ಬೆಳಗಾವಿ

ಮಹಾಡ ಚೌಧರ ಕೆರೆ ವಿಜಯೋತ್ಸವ

Published On :

ಬೆಳಗಾವಿ: 1927 ರ ಮಾರ್ಚ್ 20 ರಂದು ಮಹಾರಾಷ್ಟ್ರದ ಮಹಾಡ ಚೌಧರ ಕೆರೆ ನೀರು ಬಳಕೆಗೆ ದಲಿತರಿಗೆ ಸಮಾನ ಹಕ್ಕು ನೀಡಬೇಕೆಂದು ನಡೆಸಿದ ಹೋರಾಟಕ್ಕೆ ಸಿಕ್ಕ ಜಯದ ಸ್ಮರಣಾರ್ಥ ಆಚರಿಸಿಕೊಂಡು ಬರುತ್ತಿರುವ ಮಹಾಡ ಚೌಧರ ಕೆರೆ ವಿಜಯೋತ್ಸವ ಮೆರವಣಿಗೆಯು ಗುರುವಾರ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ ಧಾಮಣೆ ಗ್ರಾಮದ ಅಂಬೇಡ್ಕರ ಗಲ್ಲಿಯಲ್ಲಿನ ಅಂಬೇಡ್ಕರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಡಾ. ಬಾಬಾಸಾಹೇಬ ಅಂಬೇಡ್ಕರ ಯುವ ಮಂಚ್ ಕಾರ್ಯಕರ್ತರ ನೇತೃತ್ವದಲ್ಲಿ ಮೆರವಣಿಗೆಯ ಭೀಮಜ್ಯೋತಿಯನ್ನ್ನು ವಡಗಾವ, ಶಹಾಪುರ, ನಾಥ ಪೈ ವೃತ್ತ, ಪಿ.ಕೆ.ಕ್ವಾರ್ಟರ್ಸ್, ಬಸವೇಶ್ವರ ವೃತ್ತ, ಕ್ಯಾಂಪ್, ಧರ್ಮವೀರ ಸಂಭಾಜಿ ವೃತ್ತ, ಕಾಲೇಜ್ ರಸ್ತೆ, ಚನ್ನಮ್ಮ ವೃತ್ತ, ಕ್ಲಬ್ ರಸ್ತೆ, ವಿಶ್ವೇಶ್ವರಯ್ಯ ನಗರ ಮಾರ್ಗವಾಗಿ ಬುದ್ಧವಿಹಾರ ಭವನಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜು ಶಿಂಘೆ, ಉಪಾಧ್ಯಕ್ಷ ಸೂರ್ಯಕಾಂತ ಕೋಲ್ಕಾರ, ಕಾರ್ಯದರ್ಶಿ ಗಜಾನನ ದೇವರಮನಿ, ಸಿದ್ರಾಯಿ ಮೇತ್ರಿ, ಭರಮೇಶ ತಳವಾರ, ವೆಂಕಟೇಶ ಮೊದಗಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಲಹೆ
ಮೂಡಲಗಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಬೇಕು. ಕನಸಿನ ಹಕ್ಕಿಗೆ ರೆಕ್ಕೆ ಮೂಡಿದಾಗ ಬಾನಂಗಳಲ್ಲಿ ಹಾರಾಡಲು ಸಾಧ್ಯ ಎಂದು ಮೂಡಲಗಿ ಎಸ್.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಂರ್ು ಡಾ. ರವಿ ಕೋಕಟನೂರ ಹೇಳಿದರು.
ಗುಲಾಪುರ ಸರ್ಕಾರಿ ಪ್ರೌಢಶಾಲೆಂು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳು ಪುಸ್ತಕಗಳ ಗೆಳೆತನ ಬೆಳೆಸಿಕೊಂಡು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡರೆ ಂುಶಸ್ಸು ನಮ್ಮ ಕೈ ವಶವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಮಾತನಾಡಿ, ಮಕ್ಕಳ ಶ್ರೇಂೋಭಿವೃದ್ಧಿಗೆ ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮಹತ್ವವಾಗಿದೆ, ಮಕ್ಕಳಿಗೆ ಶಿಕ್ಷಣದ ಜೊತೆ ಒಳ್ಳೆಂು ನಡತೆ, ಸಂಸ್ಕೃತಿ ನೀಡಬೇಕು ಎಂದರು.
ಮುಖ್ಯ ಶಿಕ್ಷಕ ಎಸ್.ಎಚ್.ಸೋನೋನಿ, ಶಿಕ್ಷಕ ಪಿ.ಬಿ.ಮದಬಾವಿ ಮಾತನಾಡಿದರು. ಡಿ.ಕೆ.ದೇವರಮನಿ ಉಪನ್ಯಾಸ ನೀಡಿದರು. ಭೂದಾನಗಿಳನ್ನು ಸತ್ಕರಿಸಲಾಯಿತು.
ಶಿವಾನಂದ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಂ. ಮುಕ್ಕುಂದ ಅಧ್ಯಕ್ಷತೆ ವಹಿಸಿದರು. ಪುರಸಭೆ ಸದಸ್ಯರಾದ  ರಾಮಪ್ಪ ನೇಮಗೌಡರ, ಲಕ್ಷ್ಮಣ ಹಳ್ಳೂರ, ಕಮಲವ್ವ ಹಳಬರ ಹಾಗೂ ಕಾಶವ್ವ ರಂಗಾಪೂರ, ಎಲ್.ಎಸ್. ಗೌರಾಣಿ, ರಾಮಪ್ಪ ಮುಗಳಖೋಡ, ಕೆಂಪ್ಪಣ್ಣ ದೇವರಮನಿ, ಲಕ್ಷ್ಮಣ ನೇಮಗೌಡ್ರ, ಲಕ್ಷ್ಮಣ ರಂಗಾಪೂರ, ಸಿದ್ದಪ್ಪ ಮುಗಳಖೋಡ, ಆರ್.ಬಿ. ಗೋಕಾಕ, ಆರ್.ಎಂ. ಪಾಟೀಲ್, ಎ.ಎಸ್.ಶಾಬಣ್ಣವರ, ಎಂ.ಆರ್. ಬಿದರಿ, ಎಸ್.ಸಿ.ಅರಗಿ, ಜಿ.ಎಂ.ಜಗದಾಳ ಮತ್ತಿತರರು ಇದ್ದರು.
ಮುಖ್ಯಾಧ್ಯಾಪಕ ಎಸ್.ಬಿ. ತುಪ್ಪದ ಸ್ವಾಗತಿಸಿದರು. ಎಸ್.ಕೆ.ಹಳದಕಿ  ನಿರೂಪಿಸಿದರು. ಸುಜಾತಾ ರಾಮಗಿರಿ ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.