ಸಾಮರಸ್ಯ ಕೊರತೆ: ರಸ್ತೆಗಿಳಿಯದ ಬಸ್
ಕನ್ನಡಪ್ರಭ ವಾರ್ತೆ, ಸಂಡೂರು, ಫೆ. 11
ಸಂಡೂರು ಬಸ್ ಘಟಕದಲ್ಲಿ ವ್ಯವಸ್ಥಾಪಕರು-ಸಿಬ್ಬಂದಿ ನಡುವಿನ ಸಾಮರಸ್ಯ ಕೊರತೆಯಿಂದ ಕೆಲಕಾಲ ಬಸ್ ಸಂಚಾರ ಸ್ಥಗಿತಗೊಂಡಿತ್ತು. ವ್ಯವಸ್ಥಾಪಕರ ಧೋರಣೆ ವಿರೋಧಿಸಿ ಘಟಕದ ಹಲವು ಸಿಬ್ಬಂದಿ ಸೋಮವಾರ ಬಸ್ ಓಡಿಸಲು ನಿರಾಕರಿಸಿದರು.
ಸಂಡೂರು ತಾಲೂಕಿನಲ್ಲಿ ರಸ್ತೆಗಳು ಹದಗೆಟ್ಟಿದ್ದು, ಇಲ್ಲಿ ಇತರೆಡೆಗಳಂತೆ ಮೈಲೇಜ್ (ಕೆಎಂಪಿಎಲ್) ಕೊಡಲಾಗುವುದಿಲ್ಲ. ಹೀಗಾಗಿ ಉಂಟಾಗುವ ನಷ್ಟವನ್ನು ಸಿಬ್ಬಂದಿಯ ಸಂಬಳದಲ್ಲಿ ಕಡಿತಗೊಳಿಸುತ್ತಿದ್ದಾರೆ ಎಂಬುದು ಸಿಬ್ಬಂದಿ ಆರೋಪ. ಸಂಡೂರು ಬಸ್ ಘಟಕದಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಅವಶ್ಯ ಸಂದರ್ಭದಲ್ಲಿ ರಜೆ ನೀಡುತ್ತಿಲ್ಲ. ನೀರಿನ ಸೌಲಭ್ಯ ಸರಿಯಾಗಿಲ್ಲ. ಕೊರತೆಗಳ ಹೊರತಾಗಿಯೂ ಕೆಲಸ ಮಾಡಿದರೂ ವ್ಯವಸ್ಥಾಪಕರಿಂದ ಅವಾಚ್ಯ ಶಬ್ದಗಳನ್ನು ಕೇಳಿಸಿಕೊಳ್ಳಬೇಕಾಗಿದೆ. ನೋಟಿಸ್ ಪಡೆಯಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಇಲ್ಲಿ ಕೆಲಸ ಮಾಡುವುದೇ ಕಷ್ಟಕರವಾಗಿದೆ. ನಮ್ಮನ್ನು ಬೇರೆಡೆಗೆ ವರ್ಗ ಮಾಡಿ ಎಂದು ಕೇಳುವ ಪರಿಸ್ಥಿತಿ ಉದ್ಭವಿಸಿದೆ ಎಂದು ಸಿಬ್ಬಂದಿ ಹೇಳುತ್ತಾರೆ.
ಮಾತುಕತೆ: ಬಸ್ ಸಂಚಾರ ಸ್ಥಗಿತಗೊಳಿಸಿರುವ ವಿಚಾರ ತಿಳಿದು ಬಳ್ಳಾರಿ ಹಾಗೂ ಹೊಸಪೇಟೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಹಾಗೂ ವರ್ಕರ್ಸ್ ಫೆಡರೇಷನ್ ಮುಖಂಡರು ಆಗಮಿಸಿ, ಸಂಸ್ಥೆಯ ಅಧಿಕಾರಿಗಳು, ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು. ಸಂಸ್ಥೆ ಹಿತದೃಷ್ಟಿಯಿಂದ ಅಧಿಕಾರಿಗಳು-ಸಿಬ್ಬಂದಿ ನಡುವೆ ಸಾಮರಸ್ಯದ ಅಗತ್ಯ ಇದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸಿಬ್ಬಂದಿ-ವ್ಯವಸ್ಥಾಪಕರ ನಡುವೆ ಉದ್ಭವಿಸಿದ್ದ ಗೊಂದಲ ತಿಳಿಗೊಳಿಸಲಾಯಿತು. ಬಳಿಕ ಸಿಬ್ಬಂದಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಹಾಜರಾದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಹಾಗೂ ವರ್ಕರ್ಸ್ ಫೆಡರೇಷನ್ ರಾಜ್ಯ ಜಂಟಿ ಕಾರ್ಯದರ್ಶಿ ಆದಿಮೂರ್ತಿ, ವಿಭಾಗೀಯ ಅಧ್ಯಕ್ಷ ಜಿ. ಶ್ರೀನಿವಾಸ್, ಡಿವಿಜನಲ್ ಮೆಕ್ಯಾನಿಕಲ್ ಎಂಜಿನಿಯರ್ ಸಂತೋಷ್ ಹೂಗೇರಿ, ವಿಭಾಗೀಯ ಟ್ರಾಫಿಕ್ ಆಫೀಸರ್ ಶಿವಾನಂದ, ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕ ತೇಜಾನಾಯ್ಕ್, ಕರವೇ ತಾಲೂಕು ಅಧ್ಯಕ್ಷ ಎ. ರಾಜು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

