ಬಾಲಕಿ ಮೇಲೆ ಅತ್ಯಾಚಾರ
ಚಿಕ್ಕೋಡಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಘಟನೆ ತಾಲೂಕಿನ ಬಾರವಾಡ ಗ್ರಾಮದಲ್ಲಿ ನಡೆದಿದೆ.ಅತ್ಯಾಚಾರ ಮಾಡಿದ ಯುವಕನನ್ನು ಅದೇ ಗ್ರಾಮದ ದೇವಲ್ ಬಂಡಾ ಶಿಂಧೆ(25) ಎಂದು ಗುರುತಿಸಲಾಗಿದೆ. ಇತನನ್ನು ಪೊಲೀಸರು ಮಂಗಳವಾರ ಪುಣೆ ಹತ್ತಿರ ಕಾಳೆವಾಡಿ ಗ್ರಾಮದಲ್ಲಿ ಬಂಧಿಸಿ, ಚಿಕ್ಕೋಡಿಗೆ ಕರೆತಂದಿದ್ದಾರೆ. ಈತ ಬಾಲಕಿಯನ್ನು ಜನವರಿ 17ರಂದು ಅಪಹರಣ ಮಾಡಿಕೊಂಡು ಕೊಲ್ಲಾಪುರ, ಪುಣೆಗೆ ತೆರಳಿ ಅಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದು ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಯುವಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ ಮತ್ತು ಈ ಕುರಿತು ಬಾಲಕಿಯ ಹೇಳಿಕೆಯನ್ನೂ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 17ರಂದು ಬಾಲಕಿ ಅಪಹರಣವಾದ ನಂತರ ಜ. 22ರಂದು ಬಾಲಕಿಯ ತಂದೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಯುವಕನ ಮೇಲೆ ಸದಲಗಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ರಸ್ತೆ ಅಪಘಾತ: ಇಬ್ಬರ ಸಾವು
ಬೆಳಗಾವಿ: ತಾಲೂಕಿನ ಹಲಗಾ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ತಡ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದ ಬಸವರಾಜ ತಿಗಡಿ(28), ನೀಲಕಂಠಯ್ಯ ಹಿರೇಮಠ(38) ಮೃತಪಟ್ಟವರು. ಸೋಮವಾರ ರಾತ್ರಿ ಬೆಳಗಾವಿ ಗಜಪತಿ ಗ್ರಾಮಕ್ಕೆ ಹೋಗುತ್ತಿದ್ದಾಗ ಹಲಗಾ ಬಳಿಯ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೃಜನ-ದಿ ಕ್ರಿಯೆಟಿವ್ ರಫಲ್ಸ್ ಇಂದು
ಬೆಳಗಾವಿ: ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನೆ ಕಾಲೇಜಿನ ಎಂಬಿಎ ವಿಭಾಗ 'ಸೃಜನ-ದಿ ಕ್ರಿಯೆಟಿವ್ ರಫಲ್ಸ್' ಎಂಬ ಹೆಸರಿನ ರಾಷ್ಟ್ರಮಟ್ಟದ ಪೇಪರ್ ಪ್ರೆಜೆಂಟೇಶನ್ ಸ್ಪರ್ಧೆ ಪದವೀಧರ ಹಾಗೂ ಸ್ನ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಫೆ.20ರಿಂದ 2 ದಿನಗಳ ಕಾಲ ಆಯೋಜಿಸಲಾಗಿದೆ. ಈ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ವಿಡಿಯೋ, ಪೇಪರ್ ಪ್ರೆಜೆಂಟೇಶನ್ಗಳು ಪ್ರಸ್ತುತ ಆರ್ಥಿಕ ವಿಷಯಗಳಾದ ಹಣದುಬ್ಬರ, ಭಾರತೀಯ ರೂಪಾಯಿ ಮೌಲ್ಯ ಕುಸಿತ, ಪ್ರಸ್ತುತ ಮಾನವ ಸಂಪನ್ಮೂಲ ನಿರ್ವಹಣೆ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತವೆ. ಕಾಲೇಜಿನ ನಿರ್ದೇಶಕ ಡಾ.ಯು.ಎಸ್. ಹಂಪಣ್ಣವರ ಸ್ಪರ್ಧಾತ್ಮಕ ಕಾರ್ಯಕ್ರಮ ಉದ್ಘಾಟಿಸುವರು. ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ಕದಂ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮನ್ನ್ನು ವೇದಿಕೆಯನ್ನಾಗಿ ಉಪಯೋಗಿಸಲು ವಿದ್ಯಾರ್ಥಿಗಳಿಗೆ ಆಹ್ವಾನಿಸಿದ್ದಾರೆ. ಮಾಹಿತಿಗೆ ಪ್ರೊ.ರಾಜಶೇಖರ ಬಿ. ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳ ಹಕ್ಕು ಗೌರವಿಸಬೇಕು: ಲೋಬೋ
ಬೆಳಗಾವಿ: ಮಕ್ಕಳ ಹಕ್ಕು ಮಕ್ಕಳಿಗೆ ದೊರೆಯುವಂತಾಗಲಿ ಎಂದು ಬಾಲನ್ಯಾಯ ಮಂಡಳಿಯ ಸದಸ್ಯ ಆನಂದ ಲೋಬೋ ಹೇಳಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಕಾನೂನು ಸಾಕ್ಷರತೆ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು. ನ್ಯಾಯವಾದಿ ಅಶೋಕ ಹಲಗಲಿ ಮಾತನಾಡಿ, ಭ್ರಷ್ಟಾಚಾರ ತಡೆಗೆ ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನವೇ ರಾಮಬಾಣ. ಪ್ರತಿ ಸಮಾಜ ಕಾರ್ಯಕರ್ತರು ಸಕಾಲ ಯೋಜನೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಸೇರಿದಂತೆ ಸಂವಿಧಾನ ಬದ್ಧವಿರುವ ಹಕ್ಕುಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ನಮ್ಮ ಹಕ್ಕುಗಳ ಬಗ್ಗೆ ನಮಗೆ ಅರಿವಿದ್ದಾಗ ಮಾತ್ರ ಯಾವುದೇ ಸಮಸ್ಯೆಯನ್ನು ಕಾನೂನಾತ್ಮಕ ಹೋರಾಟದಿಂದ ಪರಿಹರಿಸಿಕೊಳ್ಳಬಹುದು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಲಹಾಗಾರ ಜೆ.ಟಿ. ಲೋಕೇಶ ಅವರು ಬಾಲ್ಯವಿವಾಹ ಕಾಯಿದೆ 2006ರ ಬಗ್ಗೆ ವಿವರಿಸಿವರು. ಸೇವಾಮಿತ್ರ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಸುರೇಖಾ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ರಾಜೇಶ್ವರಿ ದೇವಲಾಪುರ ಸ್ವಾಗತಿಸಿದರು. ಸನ್ಮತಿ ಮಲ್ಲನಗೌಡನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

