ಬೆಳಗಾವಿ

ಮಕ್ಕಳಿಗೆ ಶ್ಲೋಕ ಪಠಣ ಸ್ಪರ್ಧೆ

Published On :

ಬೆಳಗಾವಿ: ಶ್ಲೋಕ ಪಠಣ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಮಕ್ಕಳಲ್ಲಿ ಬಾಲ್ಯದಿಂದಲೇ ಇಂಥ ಸಂಸ್ಕಾರವನ್ನು ಬೆಳೆಸಬೇಕಾಗುತ್ತದೆ ಅಂದಾಗ ಮಾತ್ರ ಶ್ಲೋಕ ಪಠಣ ಮಾಡಲು ಸಾಧ್ಯ ಎಂದು ಪ್ರಣವಾನಂದ ಕಜವೆ ಹೇಳಿದರು.
ಗುರುವಾರ ಕನ್ನಡ ಸಾಹಿತ್ಯ ಭವನದಲ್ಲಿ ಅನಂತ ವಿಶ್ವ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಓಂ ಸಂಸ್ಕಾರ ಬೇಸಿಗೆ ಕ್ಯಾಂಪ್‌ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಬ್ಬರು ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಿದರೇ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಅಲ್ಲದೇ ಸಂಸ್ಕಾರವಂತಾಗಲು ಕೂಡ ಸಹಾಯಕಾರಿಯಾಗಲಿದೆ. ಅಧ್ಯಾತ್ಮಿಕ ತಳಹದಿಯ ಮೇಲೆ ಮಕ್ಕಳ ಬೆಳವಣಿಗೆ ಸಾಧ್ಯವಿದೆ ಎಂದರು.
ದತ್ತಾತ್ರೇಯ ಕಿಲೇಕರ್ ಮಾತನಾಡಿ ಶ್ಲೋಕ ಪಠಣದ ಸಂಸ್ಕಾರವು ಯಾವುದೇ ಭಾಷೆಯ ಆಧಾರದ ಮೇಲೆ ಬರುವುದಿಲ್ಲ. ಇಂಥ ಭಾಷೆಯವರೇ ಕಲಿಯಬೇಕು ಎಂದೇನು ಇಲ್ಲ. ಶ್ಲೋಕ ಪಠಣದಿಂದ ಮನಸ್ಸು ಪ್ರಫು ಲ್ಲಗೊಳ್ಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ರಾಜಶೇಖರ ಬಳುಟಗಿ, ಶಿವಾಜಿ ಕಾಂಬ್ಳೆ, ವೈಶಾಲಿ ಅಲೆಗಾಂವ,  ನಂದಿನಿ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.
ಬಹುಮಾನ ವಿಜೇತರು: 6-9 ವರ್ಷದ ವಯಸ್ಸಿನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಶ್ಲೋಕ ಪಠಣ ಸ್ಪರ್ಧೆಯಲ್ಲಿ ಶ್ರೀನಿಧಿ ಕೊನಾಪುರೆ ಪ್ರಥಮ, ಭಕ್ತಿ ಖರೆ ದ್ವೀತಿಯ, ಅದೀತಿ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ. 10-13 ವರ್ಷದ ಮಕ್ಕಳ ವಿಭಾಗದಲ್ಲಿ ಸುಮೀತ ಕಾಂಬ್ಳೆ ಪ್ರಥಮ, ಅಭಿನಂದನ ಖರೆ ದ್ವೀತಿಯ, ಸೃಷ್ಠಿ ಶಾಸ್ತ್ರೀ ತೃತೀಯ ಬಹುಮಾನ ಪಡೆದಿದ್ದಾರೆ. 14-16 ವರ್ಷದ ಮಕ್ಕಳ ವಿಭಾಗದಲ್ಲಿ ಸಿದ್ಧಾರ್ಥ ತರಳೆ ಪ್ರಥಮ, ಅಂಧವಿದ್ಯಾರ್ಥಿನಿ ಬಸಮ್ಮ ಮಠದ ದ್ವೀತಿಯ, ಶ್ರೇಯಸ್ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ. ಯಲ್ಲಪ್ಪ ಮ್ಯಾಗೋಟಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.