ಬೆಳಗಾವಿ

ಪಕ್ಷದ ಪರ ಕೆಲಸ ಮಾಡಿ

Published On :

ಅಥಣಿ:  ವ್ಯಕ್ತಿಗಿಂತ ಪಕ್ಷ ದೊಡ್ಡದು. ಟಿಕೆಟ್ ಯಾರಿಗೆ ಸಿಗುತ್ತದೆ ಮುಖ್ಯವಲ್ಲ. ಟಿಕೆಟ್ ಸಿಕ್ಕವರ ಪರವಾಗಿ ಕೆಲಸ ಮಾಡುವಂತೆ ಮಾಜಿ ರಾಜ್ಯ ಯುವ ಕಾಂಗ್ರೆಸ್ ಸಂಘಟನಾ ಪ್ರ. ಕಾರ್ಯದರ್ಶಿ ಅನಿಲ ಸುಣದೋಳಿ ಮತ್ತು ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಸುನೀಲ ಸಂಕ ಸಲಹೆ ನೀಡಿದ್ದಾರೆ. ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚುನಾವಣೆ ಪೂರ್ವ ಚಿಂತನಾ ಸಭೆ ನಡೆಸಲು ಗ್ರಾಮಗಳಿಗೆ ಹೋಗುವ ಮೊದಲು ವರದಿಗಾರರೊಂದಿಗೆ ಅವರು ಮಾತನಾಡಿದರು. ಬರುವ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಎರಡು ಮತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಜನತೆ ಬಿಜೆಪಿ ವಿರುದ್ದ ರೋಷಿ ಹೋಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ನೀರು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಅದಕ್ಕಾಗಿ ಈ ಬಾರೀ ಜನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಹಾಯವಾಣಿ ಆರಂಭ
ಅಥಣಿ:  ವಿಧಾನ ಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಮತದಾರರು ಚುನಾವಣೆಯ ವಿಷಯದ ಬಗ್ಗೆ ಮಾಹಿತಿ ಪಡೆಯಲು, ದೂರುಗಳನ್ನು ಸಲ್ಲಿಸುವದಕ್ಕಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ. ದಿನದ 24 ಗಂಟೆ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ. ದೂರು ಸಲ್ಲಿಸುವರು ಈ ಕೆಳಗಿನ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ತಹಸೀಲ್ದಾರ ಜಿ.ಆರ್.ಶೀಲವಂತ ತಿಳಿಸಿದ್ದಾರೆ. ಮಾಹಿತಿಗೆ 08289-294058 ವಿ.ಟಿ. ಕನಾಳ, ಎಸ್.ಎಸ್. ಬಿರಾದಾರ, ಎಸ್.ಎಸ್. ಅಗ್ನೆಪ್ಪಗೋಳ, ಮೊ. 8152887470, ಎಂ.ಎ. ಹೊನ್ನೂಟಗಿ, ಆರ್.ಡಿ. ಶೇಖ, ಡಿ.ಎಸ್. ಬೋಬಡೆ 08289-294057. ಇಲ್ಲಿಗೆ ಸಂಪರ್ಕಿಸಿ.
ಪ್ರಬಂಧ ಸ್ಪರ್ಧೆ
ಬೆಳಗಾವಿ:  ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಕಡ್ಡಾಂು ಮತದಾನದ ಕುರಿತು ಅರಿವು ಮೂಡಿಸಲು ಪ್ರೌಢ ಶಾಲಾ ಮಕ್ಕಳಿಗೆ “®ÚÃeÛ®ÚúÚß}ÚÊ¥ÚÆÇ ಮತದಾರರ ಪಾತ್ರ ಹಾಗೂ OÚ}Ú%ÈÚÀ’  ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಕನ್ನಡ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಂುಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಮನೀಷ್ ಮೌದ್ಗಿಲ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ವಿ. ಶಂಕರ ತಿಳಿಸಿದ್ದಾರೆ.  ಪ್ರಬಂಧ ಸ್ಪರ್ಧೆಂುಲ್ಲಿ 8 ರಿಂದ 10 ನೇ ತರಗತಿಂುಲ್ಲಿ ಓದುತ್ತಿರುವ ವಿದ್ಯಾರ್ಥಿಗಳು  ಭಾಗವಹಿಸಬಹುದು. ಪ್ರತಿಂೊಂದು ಪ್ರೌಢಶಾಲೆಂು ಮುಖ್ಯಾಧ್ಯಾಪಕರು ಏ. 5ರೊಳಗೆ ಈ ಸ್ಪರ್ಧೆ ಏರ್ಪಡಿಸಿ, ಏ. 8 ರೊಳಗಾಗಿ ಪ್ರತಿ ಶಾಲೆಯಿಂದ ಪ್ರಥಮ ಬಹುಮಾನ ಪಡೆದ 3 ಭಾಷೆಗಳ ಓರ್ವ ವಿದ್ಯಾರ್ಥಿಂು ಹೆಸರನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲೂಕಿನ ಪ್ರತಿಂೊಂದು ಭಾಷೆಂುಲ್ಲಿ ಪ್ರಥಮ, ದ್ವಿತೀಂು ಹಾಗೂ ತೃತೀಂು ಬಹುಮಾನ ಪಡೆದ ಪ್ರಬಂಧಗಳನ್ನು ಆಂ್ಕು ಮಾಡಿದ ಯಾದಿಯನ್ನು 11 ರೊಳಗೆ ಜಿಲ್ಲಾ ಮಟ್ಟದ ಸ್ಪರ್ಧೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನೀಡಬೇಕು. ಅನಂತರ ಉಪನಿರ್ದೇಶಕರು ಏ.16 ರೊಳಗಾಗಿ ತಾಲೂಕುಗಳಿಂದ ಬಂದ ಎಲ್ಲ ಪ್ರಬಂಧಗಳ ಮೌಲ್ಯಮಾಪನ ಮಾಡಿ ಈ 3 ಭಾಷೆಗಳಲ್ಲಿ ಪ್ರತ್ಯೇಕವಾಗಿ ಪ್ರಥಮ, ದ್ವಿತಿಯ, ತೃತಿಂು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಂ್ಕು ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಆ.15 ರಂದು ಬಹುಮಾನ ವಿತರಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.