ಬೆಳಗಾವಿ

ಕಬ್ಬು ಬೆಳಗಾರರಿಗೆ ಬಂತು 350 ಕೋಟಿ

Published On :

ಪ್ರೋತ್ಸಾಹ ಧನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
-ರಾಯಣ್ಣ ಆರ್.ಸಿ.
ಬೆಳಗಾವಿ: ಲೋಕಸಭೆ ಚುನಾವಣೆಯ ಪರಿಣಾಮವೋ, ಸರ್ಕಾರದ ರೈತ ಪರ ಕಾಳಜಿಯೋ? ಅಥವಾ ಕಬ್ಬು ಬೆಳೆಗಾರನ ಹೋರಾಟದ ಫಲವೋ ಏನೋ? ಅಂತೂ ರಾಜ್ಯ ಸರ್ಕಾರ ಪ್ರತಿಟನ್‌ಗೆ 150 ರುಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದಂತೆ ಕೃಷಿ ಇಲಾಖೆಯಿಂದ 350 ಕೋಟಿ ಬಿಡುಗಡೆ ಮಾಡಿದೆ.
ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ತೀವ್ರ ಹೋರಾಟ ಕೈಗೊಂಡಿದ್ದ ಸಂದರ್ಭದಲ್ಲೇ ಕಂಕಣವಾಡಿ ಗ್ರಾಮದ ರೈತನೋರ್ವ ಚಳಿಗಾಲ ಅಧಿವೇಶನ ನಡೆಯುತ್ತಿರುವಾಗಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ರೈತರ ಹೋರಾಟಕ್ಕೆ ಮಣಿದಿದ್ದ ಸರ್ಕಾರ, ಕಾರ್ಖಾನೆಗಳು ಪ್ರತಿಟನ್‌ಗೆ 2500 ದರ ನೀಡಬೇಕು. ಸರ್ಕಾರವೇ ನೇರವಾಗಿ ಪ್ರತಿ ಟನ್ ಕಬ್ಬಿಗೆ ರೈತರಿಗೆ 150 ಪ್ರೋತ್ಸಾಹಧನ ನೀಡಲಿದೆ ಎಂದು ಪ್ರಕಟಿಸಿತ್ತು.
ಪಾವತಿ: ಆದರೆ ಕಾರ್ಖಾನೆಗಳು ಸರ್ಕಾರದ ಅಧಿಸೂಚನೆ ಧಿಕ್ಕರಿಸಿ, ತಮಗೆ ಅನುಕೂಲವಾಗುವಂತೆ ಪ್ರತಿಟನ್‌ಗೆ 2 ಸಾವಿರದ ವರೆಗೆ ಕಬ್ಬಿನ್ ಬಿಲ್ ಪಾವತಿಸುತ್ತಿವೆ. ಆದರೆ ರಾಜ್ಯ ಸರ್ಕಾರ ಮಾತ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಸರ್ಕಾರದ ಪ್ರೋತ್ಸಾಹಧನವಾಗಿ 150 ಅನ್ನು ಜಿಲ್ಲಾಧಿಕಾರಿಗಳ ಮೂಲಕ ರೈತರ ಖಾತೆಗೆ ಪಾವತಿಸುತ್ತ ಬಂದಿದೆ. ನಾಲ್ಕು ಹಂತದಲ್ಲಿ ರಾಜ್ಯದ ರೈತರಿಗೆ ಸುಮಾರು 350 ಕೋಟಿ ಪಾವತಿಸಿದೆ.
ಇದೀಗ ಏ.7 ರಂದು ಐದನೇ ಕಂತಿನ ಹಣವನ್ನೂ ಸಹ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗಿದೆ. ಕಾಲಮಿತಿಯಲ್ಲಿ ರೈತರ ಖಾತೆಗೆ ಹಣ ಜಮಾ ಮಾಡುವಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಾದ ಎಸ್.ಎಸ್. ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಉತ್ಪಾದನೆ: ಮಾರ್ಚ್ ತಿಂಗಳ ಕೊನೆವರೆಗೆ ಕಬ್ಬು ನುರಿಸಿದ ರೈತರಿಗೆ ಈ ಪ್ರೋತ್ಸಾಹ ಧನ ಲಭ್ಯವಾಗಲಿದೆ. ಮಾರ್ಚ್ ಅಂತ್ಯದವರೆಗೆ ರಾಜ್ಯದ 60 ಸಕ್ಕರೆ ಕಾರ್ಖಾನೆಗಳು 362 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 39.54 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿವೆ. ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಸರಾಸರಿ ಇಳುವರಿ ಶೇ.10.90 ರಷ್ಟಿದೆ ಎಂದು ಸಕ್ಕರೆ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
350 ಕೋಟಿಯಲ್ಲಿ ಅತ್ಯಧಿಕ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅಂದರೆ 129.55 ಕೋಟಿ ಪ್ರೋತ್ಸಾಹ ಧನ ಲಭಿಸಿದ್ದರೆ, ಬಾಗಲಕೋಟೆ 70.75 ಕೋಟಿ, ಬಿಜಾಪುರ ಜಿಲ್ಲೆಗೆ 30.95 ಕೋಟಿ ಅನುದಾನ ಲಭಿಸಿದೆ.

 ಯಾವ ಜಿಲ್ಲೆಗೆ ಎಷ್ಟು ಪ್ರೋತ್ಸಾಹಧನ...?
ಬೆಳಗಾವಿ     129,55,21,400
ಬಾಗಲಕೋಟೆ     70,75,91,100
ಬಿಜಾಪುರ     ರು. 30,95,69,550
ಉತ್ತರ ಕನ್ನಡ     2,14,45,650
ಗದಗ     1,15,51,350,
ಹಾವೇರಿ     6,08,61,750,
ಬೀದರ     ರು. 14,98,96,000
ಗುಲ್ಬರ್ಗಾ     16,01,63,600
ಯಾದಗಿರಿ     ರು. 31,93,850
ಶಿವಮೊಗ್ಗ     3,72,63,600
ಧಾರವಾಡ     4,08,10,050
ದಾವಣಗೇರೆ     9,04,64,650
ಬಳ್ಳಾರಿ     6,77,08,850
ಚಿತ್ರದುರ್ಗ     ರು. 4,23,00
ಕೊಪ್ಪಳ     1,43,28,950
ರಾಯಚೂರ     19,50,150
ಮಂಡ್ಯ     ರು. 27,82,40,000
ತುಮಕೂರು     1,93,18,800
ಮೈಸೂರು     ರು. 12,80,33,200
ಹಾಸನ     3,58,48,200
ರಾಮನಗರ     ರು. 78,18,550
ಚಾಮರಾಜನಗರ     5,21,48,700
ಚಿಕ್ಕಮಗಳೂರ     ರು. 58,38,400
ಚಿಕ್ಕಬಳ್ಳಾಪುರ     ರು. 10,650

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.