ಮತದಾನ ಮಾಡದ ಶಾಸಕ: ತೀವ್ರ ವಿರೋಧ
ರಾಂುಬಾಗ: ಒಂದು ಮತಕ್ಷೇತ್ರಕ್ಕೆ ಪ್ರಥಮ ಪ್ರಜೆಂಾದ ಶಾಸಕರೇ ಮತದಾನ ಮಾಡದಿದ್ದರೆ ಹೇಗೆ?.
ಇದು ರಾಯಬಾಗ ತಾಲೂಕಿನ ಕುಡಚಿ ಮೀಸಲು ವಿಧಾನಸಭೆ ಮತಕ್ಷೇತ್ರದ ಶಾಸಕ ಪಿ.ರಾಜೀವ್ ಅವರ ಕುರಿತು ಸಾರ್ವಜನಿಕರು ಕೇಳುವ ಪ್ರಶ್ನೆ. ಗುರುವಾರ ನಡೆದ(ಏ.17ರಂದು) ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ಕುಡಚಿ ಶಾಸಕ ಪಿ. ರಾಜಿವ್ ಹಾಗೂ ಅವರ ಕುಟುಂಬ ಸದಸ್ಯರೂ ಸೇರಿ ನಾಲ್ಕು ಜನ ಮತದಾನ ಮಾಡದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದ್ದಾರೆ. ಉನ್ನತ ಶಿಕ್ಷಣ ಪಡೆದ, ಉಪ ಆರಕ್ಷಕ ಹುದ್ದೆ ನಿಭಾಯಿಸಿದ್ದ ಶಾಸಕ ಇತರರಿಗೆ ಮಾದರಿಯಾಗಬೇಕಿತ್ತು. ಬೇರೆಯವರನ್ನು ಮತಹಾಕುವಂತೆ ಪ್ರೇರೇಪಿಸಬೇಕಾದ ಇವರೇ ಮತಹಾಕದೆ ತಪ್ಪು ಮಾಡಿದ್ದಾರೆ ಎಂದು ಜನರು ಆಕ್ಷೇಪಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿಂು ಮತಚಲಾಯಿಸದ ಇವರು ಬೇರೆ ಕ್ಷೇತ್ರಕ್ಕೆ(ಬಳ್ಳಾರಿ) ಹೋಗಿ ಮತದಾನ ಮಾಡುವಂತೆ ಹೇಳುವ ಇವರಿಗೆ ಂಾವ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ. ಒಬ್ಬ ಶಾಸಕರಾಗಿ ಮತದಾನ ಮಾಡದೇ ಇರುವುದು ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಆಗಿದೆ ಎಂದು ಮಾಜಿ ಶಾಸಕ ಎಸ್.ಬಿ.ಘಾಟಗೆ ಅವರು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

