ಸೇವಾ ಮನೋಭಾವ ಮೈಗೂಡಿಸಿಕೊಳ್ಳಿ
ಬೆಳಗಾವಿ: ವೃತ್ತಿ ಬದುಕು ಅರ್ಥಪೂರ್ಣವಾಗಬೇಕಾದರೆ ಕಾನೂನು ವಿದ್ಯಾರ್ಥಿಗಳು ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ಸ್ಥಿರ ಲೋಕ ಅದಾಲತ್ನ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎ.ಎನ್. ಸೋಲಾಪುರಕರ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಗರದ ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನು ವೃತ್ತಿ ಮತ್ತು ವ್ಯಾಪಾರದಲ್ಲಿ ಅನೇಕ ವ್ಯತ್ಯಾಸಗಳಿವೆ. ಹೀಗಾಗಿ ಕಾನೂನು ವಿದ್ಯಾರ್ಥಿಗಳು ಮೊದಲು ವೃತ್ತಿಧರ್ಮ ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನ್ಯಾಯವಾದಿ ಆರ್.ಬಿ. ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯು.ಆರ್. ಹಿರೇಮಠ ವಾರ್ಷಿಕ ವರದಿ ಓದಿದರು. ಇದೇ ಸಂದರ್ಭದಲ್ಲಿ ಯುನಿವರ್ಸಿಟಿ ಬ್ಲೂ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಅವಿನಾಶ ಪಾಟೀಲ ಮತ್ತು ಹನುಮಂತ ಸರ್ವೆ ಅವರನ್ನು ಸನ್ಮಾನಿಸಲಾಯಿತು. 2013-14ನೇ ಸಾಲಿನ ಕ್ರೀಡೆ, ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಅಣಕು ನ್ಯಾಯಾಲಯದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಬಿ. ಜಯಸಿಂಹ ಸ್ವಾಗತಿಸಿದರು. ಮಧುರಾ ಕುಲಕರ್ಣಿ ವಂದಿಸಿದರು. ಪ್ರಿಯಶ್ರೀ ರಜಪುತ ಮತ್ತು ರಜಿಯಾ ಗಡದ ಕಾರ್ಯಕ್ರಮ ನಿರೂಪಿಸಿದರು.
ನಕಲಿ ಜಾತಿ ಪ್ರಮಾಣಪತ್ರ ನೀಡಿ ನೌಕರಿ ಗಿಟ್ಟಿಸಿದ್ದ ವ್ಯಕ್ತಿ ಬಂಧನ
ಬೆಳಗಾವಿ: ನಕಲಿ ಜಾತಿ ಪ್ರಮಾಣಪತ್ರ ನೀಡಿ ಕಂಡಕ್ಟರ್ ನೌಕರಿಗೆ ಸೇರಿದ್ದ ಆರೋಪಿಯನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜಿರುಪಡಿಸಿದ್ದಾರೆ.
ಹುಬ್ಬಳಿಯ ಕೇಶ್ವಾಪುರದ ನಿವಾಸಿ ಉಮೇಶ ನಾಗಯ್ಯ ಹಿರೇಹಾಳ ಲಿಂಗಾಯತ ಜಾತಿಗೆ ಸೇರಿದ್ದರೂ, ನಕಲಿ ದಾಖಲೆ ಸೃಷ್ಟಿಸಿ ಬೇಡ ಜಂಗಮ ಎಂದು ಹುಬ್ಬಳ್ಳಿ ತಹಸೀಲ್ದಾರ ಅವರಿಂದ 5.8.1993 ರಂದು ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದ. 4.9.1995ರಲ್ಲಿ ಕೆಎಸ್ಆರ್ಟಿಸಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ಅಡಿ ಕಂಡೆಕ್ಟರ್ ನೌಕರಿ ಸೇರಿದ್ದ. ಆದರೆ, ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಅನುಮಾನಗೊಂಡ ಧಾರವಾಡ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಈ ಪ್ರಕರಣವನ್ನು ಬೆಳಗಾವಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಿದ್ದರು.
ಜಾರಿ ನಿರ್ದೇಶನಾಲಯ ಪ್ರಕರಣ ತನಿಖೆ ನಡೆಸಿದಾಗ ಆರೋಪಿ ಸುಳ್ಳು ಜಾತಿ ಪ್ರಮಾಣಪತ್ರ ಸೃಷ್ಟಿಸಿರುವುದು ಖಚಿತವಾಗಿದೆ.
ಆರೋಪಿ ವಿರುದ್ಧ ಜಾರಿ ನಿರ್ದೇಶನಾಲಯದ ಪೊಲೀಸರು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೌರ್ಜನ್ಯ ಪ್ರತಿಬಂಧ ಕಾಯ್ದೆ ಸೇರಿದಂತೆ ವಿವಿಧ ಕಲಂ ನಡಿ ಪ್ರಕರಣ ದಾಖಲಿಸಿದ್ದಾರೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಅಶೋಕ ಕುರೇರ ಹಾಗೂ ಡಿವೈಎಸ್ಪಿ ಎಸ್.ಟಿ. ಪಡಗಣ್ಣವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಂ. ಕಾಲಿಮಿರ್ಚಿ ನೇತೃತ್ವ ತಂಡ ತನಿಖೆ ಕೈಗೊಂಡು ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದೆ.
ಉತ್ತಮ ಫಲಿತಾಂಶ
ಕಾಗವಾಡ: ಇಲ್ಲಿನ ಶಿವಾನಂದ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಕಲಾ ವಿಭಾಗದ ಪರೀಕ್ಷೆಯಲ್ಲಿ ತೈಜುಮ ಮುಲ್ಲಾ ಶೇ. 86.5ರಷ್ಟು ಅಂಕ ಪಡೆದು ಪ್ರಥಮ, ಕಿರಣ ಲಮಾಣಿ ಶೇ. 83.5ರಷ್ಟು ಅಂಕ ಪಡೆದು ದ್ವಿತೀಯ, ಶ್ರೀಧರ ಕಾಂಬಳೆ ಶೇ. 80.3ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.
ವಿಜ್ಞಾನ ವಿಭಾಗದಲ್ಲಿ ರವಿ ಬಾಡಗೆ ಶೇ. 85.8ರಷ್ಟು ಅಂಕ ಪಡೆದು ಪ್ರಥಮ, ಸುಪ್ರಿಂಾ ಶಿರಗಾಂವೆ ಶೇ. 85.3 ಅಂಕ ಪಡೆದು ದ್ವಿತೀಯ, ಸೋಮಂ್ಯಾ ವಾಘಮೋಡೆ ಶೇ. 84.3 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಕಲ್ಯಾಣಿ ಸಾಳುಕೆ ಶೇ. 84.6ರಷ್ಟು ಅಂಕ ಪಡೆದು ಪ್ರಥಮ, ಶಿವಾನಿ ಕಾವೇರಿ ಶೇ. 84.3 ಅಂಕ ಪಡೆದು ದ್ವಿತೀಂು, ಸ್ನೇಹಾ ಪಾಟೀಲ ಶೇ. 83.8 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ ಎಂದು ಪ್ರಾಚಾಂರ್ು ಎ.ಬಿ. ಕುಪಾಟೆ ತಿಳಿಸಿದ್ದಾರೆ.
ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ
ಂುಮಕನಮರಡಿ: ಸಮೀಪದ ದಡ್ಡಿ -ರಾಮೇವಾಡಿ ಗ್ರಾಮದ ಎಸ್ಟಿ ಕಾಲೋನಿಂುಲ್ಲಿ ಸಿಮೆಂಟ ರಸ್ತೆ ನಿರ್ಮಾಣ ಕಾಮಗಾರಿಗೆ ಹುಕ್ಕೇರಿ ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ನಿರ್ದೇಶಕ ವಿಷ್ಣು ರೇಡೆಕರ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಿದರು.
ಸಚಿವ ಸತೀಶ ಜಾರಕಿಹೊಳಿ ಅವರು ಕರ್ನಾಟಕ ನೀರಾವರಿ ನಿಗಮದ ಎಸ್ಸಿಪಿ,ಟಿಎಸ್ಪಿ ಂೋಜನೆ ಂುಡಿಂುಲ್ಲಿ ಕಾಮಗಾರಿಗೆ ಸುಮಾರು ರು. 20 ಲಕ್ಷ ಅನುದಾನ ಮಂಜೂರು ಮಾಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಮೀಟಿ ಸದಸ್ಯ ಆರ್.ಕೆ. ದೇಸಾಯಿ, ಕನೀನಿ ಸಹಾಂುಕ ಅಭಿಂುಂತರ ರವಿ ಹುಬಳಿ, ಎಸ್.ಎ. ಕಲ್ಕುಟಗಿ, ಮಾರುತಿ ಪಾಟೀಲ, ದುಂಡಣ್ಣಾ ರಗಶೆಟ್ಟಿ, ಪ್ರಮೋದ ರಗಶೆಟ್ಟಿ, ದಂಾನಂದ ಪಾಟೀಲ, ಸಂಜು ಮೂಡಲಗಿ, ಸಿರಾಜುದ್ದೀನ ಮುಲ್ಲಾ, ನಾಗವ್ವಾ ತಳವಾರ, ಅಕ್ಕುತಾಯಿ ಮುಂಗರವಾಡಿ, ಎಚ್.ಎ. ಪುರಂದರೆ, ಮಾಂ್.ಕೆ. ಗಾಡಿವಡ್ಡರ, ಹನುಮಂತಪ್ಪಾ, ಟಿ.ವಿ. ಪವಾರ ಇದ್ದರು.
ಮಣಗುತ್ತಿ ವರದಿ: ಯಮಕನಮರಡಿ ಸಮೀಪದ ಮಣಗುತ್ತಿ ಗ್ರಾಮದ ಎಸ್ಸಿ ಕಾಲೋನಿಂುಲ್ಲಿ ಸಿಮೆಂಟ ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಕಾಂಗ್ರೆಸ್ ಕಮೀಟಿ ಸದಸ್ಯ ಆರ್.ಕೆ. ದೇಸಾಯಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಸಚಿವ ಸತೀಶ ಜಾರಕಿಹೊಳಿಯವರು ಕರ್ನಾಟಕ ನೀರಾವರಿ ನಿಗಮದ ಎಸ್ಸಿಪಿ/ಟಿಎಸ್ಪಿ ಂೋಜನೆಂುಡಿಂುಲ್ಲಿ ಕಾಮಗಾರಿಗೆ ರು. 10 ಲಕ್ಷ ಅನುದಾನವನ್ನು ನೀಡಿದ್ದಾರೆ.
ಸಂಘಟಿತರಾಗಲು ಉಪ್ಪಾರ ಸಮಾಜಕ್ಕೆ ಸಲಹೆ
ಮೂಡಲಗಿ: ಇಂದು ಸರ್ಕಾರದ ಎಲ್ಲ ಸಹಾಂು, ಸೌಲಭ್ಯಗಳನ್ನು ಪ್ರಬಲ ಜಾತಿ ಮತ್ತು ರಾಜಕೀಂು ವ್ಯಕ್ತಿಗಳ ಪ್ರಭಾವದಿಂದ ಬಡವರಿಗೆ ದೊರೆಂುದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಾಮರಾಜನಗರ ಶಾಸಕ ಹಾಗೂ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಬುಧವಾರ ಸಂಜೆ ಸ್ಥಳೀಂು ನಾಗಲಿಂಗೇಶ್ವರ ಅರ್ಬನ್ ಸೊಸೈಟಿಗೆ ಸೌಹಾರ್ದಂುತ ಭೇಟಿ ನೀಡಿದ ಸಂದರ್ಭದಲ್ಲಿ ಮೂಡಲಗಿ ಉಪ್ಪಾರ ಸಮಾಜ ಬಾಂಧವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 40 ಲಕ್ಷ ಉಪ್ಪಾರ ಬಾಂಧವರಿದ್ದರೂ ಸರ್ಕಾರ ಈ ಸಮಾಜವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಸಮಾವೇಶದಿಂದ ಸರ್ಕಾರ ಹಾಗೂ ರಾಜಕೀಂು ಪಕ್ಷಗಳು ಉಪ್ಪಾರ ಸಮಾಜವನ್ನು ಕಣ್ಣೆತ್ತಿ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಪತ್ರಕರ್ತ ಎ.ವಿ.ಲೋಕೇಶಪ್ಪ ಮಾತನಾಡಿದರು. ಬಿ.ಬಿ.ಹಂದಿಗುಂದ, ಯು.ವೆಂಕೂಬಾ, ವಿಷ್ಣು ಲಾತೂರ, ಶಿವಬಸು ಹಂದಿಗುಂದ, ಲಕ್ಷ್ಮಣ ಅಡಿಹುಡಿ, ಶಿವರಾಂು ಕಂಕಣವಾಡಿ, ಮಾಂ್.ಮಾಂ್.ಸುಲ್ತಾನಪೂರ, ಶಿವಪ್ಪ ಅಟಮಟಿ, ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

