'ಅಂಬೇಡ್ಕರ್ ಆಶಯ ಅನುಷ್ಠಾನವಾಗಲಿ'
ಬೆಳಗಾವಿ: ಸಮಾಜದ ಎಲ್ಲ ವರ್ಗದ ಜನರಿಗೂ ಗುಣಮಟ್ಟದ ಶಿಕ್ಷಣ ನೀಡುವುದೇ ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಮೂಲ ಆಶಯವಾಗಿತ್ತು ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಟಿ.ಸಿ. ಶಿವಶಂಕರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ರಾಣಿ ಚನ್ನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 123ನೇ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣವು ಸಾಮಾಜಿಕ ಅಭಿವೃದ್ಧಿಯ ಮಹತ್ವದ ಅಂಶ. ಶಿಕ್ಷಣ ಪಡೆದ ಸಮಾಜದಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಮನುಷ್ಯನ ಅಂತರಂಗ ಮತ್ತು ಬಹಿರಂಗ ಪರಿವರ್ತನೆಗೆ ಶಿಕ್ಷಣವು ಹೊಸ ಆಯಾಮ ನೀಡುತ್ತದೆ ಎಂಬುವುದು ಡಾ. ಬಿ.ಆರ್. ಅಂಬೇಡ್ಕರ್ ಬಲವಾಗಿ ನಂಬಿದ್ದರು. ಪ್ರಾಯಶಃ ಅಂಬೇಡ್ಕರ್ ಅವರು ಅಂದಿನ ಭಾರತದ ನೇತಾರರಲ್ಲಿ ಅತ್ಯಂತ ಹೆಚ್ಚು ಜ್ಞಾನಿಗಳಾಗಿದ್ದರು. ದೇಶ-ವಿದೇಶಗಳು ಅವರನ್ನ್ನು ಭಾರತದ ಬುದ್ಧಿಜೀವಿ ಎಂದು ಗುರುತಿಸಿದ್ದವು ಎಂದರು.
ಕೊಲಂಬಿಯಾ ವಿಶ್ವವಿದ್ಯಾಲಯವು 1952ರಲ್ಲಿ ಅಂಬೇಡ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಅಭಿಮಾನದಿಂದ ನೀಡಿದಾಗ ಭಾರತದ ಬುದ್ದಿಜೀವಿ ವರ್ಗವು ಶ್ಲಾಘಿಸಿದ್ದನ್ನು ಇಂದು ಸ್ಮರಿಸಿಕೊಳ್ಳಬಹುದು ಎಂದರು.
ಕವಿವಿಯ ಪ್ರೊ. ಅರವಿಂದ ಮೂಲಿಮನಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ಅನುಷ್ಠಾನಕ್ಕೆ ತರಬೇಕೆಂದು ಎಂದೂ ಅಭಿಪ್ರಾಯಪಡಲಿಲ್ಲ. ಆದರೆ ಅದಕ್ಕೂ ಮೊದಲು ಶಾಹೂ ಮಹಾರಾಜರು ಹಾಗೂ ಮೈಸೂರು ಒಡೆಯರವರು ಶೇ.50ರ ಮೀಸಲಾತಿಯನ್ನು ತಮ್ಮ ಆಡಳಿತದಲ್ಲಿ ಜಾರಿಗೆ ತಂದಿದ್ದರು. ಅವರಿಗೆ ಸಾಮಾಜಿಕ ನ್ಯಾಯ ಮುಖ್ಯವಾಗಿತ್ತೇ ಹೊರತು ಮೀಸಲಾತಿಯಲ್ಲ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಕಡೆಗೆ ಹೆಚ್ಚು ಗಮನ ಸೆಳೆದರೆ, ಅಂಬೇಡ್ಕರ್ ಭಾರತೀಯ ಸಾಮಾಜಿಕ ಸುಧಾರಣೆಗೆ ಗಮನ ಕೇಂದ್ರೀಕರಿಸಿ ಚಳುವಳಿಯನ್ನು ಸಂಘಟಿಸಿದರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿ ಕುಲಪತಿ ಬಿ. ಆರ್. ಅನಂತನ್, ಡಾ. ಬಿ.ಆರ್. ಅಂಬೇಡ್ಕರ್ ಬೋಧನೆಗಳನ್ನ್ನು ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಈಗ ಏನಿದ್ದರೂ ಅವರ ಕನಸುಗಳನ್ನು ಕಾಯಕಲ್ಪವಾಗಿಸುವ ಸಮಯವಿದಾಗಿದೆ. ರಾಣಿ ಚನ್ನ್ನಮ್ಮ ವಿಶ್ವವಿದ್ಯಾಲಯವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅಂಬೇಡ್ಕರ್ ಚಿಂತನೆಯ ಹಾದಿಯಲ್ಲಿ ನಡೆದಿದೆ. ಹೀಗಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಅಂಬೇಡ್ಕರ್ ಅಧ್ಯಯನದಲ್ಲಿ ಸ್ನ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಆರಂಭಿಸುವುದಾಗಿ ತಿಳಿಸಿದರು.
ಅತಿಥಿಗಳಾಗಿ ಕುಲಸಚಿವರು (ಮೌಲ್ಯಮಾಪನ) ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಕುಲಪತಿಗಳ ವಿಶೇಷಾಧಿಕಾರಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಆಗಮಿಸಿದ್ದರು.
ಪ್ರೊ. ಡಿ.ಆರ್. ಅಲಬಾಳ ಮಾತನಾಡಿದರು. ಕುಲಸಚಿವ ಪ್ರೊ. ಶಾಂತಿನಾಥ ದಿಬ್ಬದ ಪರಿಚಯಿಸಿದರು. ಪ್ರೊ. ಡಿ. ಎನ್. ಪಾಟೀಲ ವಂದಿಸಿದರು. ಪ್ರೊ. ವಿಜಯಲಕ್ಷ್ಮಿ ಶಿಗೇಹಳ್ಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

