ಬೆಳಗಾವಿ

ಮಿತ ನೀರು ಬಳಸಿ

Published On :

ಬೆಳಗಾವಿ: ಸಕ್ಕರೆ ಉದ್ದಿಮೆಯಲ್ಲಿ ಅಧಿಕ ನೀರಿನ ಬಳಕೆಯಿಂದ ಕಲುಷಿತ ಪ್ರಮಾಣ ಹೆಚ್ಚಾಗಿ ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ, ವಾತಾವರಣದಲ್ಲಿ ದುಷ್ಪರಿಣಾಮ ಉಂಟಾಗುತ್ತದೆ ಎಂದು ಸಕ್ಕರೆ ಉದ್ದಿಮೆ ಮಾಲಿನ್ಯ ನಿಯಂತ್ರಣ ತಜ್ಞ ಡಾ. ಸುಬ್ಬರಾವ ಹೇಳಿದ್ದಾರೆ.
ಮಂಗಳವಾರ ನಗರದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಕ್ಕರೆ ಉದ್ದಿಮೆಯ ಮಾಲಿನ್ಯ ಉಪಚರಿಕೆಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  
ಈಗ ಸಕ್ಕರೆ ಉದ್ದಿಮೆಯಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬ್ನು ನುರಿಸಲು 200 ಲೀಟರ್ ನೀರನ್ನು ಉಪಯೋಗಿಸಲಾಗುತ್ತಿದೆ. ಈ ನೀರಿನ ಪ್ರಮಾಣವನ್ನು 100 ಲೀಟರ್‌ಗೆ ಇಳಿಸಬೇಕು. ಆಗ ಕಡಿಮೆ ನೀರಿನ ಬಳಕೆಯಿಂದ ಮತ್ತು ಕಬ್ಬಿನಲ್ಲಿರುವ ನೀರಿನ ಅಂಶದಿಂದ ಸಕ್ಕರೆ ಕಾರ್ಖಾನೆ ನಡೆಸಲು ಸಾಧ್ಯವಿದೆ ಎಂದರು.
ಮದ್ಯಸಾರ ಘಟಕಗಳಲ್ಲಿ ಒಂದು ಲೀಟರ್ ಮದ್ಯಸಾರ ತಯಾರಿಸಲು ಈಗ 8-10 ಲೀಟರ್ ನೀರನ್ನು ಬಳಸಲಾಗತ್ತಿದೆ.  ಹೊಸ ತಂತ್ರಜ್ಞಾನ ಬಳಸುವುದರಿಂದ 4-5 ಲೀಟರ್ ವರೆಗೆ ಈ ಪ್ರಮಾಣವನ್ನ್ನು ಇಳಿಸಬಹುದು. ಸಕ್ಕರೆ ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ಮೂಲಕ ಕಾರ್ಖಾನೆಯ ಆರ್ಥಿಕತೆಯನ್ನು ಸುಧಾರಿಸಲು ಸಾಧ್ಯ ಎಂದರು. ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ. ಆರ್. ಬಿ. ಖಾಂಡಗಾವೆ ಮಾತನಾಡಿ, ಸಕ್ಕರೆ ಉದ್ದಿಮೆಯಲ್ಲಿ ಮಾಲಿನ್ಯದ ಉಪಚರಿಕೆ ಅತ್ಯಂತ ಮಹತ್ವದಾಗಿದ್ದು, ಹಲವಾರು ತ್ಯಾಜ್ಯ ವಸ್ತುಗಳನ್ನ್ನು ಉಪಯುಕ್ತ ವಸ್ತುಗಳನ್ನ್ನಾಗಿ ಪರಿವರ್ತಿಸಲು ನೂತನ ತಂತ್ರಾಜ್ಞಾನ ಸಹಾಯ ಪಡೆಯುವುದು ಅಗತ್ಯವಿದೆ. ಆಗ ಸಕ್ಕರೆ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಆಗುವುದನ್ನು ತಪ್ಪಿಸಬಹುದು ಎಂದರು.  ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ಎಂ. ಎ. ಮನಿಯಾರ, ಶರದ ಪೈ ಆಗಮಿಸಿದ್ದರು. ಜಿಲ್ಲಾ ಮಾಲಿನ್ಯ ನಿಯಂತ್ರಣ ನಿಗಮದ ಅಧಿಕಾರಿ ಎಚ್.ಐ. ಜಗದೀಶ ನಿರೂಪಿಸಿ, ವಂದಿಸಿದರು. ಈ ವಿಚಾರ ಸಂಕಿರಣಕ್ಕೆ ಸಕ್ಕರೆ ಕಾರ್ಖಾನೆಯ ಮಾಲಿನ್ಯ ಉಪಚರಿಕೆಯ ತಜ್ಞರು, ರಾಜ್ಯದ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಮಾಲಿನ್ಯ ಉಪಚರಿಕೆ ಒ ದಗಿಸುವ ತಂತ್ರಜ್ಞಾನದ ಪ್ರತಿನಿಧಿಗಳು ಭಾಗವಹಿಸಿದ್ದರು.

ಈಗ ಸಕ್ಕರೆ ಉದ್ದಿಮೆಯಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬ್ನು ನುರಿಸಲು 200 ಲೀಟರ ನೀರನ್ನು ಉಪಯೋಗಿಸಲಾಗುತ್ತಿದೆ. ಈ ನೀರಿನ ಪ್ರಮಾಣವನ್ನು 100 ಲೀಟರ್‌ಗೆ ಇಳಿಸಬೇಕು. ಆಗ ಕಡಿಮೆ ನೀರಿನ ಬಳಕೆಯಿಂದ ಮತ್ತು ಕಬ್ಬಿನಲ್ಲಿರುವ ನೀರಿನ ಅಂಶದಿಂದ ಸಕ್ಕರೆ ಕಾರ್ಖಾನೆ ನಡೆಸಲು ಸಾಧ್ಯವಿದೆ.
 ಡಾ. ಸುಬ್ಬರಾವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.