂಗಮೇಶ್ ಗುರುವ, ಹಿರಿಯ ರಂಗಕರ್ಮಿ ಜಿ. ಮೈಲಾರಪ್ಪ ಭಾಗವಹಿಸುವರು. ನಾಡೋಜ ಪುರಸ್ಕೃತೆ ದರೋಜಿ ಈರಮ್ಮ, ಅಡವಿ ಆನಂದದೇವನಹಳ್ಳಿಯ ಹಿರಿಯ ರಂಗ ಕಲಾವಿದ ಎ.ಜಿ. ಚೆನ್ನಬಸವನಗೌಡ ಅವರನ್ನು ಸನ್ಮಾನಿಸಲಾಗುವುದು. ನಂತರ ಇಳಕಲ್ನ ನಾಟ್ಯರಾಣಿ ಕಲಾ ಸಂಘದವರಿಂದ ಉಮಾರಾಣಿ ಇಳಕಲ್ ನಿರ್ದೇಶನದ ಬಸವರಾಜ ಪಂಚಗಲ್ ರಚಿಸಿದ ಮೋಹಿನಿ ಭಸ್ಮಾಸುರ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದ ಅಧ್ಯಕ್ಷೆ ಕೆ. ನಾಗರತ್ನಮ್ಮ ತಿಳಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಸುವರ್ಣ ವಸ್ತ್ರ ನೀತಿ 2008-13 ಯೋಜನೆಯಡಿ ಒಂದು ತಿಂಗಳ ಜೀನ್ಸ್ ಬಟ್ಟೆ ಹೊಲಿಗೆ (ಸೀವಿಂಗ್ ಮಷೀನ್ ಆಪರೇಟರ್) ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕನಿಷ್ಠ 5ನೇ ತರಗತಿ ವರೆಗೆ ಶಿಕ್ಷಣ ಹೊಂದಿದ್ದು, 18ರಿಂದ 35 ವರ್ಷ (ಸಾಮಾನ್ಯ ವರ್ಗ) ಹಾಗೂ 18ರಿಂದ 40 ವರ್ಷ (ಪ.ಜಾತಿ, ಪಂಗಡ) ವಯೋವುತಿಯಲ್ಲಲ್ಲಿ ಇರಬೇಕು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ರು. 2 ಸಾವಿರ ಶಿಷ್ಯವೇತನ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ದಾಖಲೆಗಳೊಂದಿಗೆ ಮಾ. 9ರೊಳಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ, ಬಳ್ಳಾರಿ ಇವರಿಗೆ ಸಲ್ಲಿಸಬೇಕು. ಅರ್ಜಿಯನ್ನು ಆಯಾ ತಾಪಂ ಕಚೇರಿ, ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ, ನೇಕಾರರ ಸಹಕಾರ ಸಂಘಗಳಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-08392-242073ನ್ನು ಸಂಪರ್ಕಿಸಬಹುದೆಂದು ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

