'ಬೀಚಿ ಕೊಡುಗೆ ಅಪಾರ'
ಹಾರೂಗೇರಿ: ಕನ್ನಡ ಸಾಹಿತ್ಯ ಲೋಕಕ್ಕೆ ರಾಂುಸಂ ಭೀಮಸೇನರಾಮರು ನೀಡಿದ ಕೊಡುಗೆ ಅಪಾರ. ಅವರ ಬದುಕು ತೆರೆದ ಪುಸ್ತಕದಂತಿತ್ತು ಎಂದು ಮೂಡಲಗಿಂು ಪ್ರೊ.ರವೀಂದ್ರಗೌಡ ಪಾಟೀಲ ಹೇಳಿದರು.
ಇಲ್ಲಿನ ಪ್ರಗತಿಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಂು ಸಮಾಜ ಕಾಂರ್ು ಪದವಿ ಮಹಾವಿದ್ಯಾಲಂುದಲ್ಲಿ ಬುಧವಾರ ನಡೆದ ಕನ್ನಡ ಸಾಹಿತಿಗಳ ಪರಿಚಂು ಮಾಲಿಕೆಂು ಬೀಚಿ ಜಂುಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡ ಸಾಹಿತಿ ಬೀಚಿ ಬದುಕು ಬರಹ ಕಾಂರ್ುಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬೀಚಿ ನಿರ್ಭಂುದಿಂದ ನಿಸರ್ಗದತ್ತ ಸಹಜ ಜೀವನ ನಡೆಸಿ ಅಜರಾಮರವಾಗಿದ್ದಾರೆ. ಬೀಚಿ ನಗು-ಅಳುವನ್ನು ಸಮನ್ವಂುದಿಂದ ನೋಡಿ ಸುಖ-ದುಃಖಗಳನ್ನು ಸಮನಾಗಿ ಕಂಡು, ನಕ್ಕು ನಗಿಸಿದ ಅವರು ಹಾಸ್ಯರಸವೇ ಮೈದಳೆದಂತಿದ್ದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ವೈಚಾರಿಕ, ವೈಜ್ಞಾನಿಕ ಮನೋಭಾವದ ಬೀಚಿ ಜಾತ್ಯತೀತ ವ್ಯಕ್ತಿ. ಕನ್ನಡಕ್ಕೊಬ್ಬನೇ ಕೈಲಾಸಂ ಎನ್ನುವಂತೆ ಹಾಸ್ಯಕ್ಕೊಬ್ಬನೇ ಬೀಚಿ ಎಂದು ಬಣ್ಣಿಸಿ, ಅವರ ಸಾಹಿತ್ಯ ಕೃತಿಗಳನ್ನು ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಸುರೇಶ ದರೂರ ಮಾತನಾಡಿ, ಹಾಸ್ಯರಸದೊಡೆಂು ಬೀಚಿ ಕನ್ನಡ ನಾಡು ಕಂಡ ಅಪರೂಪದ ಸಾಹಿತಿ. ಬೀಚಿ ಅವರ ಆತ್ಮಕಥೆ 'ನನ್ನ ಬಯೋಗ್ರಫಿ' ಪರಮೋಚ್ಛ ಕೃತಿಂಾಗಿದ್ದು, ಬೀಚಿಂುವರ ಪುಸ್ತಕಗಳನ್ನು ಓದುವುದರಿಂದ ಮನದ ಮೈಲಿಗೆ ದೂರವಾಗಿ ಸಂತಸಭಾವ ಮೈದಳೆಂುತ್ತದೆ ಎಂದರು. ಪ್ರೊ.ಬಸವರಾಜ ಆಲಗೂರ ಮಾತನಾಡಿ, ಬೀಚಿಂುವರ ಜೀವನ ಮೌಲ್ಯಗಳನ್ನು ಎಳೆ ಎಳೆಂಾಗಿ ಮತ್ತು ಅವರ ಜೀವನದಲ್ಲಿ ನಡೆದ ಹಾಸ್ಯಮಂು ಪ್ರಸಂಗಗಳನ್ನು ಬಿಚ್ಚಿಟ್ಟರು. ಪ್ರೊ.ಅಪ್ಪು ಚಿಗಡೊಳ್ಳಿ, ಪ್ರಾಚಾರ್ಯ ದಾಕ್ಷಾಯಿಣಿ ಬಿಸಾಬಗರ, ಪ್ರೊ.ಪ್ರೀತಿ ಅರಬಳ್ಳಿ, ಸಿದ್ದು ಜಗದಾಳ, ಮಹಾದೇವ ಅರಕೇರಿ ಮತ್ತಿತರರು ಉಪಸ್ಥಿತರಿದ್ದರು. ವಿಠಲ ಹಸರೆ ಸ್ವಾಗತಿಸಿದರು. ಶಶಿಕಲಾ ಕಾಂಬಳೆ ನಿರೂಪಿಸಿದರು. ಸುಜಾತಾ ಚೌಗಲೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

