ನೀತಿ ಸಂಹಿತೆ ಜಾರಿಗೆ ತಂಡ ರಚನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 17
ಜಿಲ್ಲೆಯಲ್ಲಿ ಮಾ. 7ರಂದು ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ - 2013ನ್ನು ಶಾಂತಿಯುತ ಹಾಗೂ ಮುಕ್ತವಾಗಿ ನಡೆಸುವ ಸಲುವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಜಿಲ್ಲಾ, ತಾಲೂಕು ಮಟ್ಟದ ಎಂಸಿಸಿ ತಂಡಗಳನ್ನು ರಚಿಸಿ, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಮಟ್ಟದ ಎಂಸಿಸಿ ತಂಡ, ಬಳ್ಳಾರಿ ನಗರ ತಂಡ, ಸಿರುಗುಪ್ಪ, ತೆಕ್ಕಲಕೋಟೆ ನಗರ, ಸಂಡೂರು, ಹೊಸಪೇಟೆ ನಗರ, ಕೂಡ್ಲಿಗಿ, ಕೊಟ್ಟೂರು ಹಾಗೂ ಹಡಗಲಿ ತಾಲೂಕು ಮಟ್ಟದ ಎಂಸಿಸಿ ತಂಡಗಳನ್ನು ರಚಿಸಿ, ವಿವಿಧ ಇಲಾಖೆಯ ಅಧಿಕಾರಿಗಳನ್ನು ತಂಡದ ಮುಖ್ಯಸ್ಥರು, ಹೆಚ್ಚುವರಿ ಮುಖ್ಯಸ್ಥರು ಹಾಗೂ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಅಧಿಕಾರಿಗಳ ವಿವರ ಇಂತಿದೆ.
ಜಿಲ್ಲಾ ಮಟ್ಟದ ಎಂಸಿಸಿ ತಂಡದ ಮುಖ್ಯಸ್ಥರನ್ನಾಗಿ ಅಪರ ಜಿಲ್ಲಾಧಿಕಾರಿ ಸಿ. ವಿಜಯಕುಮಾರ್ (9481004864), ಹೆಚ್ಚುವರಿ ಮುಖ್ಯಸ್ಥರನ್ನಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ವಟಗಲ್ (9443809989, 9449788979) ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ (9480803002), ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಅಹಮ್ಮದ್ ಬಾಷಾ (9481714007), ಅಬಕಾರಿ ಇಲಾಖೆಯ ಉಪ ಆಯುಕ್ತ ಡಿ.ಎಂ. ಮೆಹಬೂಬ್ (9449597152), ಹಗರಿ ಚೆಕ್ಪೋಸ್ಟ್ ಸಿಟಿಐ ವಿ. ಅಯ್ಯಣ್ಣ (9448580237) ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಬಳ್ಳಾರಿ ನಗರ ತಂಡದ ಮುಖ್ಯಸ್ಥ - ಮಹಾನಗರ ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ್ (9448090766, 08392273479). ಸದಸ್ಯರು- ಬಳ್ಳಾರಿ ತಹಸೀಲ್ದಾರ್ (9448933600), ಬಳ್ಳಾರಿ ನಗರ ಡಿವೈಎಸ್ಪಿ(9480803020, 08392-272322, 270419), ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಮೋಟರ್ ವೆಹಿಕಲ್ ಇನ್ಸ್ಪೆಕ್ಟರ್ (08392-240048), ಅಬಕಾರಿ ನಿರೀಕ್ಷಕರು (08392-277905).
ಸಿರುಗುಪ್ಪ ತಾಲೂಕು ಮಟ್ಟದ ಎಂಸಿಸಿ ತಂಡದ ಉಸ್ತುವಾರಿಯಾಗಿ ಬಳ್ಳಾರಿಯ ಸಹಾಯಕ ಆಯುಕ್ತರು, ಮುಖ್ಯಸ್ಥರಾಗಿ ಸಿರುಗುಪ್ಪ ತಹಸೀಲ್ದಾರ್ ಶಿವಕುಮಾರ್ (9448734321), ಸದಸ್ಯರಾಗಿ ಸಿರುಗುಪ್ಪ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ರೆಡ್ಡಿ (9480855130), ಸಿರುಗುಪ್ಪ ಪುರಸಭೆ ಮುಖ್ಯಾಧಿಕಾರಿ ಹಾಜಿಬಾಬು (9448695772), ಸಿರುಗಪ್ಪದ ಸಿಪಿಐ (9480803032, 08396-220333) ಅವರನ್ನು ನೇಮಿಸಲಾಗಿದೆ.
ತೆಕ್ಕಲಕೋಟೆ ನಗರ ಎಂಸಿಸಿ ತಂಡದ ಮುಖ್ಯಸ್ಥರಾಗಿ ಸಿರುಗುಪ್ಪ ತಹಸೀಲ್ದಾರ್ ಶಿವಕುಮಾರ್, ಸದಸ್ಯರಾಗಿ ಸಿರುಗುಪ್ಪ ಸಿಪಿಐ (9480803032, 08396 220333), ತೆಕ್ಕಲಕೋಟೆ ಪಪಂ ಮುಖ್ಯಾಧಿಕಾರಿ ಮಲ್ಲಿಕಾರ್ಜುನ (94499 85728), ತೆಕ್ಕಲಕೋಟೆ ಪಿಎಸ್ಐ (9480803055, 08392 248013) ನೇಮಕಗೊಂಡಿದ್ದಾರೆ. ಸಂಡೂರು ತಾಲೂಕು ಮಟ್ಟದ ಎಂಸಿಸಿ ತಂಡದ ಮುಖ್ಯಸ್ಥ - ಸಂಡೂರು ತಹಸೀಲ್ದಾರ್ ತಿಮ್ಮಯ್ಯ (96110 98622), ಸದಸ್ಯರು-ಸಂಡೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಈಶ್ವರ ಪ್ರಸಾದ್ (94482 33549), ಸಂಡೂರು ಪುರಸಭೆ ಮುಖ್ಯಾಧಿಕಾರಿ ಕುಂಠೋಜಿ (99008 11595), ಸಂಡೂರು ಸಿಪಿಐ (9480803036, 08395 260249).
ಹೊಸಪೇಟೆ ತಾಲೂಕು ಮಟ್ಟದ ಎಂಸಿಸಿ ತಂಡದ ಮುಖ್ಯಸ್ಥರು ಹಾಗೂ ಉಸ್ತುವಾರಿ - ಹೊಸಪೇಟೆ ಸಹಾಯಕ ಆಯುಕ್ತ ಅಶೋಕ (90368 28015), ಸದಸ್ಯರು- ಹೊಸಪೇಟೆ ನಗರ ಸಿಪಿಐ ಆರ್.ಎಂ. ಹೊನ್ನೂರು(94808 03070), ಹೊಸಪೇಟೆ ತಹಸೀಲ್ದಾರ್ ರಮೇಶ್ ರೆಡ್ಡಿ, (98444 78336), ಹೊಸಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಬಾಲಸ್ವಾಮಿ ದೇಶಪ್ಪ (8762367495), ಹೊಸಪೇಟೆ ನಗರಸಭೆ ಆಯುಕ್ತ ರಂಗಸ್ವಾಮಿ(99455 41467), ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಬಿ. ಬುಡ್ಡಪ್ಪ (81055 24444), ಕಮಲಾಪುರ ಪಪಂ ಮುಖ್ಯಾಧಿಕಾರಿ ನೂರುಲ್ಲಾ ಖಾನ್ (9448223931, 94487 29099), ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಬಿ. ಬಿರಣ್ಣಗಿ (97405 31985), ಕಂಪ್ಲಿ ಪಿಎಸ್ಐ(95386 33893, 08394 250333), ಕಮಲಾಪುರ ಪಿಎಸ್ಐ(9480803076, 08394 241240).
ಕೂಡ್ಲಿಗಿ ತಾಲೂಕು ಮಟ್ಟದ ಎಂಸಿಸಿ ತಂಡದ ಉಸ್ತುವಾರಿ- ಹೊಸಪೇಟೆ ತಾಪಂ ಕಾರ್ಯನಿರ್ವಹಣಾಧಿಕಾರಿ ಅನಿರುದ್ಧ ಶ್ರವಣ (9591217832), ಮುಖ್ಯಸ್ಥ - ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ (94499 80922), ಸದಸ್ಯರು -ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ ಜಿ.ಪಿ. ಚಾರಲಿಸ್ (94480 79568), ಕೂಡ್ಲಿಗಿ ಸಿಪಿಐ (9480803034, 08391 220033). ಕೊಟ್ಟೂರು ನಗರ ಎಂಸಿಸಿ ತಂಡದ ಸದಸ್ಯರು - ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ನಾಗರಾಜ್ ಭಟ್ಟ (94800 24110), ಕೊಟ್ಟೂರು ಪಪಂ ಮುಖ್ಯಾಧಿಕಾರಿ ಹನುಮಂತಮ್ಮ (99451 27076 ), ಕೊಟ್ಟೂರು ಪಿಎಸ್ಐ (9480803059, 08391 226333).
ಹೂವಿನಹಡಗಲಿ ತಾಲೂಕು ಮಟ್ಟದ ಎಂಸಿಸಿ ತಂಡದ ಉಸ್ತುವಾರಿಯಾಗಿ ಹೂವಿನಹಡಗಲಿ ತಹಸೀಲ್ದಾರ್ ಎಜಾಜ್ ಬೇಗ್ (98807 72308), ಸದಸ್ಯರನ್ನಾಗಿ ಹಡಗಲಿ ಪುರಸಭೆ ಮುಖ್ಯಾಧಿಕಾರಿ ವಿನಾಯಕ ಗಡಬೋಳೆ (94839 93954), ಹೂವಿನಹಡಗಲಿ ಸಿಪಿಐ (9480803030, 08399 240333) ಅವರನ್ನು ನೇಮಿಸಲಾಗಿದೆ.
ಉಲ್ಲಂಘನೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಲ್ಲ ನಗರ ತಾಲೂಕು ಮಟ್ಟದ ಎಂಸಿಸಿ ತಂಡದ ಮುಖ್ಯಸ್ಥರು ಚುನಾವಣೆ ಆಯೋಗ ನೀಡಿರುವ ಮಾದರಿ ಚುನಾವಣೆ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗಬೇಕು. ಯಾವುದೇ ಉಲ್ಲಂಘನೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಪ್ರತಿದಿನ ವರದಿಯನ್ನು ಜಿಲ್ಲಾ ಮಟ್ಟದ ತಂಡದ ಮುಖ್ಯಸ್ಥರಿಗೆ ಮತ್ತು ಸಂಬಂಧಿಸಿದ ತಹಸೀಲ್ದಾರರಿಗೆ ಸಲ್ಲಿಸಬೇಕು. ಒಟ್ಟಾರೆ ಕ್ರೋಡೀಕೃತ ವರದಿಯನ್ನು ಜಿಲ್ಲಾ ಮಟ್ಟದ ತಂಡದ ಮುಖ್ಯಸ್ಥರು ಪ್ರತಿ ದಿನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಬೇಕು ಹಾಗೂ ದಿನದ 24 ಗಂಟೆಗಳ ಕಾಲ ಕಂಟ್ರೋಲ್ ರೂಂ ಅನ್ನು ತೆರೆದು ಕಾರ್ಯನಿರ್ವಹಿಸಬೇಕು.
ತಂಡಗಳಲ್ಲಿರುವ ಅಧಿಕಾರಿಗಳು ಜಿಲ್ಲಾಧಿಕಾರಿ ಅನುಮತಿಯಿಲ್ಲದೆ ರಜೆ ಮೇಲೆ ನಿರ್ಗಮಿಸಿದಲ್ಲಿ ಹಾಗೂ ಕರ್ತವ್ಯ ಲೋಪವೆಸಗಿದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

