ಬಳ್ಳಾರಿ

ಮೈಲಾರ ಹುಂಡಿಯಲ್ಲಿ ರು. 14 ಲಕ್ಷ ಕಾಣಿಕೆ

Published On :

ಹೂವಿನಹಡಗಲಿ: ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆ ಫೆ. 17ರಿಂದ ಆರಂಭವಾಗಲಿದ್ದು, ದೇವಸ್ಥಾನದಲ್ಲಿನ 8 ಹುಂಡಿಗಳಲ್ಲಿ ಸುಮಾರು ರು. 14 ಲಕ್ಷಕ್ಕೂ ಹೆಚ್ಚು ಹಣ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತುಗುಂಡಿ ತಿಳಿಸಿದ್ದಾರೆ.
ಪ್ರತಿ ವರ್ಷ 4 ಬಾರಿ ಕಾಣಿಕೆ ಹುಂಡಿಯನ್ನು ತೆರೆಯಲಾಗುವುದು. ಈ ಹಿಂದೆ  2012ರಲ್ಲಿ ಕಾಣಿಕ ಹುಂಡಿಯನ್ನು ತೆರೆದಾಗ ಸುಮಾರು ರು. 20 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದ ಅವರು, ಪ್ರತಿ ಬಾರಿಯೂ ಕಾಣಿಕೆ ಹುಂಡಿಯನ್ನು ತೆರೆದಾಗ ಸಂಬಂಧಪಟ್ಟ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ಹಾಗೂ ಸಹಾಯಕ ಆಯುಕ್ತರು ಮತ್ತು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಗ್ರಹಗೊಂಡ ಹಣವನ್ನು ಎಣಿಕೆ ಮಾಡಲಾಗುತ್ತದೆ. ಎಣಿಕೆ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದ್ದು, ಗ್ರಾಮದ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಂದ ಎಣಿಕೆ ಮಾಡಲಾಯಿತು ಎಂದರು.
ನಕಲಿ ಗೊರವಪ್ಪಗಳಿದ್ದಾರೆ ಎಚ್ಚರಿಕೆ
ರಾಜ್ಯದಲ್ಲೇ 2ನೇ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಹೊಂದಿರುವ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ತಾವೇ ಕಾರ್ಣಿಕ ನುಡಿಯುವ ಗೊರವಪ್ಪನೆಂದು ಹೇಳಿಕೊಂಡು ಭಕ್ತರಿಂದ ಧನ, ಧಾನ್ಯಗಳನ್ನು ಸಂಗ್ರಹಿಸುತ್ತಾರೆಂಬ ಮಾಹಿತಿ ಬಂದಿದೆ ಎಂದ ಅವರು, ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಪ್ಪ ಮಾಲತೇಶಪ್ಪ ಮಲ್ಲಪ್ಪ ಕಾರ್ಣಿಕ. ಇವರೇ ಪ್ರತಿವರ್ಷ ಕಾರ್ಣಿಕ ನುಡಿಯುತ್ತಾರೆ. ಹೀಗಾಗಿ ಭಕ್ತರು ಮೋಸ ಹೋಗಬಾರದು. ಭಕ್ತರ ಮನೆಗೆ ಇಂತಹ ಗೊರವಪ್ಪನ ವೇಷಧಾರಿಗಳು ಬಂದರೆ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತುಗುಂಡಿ ಭಕ್ತರಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.