ಸಂಭ್ರಮದ ನರಸಿಂಹ ರಥೋತ್ಸವ
ಅಥಣಿ:ನರಸಿಂಹ ಜಯಂತಿ ಅಂಗವಾಗಿ ಸ್ಥಳೀಯ ನರಸಿಂಹ ದೇವರ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ನಡುವೆ ಜರುಗಿತು.
ಕೇದಿಗೆ, ಸೇವಂತಿ, ಮಲ್ಲಿಗೆ, ಗುಲಾಬಿ, ಕನಕಾಂಬರ, ಜಾಜಿ ಹೀಗೆ ವಿವಿಧ ಹೂ, ಬಾಳೆ ಎಲೆ, ಬಾಳೆಯ ದಿಂಡು, ತೆಂಗಿನ ಗರಿಗಳಿಂದ ರಥ ಸಿಂಗರಿಸಲಾಗಿತ್ತು.
ಚಿಕ್ಕ ಮಕ್ಕಳ ಕೋಲಾಟ ಆಕಷರ್ಣಿಯವಾಗಿ ಕಂಡು ಬಂತು. ರಥೋತ್ಸವನಂತರ ನರಸಿಂಹ ದೇವರಿಗೆ ಭಕ್ತರು ನೈವೇದ್ಯ ಅರ್ಪಿಸಿದರು.
ನರಸಿಂಹ ದೇವರ ದೇವಸ್ಥಾನದಿಂದ ಆರಂಭವಾದ ರಥೋತ್ಸವವು ಕುಂಬಾರ ಗಲ್ಲಿ, ಶಹರೆ ಗಲ್ಲಿ, ದೇಸಾಯಿ ವಾಡೆ, ಹನುಮಾನ ಮಂದಿರ, ಮುರುಘೇಂದ್ರ ಬ್ಯಾಂಕ್ ಮುಖ್ಯ ರಸ್ತೆಯ ಮೂಲಕ ಸಂಚರಿಸಿತು.
ರಥೋತ್ಸವದಲ್ಲಿ ಅಡಿವೇಶ ಆಚಾರ್ಯ ಜೋಶಿ, ಶ್ರೀರಾಮ ಕಟ್ಟಿ, ಸುನೀಲ ಕುಲಕರ್ಣಿ, ಬಿಂಧುಮಾಧವ ಜೋಶಿ, ವಾದಿರಾಜ ಜಂಬಗಿ, ರಾಜು ಪಾಟೀಲ, ವಿಜಯ ಕುಲಕರ್ಣಿ, ಶ್ರೀನಿವಾಸ ಜೋಶಿ, ಮಾಧವ ಕಾತವಟೆ, ಎಂ.ಜಿ. ಜೋಶಿ, ಹರೀಶ ಶಿರೂರ, ಮುಕುಂದ ಪಾಟೀಲ, ವಾದಿರಾಜ ಬಾದರಾಯನಿ, ಕನ್ನಯ್ಯಾ ಪಾಟೀಲ, ಶ್ರೀರಂಗ ಕಟ್ಟಿ, ತಿರುಪತಿ ಹೆರಕಲ್, ಸುರೇಶ ಜೋಶಿ, ಶಾರದಾ ಕಟ್ಟಿ, ರೂಪಾ ಜೋಶಿ, ಅರ್ಚನಾ ಗೋಟೆ, ಲಕ್ಷ್ಮೀ ಪಾಟೀಲ, ಸುಜಾತಾ ಜೋಶಿ ಮುಂತಾದವರಿದ್ದರು. ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಬ್ರಾಹ್ಮಣ ಸಮಾಜದ ಹಿರಿಯ ಜೀವಿ ರಾಧಾಬಾಯಿ ಕೃಷ್ಣಾಚಾರ್ಯ ಕೆರೂರ (102) ಉತ್ಸವ ಸಮಿತಿ ವತಿಯಿಂದ ಅಡಿವೇಶಾಚಾರ್ಯ ಜೋಶಿ ಸತ್ಕರಿಸಿದರು. ವಾದಿರಾಜ ಜಂಬಗಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

