ಅರ್ಹರಿಗೆ ಮನೆ ಹಂಚಿ: ಡಿಸಿಗೆ ಮನವಿ
ಬಳ್ಳಾರಿ: ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಪಂ ವ್ಯಾಪ್ತಿಯ ಇಂದಿರಾ ಆವಾಸ್, ಬಸವಶ್ರೀ ಯೋಜನೆಗಳಲ್ಲಿ ನಡೆದಿರುವ ತಾರತಮ್ಯ ಸರಿಪಡಿಸಿ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಮೋಟಸೂಗೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇಂದಿರಾ ಆವಾಸ್, ಬಸವಶ್ರೀ ವಸತಿ ಯೋಜನೆಯಡಿ 2010ರಿಂದ 2013ನೇ ಸಾಲಿನಲ್ಲಿ ವಸತಿ ರಹಿತರಿಗೆ ಸರ್ಕಾರದಿಂದ ಮನೆಗಳು ಮಂಜೂರಾಗಿವೆ. ಆದರೆ, ಫಲಾನುಭವಿಗಳ ಆಯ್ಕೆಯಲ್ಲಿ ಸೂಕ್ತ ಮಾನದಂಡ ಅನುಸರಿಸದೆ, ಅರ್ಹರಲ್ಲದವರಿಗೂ ಮನೆ ಹಂಚಿಕೆ ಮಾಡುವ ಮೂಲಕ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಗ್ರಾಪಂ ಸದಸ್ಯರ ಸಂಬಂಧಿಕರಿಗೂ ಮನೆ ಹಂಚಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ತಿಳಿಸಿದರು. ಶ್ರೀಮಂತರು ಹಾಗೂ ರು. 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡವರೂ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಪಂ ಸದಸ್ಯರೂ ಸಹಕರಿಸುತ್ತಿದ್ದಾರೆ. ಈ ಅಕ್ರಮವನ್ನು ವಿರೋಧಿಸಿ ಡಿ. 19ರಂದು ಗ್ರಾಪಂ ಕಾರ್ಯದರ್ಶಿ, ಸಿರುಗುಪ್ಪ ತಹಸೀಲ್ದಾರ್, ಜಿಪಂ ಸಿಇಓಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಫಲಾನುಭವಿಗಳು ಮನೆಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಮನೆಗಳನ್ನು ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮಾಟಸೂಗೂರು ಗ್ರಾಮದ ಎನ್. ನಾಗಪ್ಪ, ರಾಮಪ್ಪ, ಈರಣ್ಣ, ಕೆ. ಚಂದ್ರಪ್ಪ, ರಮೇಶ್, ಶ್ರೀನಿವಾಸ್, ಪಾಲಾಕ್ಷಿ, ಎಚ್. ವೀರಭದ್ರಪ್ಪ, ಈಶ್ವರಪ್ಪ ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

