ಮಠಗಳು ಸಮಾಜಮುಖಿಯಾಗಿ ಬೆಳೆಯಲಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 16
ಮಠಗಳಿಗೆ ಧಾರ್ಮಿಕ ಕಾರ್ಯಕ್ರಮಗಳೊಂದೇ ಮುಖ್ಯವಲ್ಲ. ಅವು ಸಮಾಜಮುಖಿಯಾಗಿ ಬೆಳೆದು, ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯ ಇದೆ ಎಂದು ಕೊಣ್ಣೂರಿನ ಶ್ರೀ ಪ್ರಭುದೇವ ಸ್ವಾಮಿ ತಿಳಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ 90ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಶಿವದೀಕ್ಷಾ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬದುಕಿನಲ್ಲಿ ತ್ಯಾಗ ಮತ್ತು ಸಾಧನೆಯಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಆ ಗೌರವವೇ ಮನುಷ್ಯನ ಜನ್ಮವನ್ನು ಸಾರ್ಥಕಗೊಳಿಸುತ್ತದೆ ಎಂದರು. ಕೂಡ್ಲಿಗಿ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಜತೆ ಜ್ಞಾನ ದಾಸೋಹ ನೀಡಿದ ಹಿರಿಮೆ ಹಿರೇಮಠ ಶ್ರೀಗಳಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, 60ರ ದಶಕದಲ್ಲಿಯೇ ಬಾಲಕಿಯರಿಗಾಗಿ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ ಕೀರ್ತಿ ಹಿರೇಮಠ ಅವರದ್ದಾಗಿದೆ ಎಂದರು. ಸ್ವಾರ್ಥ ತೊರೆದು ವಿಶಾಲ ಮನೋಭಾವನೆ ರೂಢಿಸಿಕೊಂಡಾಗ ಮಾತ್ರ ವ್ಯಕ್ತಿ ಸಮಾಜಮುಖಿಯಾಗಿ ಬೆಳೆಯಬಲ್ಲ ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಏಳು ಜೋಡಿ ಹಸೆಮಣೆ ಏರಿದರು. ಹಿರೇಮಠ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಮುಖ್ಯಗುರುಗಳಾದ ಕೆ. ವೀರಪ್ಪ, ಕೆ.ಎಂ. ವೀರೇಶ ಶರ್ಮಾ, ಕೆ.ಎಚ್.ಎಂ. ವೀರಭದ್ರಯ್ಯ, ಯು.ಎಂ. ಕಲಾವತಿ, ಎಸ್.ಎಂ. ಶಿವರುದ್ರಯ್ಯ ಅವರನ್ನು ಸನ್ಮಾನಿಸಲಾಯಿತು.
ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಶಂಕರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ, ನಂದಿಪುರ ಮಹೇಶ್ವರ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಹೂವಿನಹಡಗಲಿ ಹಿರೇಶಾಂತವೀರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರ ಸ್ವಾಮೀಜಿ, ತಹಸೀಲ್ದಾರ್ ಜವರೇಗೌಡ, ಬಿಇಒ ಎಂ.ಆರ್. ಮಂಜುನಾಥ, ಎಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿ, ಎಸ್.ಎಂ. ನಿರಂಜನಮೂರ್ತಿ, ಅಂಗಡಿ ವೀರೇಶ, ಟಿ.ಜಿ. ಮಲ್ಲಿಕಾರ್ಜುನಗೌಡ, ಗ್ರಾಪಂ ಅಧ್ಯಕ್ಷ ಹಾಲೇಶ ಇತರರು ಇದ್ದರು. ಹಿರೇಮಠ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಚಾರ್ಯ ಸಿದ್ಧರಾಮ ಹಿರೇಮಠ ಸ್ವಾಗತಿಸಿದರು.
ಉಪನ್ಯಾಸಕ ಸುರೇಶ ಮುದ್ದೇಬಿಹಾಳ ವಂದಿಸಿದರು. ಶಿಕ್ಷಕ ಎಸ್.ಎಂ. ಮರುಳಸಿದ್ದಯ್ಯ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

