ಬೆಳಗಾವಿ

ಗಾಳಿ ಮಳೆಗೆ ಅಪಾರ ಹಾನಿ

Published On :

ರಾಂುಬಾಗ: ಗುರುವಾರ ಸಂಜೆ ಗುಡುಗು-ಸಿಡಿಲು ಸಹಿತ ಧಾರಾಕಾರ ಸುರಿದ ಭಾರಿ ಮಳೆಗೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಅಪಾರ ಹಾನಿಂಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಬಿರುಗಾಳಿಗೆ ಮನೆಗಳ ಛಾವಣಿ ಹಾರಿಹೋಗಿದ್ದು, ಕಬ್ಬು, ಗೋಧಿ ನೆಲಕ್ಕುರುಳಿವೆ.
ರಾಂುಬಾಗ ಗ್ರಾಮೀಣ ಭಾಗದ ಶಿವಾಜಿ ಪಾರ್ಕ್‌ನ ಹಜರತ ನಿಜಾಮುದ್ದಿನ ಶಿಕ್ಷಣ ಸಂಸ್ಥೆಂು ಶ್ರೀ ರಾಹುಲ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಂು ಕಬ್ಬಿಣದ ಪೈಪುಗಳು ಹಾಗೂ 300 ಸಿಮೆಂಟ್ (ಪತ್ರಾಸ್) ಛಾವಣಿ ಹಾರಿ, ಹೋಗಿ ಚೂರು-ಚೂರಾಗಿವೆ, ಶಾಲೆಂುಲ್ಲಿದ್ದ ಕುರ್ಚಿ, ಟೇಬಲ್, ಡೆಸ್ಕ್, ಕ್ರೀಡಾ ಸಲಕರಣೆ ನಾಶವಾಗಿವೆ. ಶಿಕ್ಷಣ ಸಮನ್ವಂಾಧಿಕಾರಿ ಕೆ.ಕೆ. ನಾಯಿಕ, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಸಂಪೂರ್ಣ ವಿವರ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ನಾಗಾರಳ ಗ್ರಾಮದಲ್ಲಿ ಶಂಕರ ನಾವಿ ಎಂಬಾತರ ಗುಡಿಸಲು ಸಂಪೂರ್ಣ ಕಿತ್ತುಹೋಗಿದೆ. ನಿಡಗುಂದಿಂುಲ್ಲಿ ಶಂಕರ ಕರಿಗಾರ ಅವರ ಮನೆಂು ಛಾವಣಿ ಹಾರಿಹೋಗಿ ಗೋಡೆಗಳು ಕುಸಿದಿವೆ. ಅಳಗವಾಡಿ ಹಿಡಕಲ್ ರಸ್ತೆಗೆ ಹೊಂದಿಕೊಂಡಿರುವ ಏಳು ವಿದ್ಯುತ್ ಕಂಬ, ಒಂದು ಟ್ರಾನ್ಸ್‌ಫಾರ್ಮರ್ ಬಿದ್ದಿವೆ. ಅಳಗವಾಡಿ ಸಂಗೋಳ್ಳಿ ರಾಂುಣ್ಣ ಶಾಲೆಂು ಆವರಣದಲ್ಲಿನ ಮರಗಳು ನೆಲಕ್ಕುರಿಳಿವೆ. ಮೋರಬದ ಮಾರುತಿ ಟೋಣೆಂುವರ ಪತ್ರಾಸ್ ಶೆಡ್ ಹಾರಿವೆ. ಮೆಖಳಿಯಲ್ಲಿ ಸುಮಾರು 8 ಮನೆ ಬಿದ್ದಿವೆ. ಹಾನಿಂಾದ ಗ್ರಾಮಗಳಿಗೆ ಕಾಂಗ್ರೆಸ್ ಂುವ ಧುರೀಣ ಅಮಿತ ಘಾಟಗೆ ಭೇಟಿ ನೀಡಿ, ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ವೀವೆಕ ಘಾಟಗೆ, ಸುರಜಿತ ಸಣ್ಣಕ್ಕಿ, ರಂಜೀತ ರೆಡೆಕರ, ಸಾಗರ ಜಂಡೆನ್ನವರ, ಬಾಹುಬಲಿ ಮಗದುಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.