ಚುನಾವಣೆ: 464 ಬಸ್, 532 ಟ್ರ್ಯಾಕ್ಸ್ ಬಳಕೆ
ಚಿಕ್ಕೋಡಿ: ಚಿಕ್ಕೋಡಿ, ಬೆಳಗಾವಿ ಎರಡು ಲೋಕಸಭೆ ಕ್ಷೇತ್ರಗಳಿಗಾಗಿ ಮತಗಟ್ಟೆಗಳಿಗೆ ಸಿಬ್ಬಂದಿ ತೆರಳುವುದಕ್ಕಾಗಿ ಜಿಲ್ಲೆಯಾದ್ಯಂತ ಒಟ್ಟು 464 ಬಸ್ಗಳನ್ನ್ನೂ 532 ಟ್ರ್ಯಾಕ್ಸ್, ಜೀಪುಗಳನ್ನು ಬಾಡಿಗೆ ಮೇಲೆ ಪಡೆಯಲಾಗಿದ್ದು, ಇಲಾಖೆಗಳ ವಾಹನಗಳಿಗೆ ಇಂಧನ ಸೇರಿದಂತೆ ಸುಮಾರು ರು. 1 ಕೋಟಿ ಖರ್ಚು ಮಾಡಲಾಗುತ್ತಿದೆ.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅಥಣಿ ತಾಲೂಕಿಗೆ-63, ರಾಯಬಾಗ-47, ಚಿಕ್ಕೋಡಿ-63, ಹುಕ್ಕೇರಿ ತಾಲೂಕಿಗೆ-49 ಬಸ್ಗಳನ್ನು ಕಳುಹಿಸಲಾಗುತ್ತಿದೆ. 4-5 ಮತಗಟ್ಟೆಗಳಿಗೆ 1 ಬಸ್ ಬಿಡಲಾಗುತ್ತಿದೆ. ಪ್ರತಿ ಮತಗಟ್ಟೆಗೆ ಓರ್ವ ಮತಗಟ್ಟೆ ಅಧಿಕಾರಿ ಮತ್ತು 4 ಸಹಾಯಕ ಮತಗಟ್ಟೆ ಅಧಿಕಾರಿ, ಒಬ್ಬ ಸುರಕ್ಷಾ ಸಿಬ್ಬಂದಿ, ಒಬ್ಬ ಗ್ರೂಪ್ ಡಿ ಸಿಬ್ಬಂದಿ ನೇಮಿಸಿದೆ. ಒಟ್ಟು 10,168 ಮತಗಟ್ಟೆ ಸಿಬ್ಬಂದಿಗಳ ಸೇವೆ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ 850 ಮತಗಟ್ಟೆ ಸಿಬ್ಬಂದಿಗಳನ್ನು ಕಾಯ್ದಿಟ್ಟ ಸಿಬ್ಬಂದಿ ಎಂದು ನೇಮಿಸಲಾಗಿದೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಚೋಳನ್ ಹೇಳಿದರು.
ಅಂಚೆ ಮತಪತ್ರ ರವಾನೆ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭೆ ಕ್ಷೇತ್ರಗಳಲ್ಲಿರುವ 6,628 ನೌಕರರಿಗೆ ಈಗಾಗಲೇ ಅಂಚೆ ಮತಪತ್ರ ರವಾನಿಸಲಾಗಿದೆ. ಮತದಾನ ಬಳಿಕ ಎಲ್ಲ ಮತಯಂತ್ರಗಳನ್ನು ಚಿಕ್ಕೋಡಿಯ ಆರ್.ಡಿ. ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಗಳಲ್ಲಿ ಇಡಲಾಗುವುದು. ಮೇ16 ರಂದು ಮತ ಏಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಈ ಭದ್ರತಾ ಕೊಠಡಿಗಳ ಸುರಕ್ಷತೆಯನ್ನು ಸುರಕ್ಷತಾ ಸಿಬ್ಬಂದಿಗೆ ನಿಯೋಜಿಸಲಾಗಿದೆ. ಇದರ ಉಸ್ತುವಾರಿಗೆ ಒಬ್ಬ ಪತ್ರಾಂಕಿತ ಅಧಿಕಾರಿ, ಒಬ್ಬ ಪೊಲೀಸ್ ಅಧಿಕಾರಿ ಈ ಭದ್ರತಾ ಕೊಠಡಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ನಿಷೇಧಾಜ್ಞೆ ಜಾರಿ: ಮತದಾನ ದಿನದಂದು ಮತಗಟ್ಟೆಯಿಂದ 100 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಉಮೇದುವಾರರು ಮತದಾರರಿಗೆ ಮತದಾರರ ಹೆಸರು ಇವರು ಕ್ರಮ ಸಂಖ್ಯೆ ಮತ್ತು ಭಾಗ ಸಂಖ್ಯೆ ನಮೂದಿಸಿದ ಚೀಟಿ ವಿತರಿಸಬಹುದಾಗಿದ್ದರೂ ಸಹ, ಅಂತಹ ಚೀಟಿಗಳಲ್ಲಿ ಉಮೇದುವಾರನ ಹೆಸರು, ಚೆನ್ಹೆ, ರಾಜಕೀಯ ಪಕ್ಷದ ಹೆಸರು ನಮೂದಿಸುವಂತಿಲ್ಲ. ಚುನಾವಣೆ ಅಧಿಕಾರಿ ಮತಗಟ್ಟೆಯ ಒಳಗೆ ಅನುಸರಿಸಬೇಕಾದ ಶಿಸ್ತಿನ ಕುರಿತು ನಿಯಮ ರೂಪಿಸಲಾಗಿದೆ. ಅದರನ್ವಯ ಮತಗಟ್ಟೆಯ ಒಳಗೆ ಮೊಬೈಲ್ ಬಳಕೆಗೆ ನಿಷೇಧ ವಿಧಿಸಲಾಗಿದೆ. ಯಾವುದೇ ಮತದಾರರು ಮತಗಟ್ಟೆಯ ಒಳಗೆ ಮೊಬೈಲ್ ಬಳಕೆ ಮಾಡಲು ಅವಕಾಶವಿಲ್ಲ ಎಂದರು.
ಮತಯಂತ್ರಕ್ಕೆ ಪೊಜೆ ಮಾಡಬೇಡಿ
ಏ.17 ರಂದು ಬೆಳಗ್ಗೆ ಮತಗಟ್ಟೆಗಳಲ್ಲಿ ಕೆಲವರು ಮತಯಂತ್ರಗಳನ್ನು ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಮತಯಂತ್ರಗಳಿಗೆ ಪೂಜೆ ಮಾಡುವಂತಿಲ್ಲ. ಪೂಜೆ ಸಂದರ್ಭದಲ್ಲಿ ನೀರು ಬಿದ್ದು, ಕೆಲವು ಸಲ ಶಾರ್ಟ್ ಸರ್ಕೀಟ್ನಿಂದ ಮತಯಂತ್ರ ಹಾಳಾಗುವ ಅಪಾಯವಿರುತ್ತದೆ. ಅದಕ್ಕಾಗಿ ಯಾರು ಮತಯಂತ್ರ ಪೂಜೆ ಮಾಡಬಾರದು ಎಂದು ಚುನಾವಣೆ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

