ಖೊಟ್ಟಿ ಜಾತಿ ದಾಖಲೆ: ಆರೋಪಿ ಬಂಧನ
ಬೆಳಗಾವಿ: ಖೋಟ್ಟಿ ಜಾತಿ ದಾಖಲೆ ಸೃಷ್ಠಿಸಿ ನೌಕರಿಗೆ ಸೇರಿದ್ದ ಗೋಕಾಕ ತಾಲೂಕಿನ ಹೊಸಟ್ಟಿ ದಶರಥ ದುರ್ಗಪ್ಪ ಮೆಚ್ಚನ್ನವರ ಎಂಬಾತನನ್ನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ಬಂಧಿಸಿದ್ದಾರೆ.
ಈತ ಮೂಲತಹ ದಾಸರ ಜಾತಿಗೆ ಸೇರಿದವನಾಗಿದ್ದು, ಚೆನ್ನ್ನದಾಸರ ಎಂದು ಸುಳ್ಳು ಜಾತಿ ನಮೂದು ಆಗಿರುವ ಪ್ರೌಢಶಾಲೆಯ ದಾಖಲಾತಿಯನ್ನ್ನ ದುರುಪಯೋಗ ಮಾಡಿಕೊಂಡು, ಚೆನ್ನ್ನದಾಸರ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು, ಹುಬ್ಬಳ್ಳಿ ನಗರದ ಪ್ರೀಯದರ್ಶಿನಿ ಸ್ವತಂತ್ರ ಕಲಾ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಅಟೆಂಡರ್ ಆಗಿ ನೌಕರಿಗೆ ಸೇರಿದ್ದನು.
ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ತನಿಖೆ ನಡೆಸಿ ಈ ಪ್ರಕರಣದ ಕುರಿತು ವರದಿ ಸಲ್ಲಿಸಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದರು. ಆದರೆ ತನಿಖೆ ನಡೆಸಿದ ಪೊಲೀಸ್ರು ಈತ ಸುಳ್ಳು ದಾಖಲೆಯನ್ನ್ನು ತೋರಿಸಿ, ಪ್ರವರ್ಗ-1ರಲ್ಲಿ ಬರುವ ದಾಸರು ಜಾತಿಗೆ ಸೇರಿದವನು ಎಂದು ಖಚಿತವಾಗಿರುವ ಹಿನ್ನ್ನೆಲೆಯಲ್ಲಿ ಎಸ್ಪಿ ಅಶೋಕ ಕುರೇರ್ ನೇತೃತ್ವದಲ್ಲಿ ಸಿಪಿಐ ಅರುಣಕುಮಾರ ಹಪಳಿ ಅವರು ಆರೋಪಿಯನ್ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು, ಕೂಡಲೇ ಆತನ ನೇಮಕಾತಿಯನ್ನ್ನು ರದ್ದುಗೊಳಿಸಬೇಕು ಎಂದು ಕಾಲೇಜಿನ ಆಡಳತ ಮಂಡಳಿಗೆ ಪತ್ರ ಬರೆದಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

