ಬಳ್ಳಾರಿ

ಎಸ್‌ಬಿಎಂನಿಂದ ಜನಮುಖಿ ಯೋಜನೆ

Published On :


ಬಳ್ಳಾರಿ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶತಮಾನೋತ್ಸವ ಸಂಭ್ರಮದಲ್ಲಿರುವುರಿಂದ ಇದರ ಸವಿ ನೆನಪಿಗಾಗಿ ಬ್ಯಾಂಕಿನ ಗ್ರಾಹಕರಿಗಾಗಿ ಹಲವಾರು ಜನಮುಖಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಎಸ್‌ಬಿಎಂ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಎನ್. ಚಂದ್ರಶೇಖರಯ್ಯ ತಿಳಿಸಿದರು.
ನಗರದ ಎಸ್‌ಬಿಎಂ ಮುಖ್ಯ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗೃಹ ಹಾಗೂ ಕಾರ್ ಸಾಲ ಮೇಳ ಉದ್ಘಾಟಿಸಿ ಮಾತನಾಡುತ್ತಾ, ಎಸ್‌ಬಿಎಂ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಗೃಹ ಹಾಗೂ ಕಾರ್ ಸಾಲವನ್ನು ನೀಡುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಗೃಹ ಹಾಗೂ ಕಾರ್ ಸಾಲ ಮೇಳದಲ್ಲಿ ಭಾಗವಹಿಸಿ ಮನೆ ಅಥವಾ ಕಾರ್ ಸಾಲ ಪಡೆಯುವವರನ್ನು ವಿಶೇಷವಾಗಿ ಪರಿಗಣಿಸಲಾಗುವುದು. ಗ್ರಾಹಕರಿಗೆ ಅನುಕೂಲವಾಗುವ ದಿಸೆಯಲ್ಲಿ ಸಾಲ ಪೂರೈಸಲಾಗುವುದು. ಪೂರ್ವ ಪಾವತಿ ದಂಡ ಇಲ್ಲದೆ, ಅತಿ ಕಡಿಮೆ ಪರಿಷ್ಕರಣಾ ಶುಲ್ಕದೊಂದಿಗೆ ಸಾಲ ವಿತರಿಸಲಾಗುವುದು ಎಂದರು.
ಎಸ್‌ಬಿಎಂ ಮುಖ್ಯ ಕಚೇರಿ ವ್ಯವಸ್ಥಾಪಕ ಶಿವಾನಂದ ನಾಯಕ್, ಬ್ಯಾಂಕ್ ಅಧಿಕಾರಿಗಳಾದ ಅನಂತ ಪೈ, ಚನ್ಯಾನಾಯ್ಕ, ನಾಜೀರ್ ಹುಸೇನ್, ರಾಮಮೂರ್ತಿ, ಡಿ. ಪ್ರಭಾವಕರ್, ಜೆ. ಯೋಗೇಂದ್ರ, ಹರಿಪ್ರಸಾದ್, ಜಯಭಾಸ್ಕರ ರೆಡ್ಡಿ, ಬದರಿನಾರಾಯಣ, ಎಸ್.ಎಂ. ಹಿರೇಮನಿ ಎಸ್‌ಬಿಎಂ ವಿವಿಧ ಕಚೇರಿಗಳ ಫೀಲ್ಡ್ ಆಫೀಸರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.