ಸಮ್ಮೇಳನಕ್ಕೆ ಚಿತ್ರಕಲೆ ಕಳೆ
ಆಲಮೇಲ: ಬಿಜಾಪುರ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಇಲ್ಲಿನ ಎ.ಕೆ. ನಂದಿ ಶಿಕ್ಷಣ ಸಂಸ್ಥೆಯ ಕಟ್ಟಡದ ಮೊದಲ ಮಹಡಿಯಲ್ಲಿ ಕಳೆದ ಎರಡು ದಿನಗಳಿಂದ ಏರ್ಪಡಿಸಿರುವ ಕಲಾ ತಿಲಕ ಅಬ್ದುಲ್ರಹೀಮ್ ಆಲಮೇಲಕರ ಚಿತ್ರಕಲಾ ಪ್ರದರ್ಶನಾಲಯ ಚಿತ್ರಕಲೆ ಆಸಕ್ತರನ್ನು ಆಕರ್ಷಿಸುತ್ತಿದೆ.
ಎ.ಜಿ. ನೇಲಗಿ, ಡಾ. ಜಿ.ಎಸ್. ಭೂಸಗೊಂಡ, ಜಿ.ಜಿ. ಕಿಣಗಿ, ಎಸ್.ವಿ. ಬಡಿಗೇರ, ಡಿ.ಎ. ಬಿರಾದಾರ, ವಿ.ವಿ. ಹಿರೇಮಠ, ಆರ್.ಆರ್. ಮಹಾಜನ್, ಎಸ್.ಎಸ್. ಕೋಲಕಾರ, ಸಂಜೀವ ಬಡಿಗೇರ ಸೇರಿದಂತೆ ಸುಮಾರು 9 ಕಲಾವಿದರ ವಿವಿಧ ಚಿತ್ರಕೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಲ್ಯಾಂಡ್ ಸ್ಕೇಪ್, ಆಧುನಿಕ, ನವ್ಯ ಕಲೆ, ಸಂಯೋಜನಾ ಚಿತ್ರಕಲೆ, ಚುಕ್ಕಿಚಿತ್ರಗಳು, ಬಾಟಿಕ್ ಕಲೆ, ವ್ಯಕ್ತಿ ಚಿತ್ರಗಳು, ಪೌರಾಣಿಕ ಚಿತ್ರಗಳು ಸೇರಿದಂತೆ ವಿವಿಧ ಬಗೆಯ ಚಿತ್ರಕಲೆಗಳು ಪ್ರದರ್ಶಿತಗೊಂಡಿದ್ದವು.
ಸಮ್ಮೇಳನದ ಸಂಘಟಕರು ಚಿತ್ರಕಲಾವಿದರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿ ಪ್ರದರ್ಶಿತಗೊಂಡ ಚಿತ್ರಗಳಲ್ಲಿ ಮೂರು ಅತ್ಯುತ್ತಮ ಬಹುಮಾನ ಸಹ ನೀಡಿದರು. ಇದರಲ್ಲಿ ಅಶೋಕ ನೇಲಗಿ ರಚಿತ ಗೋವರ್ಧನ ಕಲಾಕೃತಿಗೆ ಪ್ರಥಮ, ವಿ.ವಿ. ಹಿರೇಮಠ ರಚಿಸಿದ ಗೋಲಗುಂಬಜ್ ನಿಸರ್ಗ ಚಿತ್ರಕ್ಕೆ ದ್ವಿತೀಯ, ಅಶೋಕ ಮಾನವಾರ ರಚಿಸಿದ ಮ್ಯಾಸೇಜ ಟು ಸೊಸೈಯಿಟಿ ಚಿತ್ರಕ್ಕೆ ತೃತೀಯ ಬಹುಮಾನ ನೀಡಲಾಗಿದೆ. ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿ ಚಿತ್ರಗಳನ್ನು ಮಾರಾಟ ಮಾಡುವ ವ್ಯವಸ್ಥೆ ಸಹ ಮಾಡಲಾಗಿತ್ತು.
ಅಬ್ದುಲ್ ರಹೀಂ: ಉತ್ತರ ಕರ್ನಾಟಕದ ಚಿತ್ರಕಲಾ ಜಗತ್ತಿನ ಚಂದ್ರವರ್ಮ ಎಂದೇ ಖ್ಯಾತರಾಗಿದ್ದ ಕಲಾತಿಲಕ ಅಬ್ದುಲ್ರಹೀಂ ಆಲಮೇಲಕರ ಅವರು ಗ್ರಾಮೀಣ ಕಲೆಯ ಬದುಕೇ ಅವರ ಕಲೆಯ ಜೀವಾಳವಾಗಿತ್ತು. ಇವರು 10 ಸಾವಿರಕ್ಕಿಂತಲೂ ಹೆಚ್ಚು ಕಲಾಕೃತಿಗಳ ರಚನೆ ಮಾಡಿದ್ದಾರೆ. ಇವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಪ್ರದರ್ಶಿತಗೊಂಡಿವೆ. ಇವರು 20 ಚಿನ್ನದ ಪದಕ, 40 ಬೆಳ್ಳಿ ಪದಕ ಪಡೆಯುವ ಮೂಲಕ ಚಿತ್ರಕಲಾ ಜಗತ್ತಿನ ಮೇರುವ್ಯಕ್ತಿಯಾಗಿದ್ದಾರೆ. ಇಂತಹ ಮೇರುಕಲಾವಿದನಿಗೆ ಸಮ್ಮೇಳನ ಅವರ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.
ಕಲಾವಿದರಾದ ಡಿ.ಎ. ಬಿರಾದಾರ, ಜಿ.ಸಿ.ಸಬರದ ಅವರು, ಸಮ್ಮೇಳನವು ಚಿತ್ರಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಪ್ರದರ್ಶನ ಹಮ್ಮಿಕೊಂಡಿರುವುದು ಶ್ಲಾಘನೀಯ. ಪುಸ್ತಕಗಳು ಮಾರಾಟ ಆದಂತೆ ಚಿತ್ರಕಲಾಕೃತಿಗಳು ಮಾರಾಟವಾದರೆ ಕಲಾವಿದರಿಗೆ ಪ್ರೋತ್ಸಾಹ ನೀಡಲು ಸಾಧ್ಯ. ಎಲ್ಲರೂ ಚಿತ್ರಕಲಾಕೃತಿಗಳು ಸಂಗ್ರಹ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಸಿದ್ದಲಿಂಗ ಕಿಣಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

