ಅನಾಥೆಗೆ ಶಾಸಕರ ಆರ್ಥಿಕ ನೆರವು
ಕೂಡ್ಲಿಗಿ: ಎಂಜಿನಿಯರ್ ಆಗೋ ಆಸೆ ಹೊತ್ತಿರುವ ತಾಲೂಕಿನ ಅಗ್ರಹಾರ ಗ್ರಾಮದ ಅನಾಥೆ ನಾಗವೇಣಿಗೆ ಹಲವರು ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಅನಾಥೆಗೆ ಎಂಜಿನಿಯರ್ ಆಗೋ ಆಸೆ..! ಎನ್ನುವ ಶೀರ್ಷಿಕೆಯಡಿ ಸೋಮವಾರ 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು. ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ವರದಿ ಬಂದ ದಿನವೇ ಸಂಜೆ ಯುವತಿಯ ಸ್ವಗ್ರಾಮ ತಾಲೂಕಿನ ಅಗ್ರಹಾರಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ 10 ಸಾವಿರ ನೀಡಿ ನಂತರ ಪ್ರತಿ ತಿಂಗಳು ವಸತಿ ನಿಲಯದ ಊಟದ ಖರ್ಚು 2 ಸಾವಿರ ಹಾಗೂ ಇತರ ಖರ್ಚಿಗಾಗಿ 1 ಸಾವಿರ ಸೇರಿ ಒಟ್ಟು 3 ಸಾವಿರ ನೀಡುವ ಭರವಸೆ ನೀಡಿದ್ದಾರೆ. ಹೆಚ್ಚಿನ ಖರ್ಚು ಬಂದಲ್ಲಿ ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲ ಒದಗಿಸಲು ಪ್ರಯತ್ನಿಸುವುದಾಗಿಯೂ ಶಾಸಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

