ಬೆಳಗಾವಿ

ಮೂಲ ನಂಬಿಕೆಯಿಂದ ವೈಜ್ಞಾನಿಕ ಅರಿವು

Published On :

ಅಥಣಿ: ಪ್ರತಿಯೊಬ್ಬರೂ ಮೂಲ ನಂಬಿಕೆ ಉಳಿಸಿಕೊಳ್ಳಬೇಕು. ಮೂಢ ನಂಬಿಕೆ ಬಿಡಬೇಕು. ಮೂಲ ನಂಬಿಕೆ ಎಂಬುದು ವೈಜ್ಞಾನಿಕ ಪ್ರಜ್ಞೆ. ಇದು ಸತ್ಯದ ಅರಿವನ್ನು ಮೂಡಿಸುತ್ತದೆ ಎಂದು ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.
ಅವರು ಮಂಗಳವಾರ ಅಥಣಿ ಕೆಎಲ್‌ಇ ಸಂಸ್ಥೆಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತನ್ನ ಅರಿವೇ ತನಗೆ ಗುರು. ಜೀವನದ ಪ್ರತಿಕ್ಷಣವು ಮೌಲ್ಯಯುತವಾಗಿದೆ. ಅದರ ಬಳಕೆ ಆಗಬೇಕಾಗಿದೆ. ಅದಕ್ಕೆ ಗುರು, ಹಿರಿಯರು, ಪ್ರಾಧ್ಯಾಪಕರ ಮಾಗದರ್ಶನ ಮತ್ತು ಉಪದೇಶ ಅತಿಮುಖ್ಯ ಎಂದರು.
ಸಂವೇದನಾಶೀಲ ಲವಲವಿಕೆಯ ವ್ಯಕ್ತಿತ್ವದ ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯವಾದದು. ಇದರಿಂದ ಜೀವನದಲ್ಲಿಯ ಜಡತ್ವದ ಸಮಸ್ಯೆಗಳನ್ನು ಎದುರಿಸಿಕೊಳ್ಳುವ ಶಕ್ತಿ ವೃದ್ಧಿಸುತ್ತ ಹೋಗುತ್ತದೆ. ಇದರಿಂದ ಸ್ವಂಚಂದ ಹಸನಾದ ಬದುಕು ಸಾಗಿಸಲು ಸಾಧ್ಯವೆಂದರು.
ಯುವಕರು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದುವಾಗ ಪುಸ್ತಕವೇ ತಾವಾಗಿ ತಾವೇ ಪುಸ್ತಕವಾದಂತೆ ತಲ್ಲಿನರಾಬೇಕು. ಆಗ ಹೊಸ ವಿಚಾರಗಳ ಹುಟ್ಟು ಮತ್ತು ಜ್ಞಾನ ವೃದ್ಧಿಯಾಗುತ್ತದೆ. ನಮ್ಮ ಸುತ್ತಲಿನ ಪರಿಸರದ ನಾಡಿನ ಅರಿವು ನಮಗಾಗುತ್ತದೆ. ಇದು ನಮ್ಮನ್ನು ಸಮಾಜ ಮುಖಿಗಳಾಗಿ ಸೇವೆ ಮಾಡಲು ಪ್ರೇರೇಪಿಸುತ್ತದೆ ಎಂದು ಪೂಜಾರಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಜಿ. ಹಂಜಿ ಮಾತನಾಡಿ, ಹಿರಿಯರ ಉಪದೇಶ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತವೆ ಎಂದರು.
ವಿಶ್ವ ವಿದ್ಯಾಲಯ, ಅಂತರವಲಯ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳಿಗೆ, ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತರಾದ ಡಾ. ಎಚ್.ಎಂ. ಚನ್ನಪ್ಪಗೋಳ, ಪಿ.ಬಿ. ಕಲಘಟಕರ, ಎಸ್.ವೈ. ಹೊನ್ನುಂಗರ ಹಾಗೂ ಸೇವೆಯಿಂದ ನಿವೃತ್ತಿ ಹೊಂದುವ ಚಳ್ಳಪ್ಪನವರ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಬಿ.ಆರ್. ಕಂಟಿಕರ ಸ್ವಾಗತಿಸಿದರು. ವಾಸುದೇವನ ನಾಯಕ ನಿರೂಪಿಸಿದರು. ಎಚ್.ಎಂ. ಚನ್ನಪ್ಪಗೋಳ ವಂದಿಸಿದರು.
ತನ್ನ ಅರಿವೇ ತನಗೆ ಗುರು. ಜೀವನದ ಪ್ರತಿಕ್ಷಣವು ಮೌಲ್ಯಯುತವಾಗಿದೆ. ಅದರ ಬಳಕೆ ಆಗಬೇಕಾಗಿದೆ. ಅದಕ್ಕೆ ಗುರು, ಹಿರಿಯರು, ಪ್ರಾಧ್ಯಾಪಕರ ಮಾಗದರ್ಶನ ಮತ್ತು ಉಪದೇಶ ಅತಿಮುಖ್ಯ.
- ಸಿದ್ದರಾಜ ಪೂಜಾರಿ, ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.